Bank Holiday: ರಾಮನವಮಿ ಪ್ರಯುಕ್ತ ವಾರಾಂತ್ಯದಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ
ಇದೆ ವಾರ ದೇಶದ ವಿವಿಧ ನಗರಗಳಲ್ಲಿ ಬ್ಯಾಂಕ್‌ಗಳಿಗೆ ನಾಲ್ಕು ದಿನಗಳ ರಜೆ ಇರುವ ಸಾದ್ಯತೆ ಇದೆ. ಆದರೆ ಈ ನಾಲ್ಕು ದಿನಗಳಲ್ಲಿ ಯಾವುದು ರಾಷ್ಟ್ರೀಯ ರಜಾದಿನಗಳು ಆಗಿರುವುದಿಲ್ಲಾ. ಮಾರ್ಚ್ 26 ರಿಂದ ಮಾರ್ಚ್ 29ರ ವರೆಗೆ ಹಲವಾರು ಪ್ರಾದೇಶಿಕ ಹಬ್ಬಗಳು ಮತ್ತು ವಾರಾಂತ್ಯದಲ್ಲಿ ಬ್ಯಾಂಕ್ ರಜಾದಿನಗಳ ಕಾರಣದಿಂದ ಬ್ಯಾಂಕ್ ಶಾಖೆಗಳು ಕಾರ್ಯ ನಿರ್ವವಹಿಸುವುದಿಲ್ಲಾ.
ಆದರೆ ಗ್ರಾಹಕರು ಆತಂಕ ಪಡಬೇಕಿಲ್ಲಾ, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ಶಾಖೆಗಳು ಮಾತ್ರ ರಜಾದಿನಗಳು ಆಗಿದ್ದರಿಂದ ಮುಚ್ಚಿರುತ್ತವೆ.

ಮಾರ್ಚ್ 26 ರಾಮನವಮಿ ರಜೆ
ಶ್ರೀ ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಅಹಮದಾಬಾದ್, ಐಜ್ವಾಲ್, ಬೇಲಾಪುರ, ಚಂಡೀಗಢ, ಡೆಹ್ರಾಡೂನ್, ಜೈಪುರ, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ರಾಂಚಿ ಹಾಗೂ ಶಿಮ್ಲಾ ವಿವಿಧ ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಮಾರ್ಚ್ 27 ಪ್ರಾದೇಶಿಕ ಹಬ್ಬಗಳ ಪರಿಣಾಮ
ಶ್ರೀ ರಾಮನವಮಿ (ಚೈತೆ ದಾಸೈನ್) ಹಬ್ಬದ ಹಿನ್ನೆಲೆಯಲ್ಲಿ ಭೋಪಾಲ್, ಭುವನೇಶ್ವರ, ಗ್ಯಾಂಗ್ಟಾಕ್, ಹೈದರಾಬಾದ್, ಪಾಟ್ನಾ ಮತ್ತು ವಿಜಯವಾಡದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಮಾರ್ಚ್ 28 ತಿಂಗಳ ನಾಲ್ಕನೇ ಶನಿವಾರ
ಪ್ರತಿ ತಿಂಗಳ ನಾಲ್ಕನೇ ಶನಿವಾರ ಆಗಿದ್ದರಿಂದ ಈ ದಿನವೂ ದೇಶದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಮಾರ್ಚ್ 29 ಭಾನುವಾರ ರಜೆ
ಮಾರ್ಚ್ 29 ಭಾನುವಾರ ಆಗಿದ್ದರಿಂದ ದೇಶದಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ.
ಹಿಂದಿನ ವಾರದ ರಜೆಗಳ ವಿವರ
ಯುಗಾದಿ ಹಬ್ಬದ ರಜೆ ಇದ್ದ ರಾಜ್ಯಗಳು
ಯುಗಾದಿ (ಮಾರ್ಚ್ 19) ಹಬ್ಬದ ಪ್ರಯುಕ್ತ ಈ ರಾಜ್ಯಗಳಲ್ಲಿ ಬ್ಯಾಂಕ್ ಸಾರ್ವಜನಿಕ ರಜೆ ಪ್ರಮುಖವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಾಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಶಾಖೆಗಳು ಮುಚ್ಚಲ್ಪಟ್ಟಿದ್ದವು.
ರಂಜಾನ್(ಮಾರ್ಚ್ 21) ಖುತುಬ್-ಎ-ರಂಜಾನ್ ಹಬ್ಬವನ್ನು ಆಚರಿಸಲು ಅಸ್ಸಾಂ, ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಚಂಡೀಗಢ, ತಮಿಳುನಾಡು, ಉತ್ತರಾಖಂಡ, ಸಿಕ್ಕಿಂ, ಮಣಿಪುರ, ಕೇರಳ, ಅರುಣಾಚಲ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ, ದೆಹಲಿ, ಗೋವಾ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಮೇಘಾಲಯ, ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿದ್ದವು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ ಪಟ್ಟಿಯನ್ನು ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುವ ದಿನಗಳನ್ನು ಮತ್ತು ರಾಜ್ಯಗಳ ಸಂಪೂರ್ಣ ವಿವರವನ್ನು ಆಯಾ ಶಾಖೆಗಳಿಗೆ ನೀಡಿರುತ್ತದೆ. ಇದಲ್ಲದೆ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳು ಸತತವಾಗಿ ಮುಚ್ಚಲಾಗುವುದಿಲ್ಲ ಎಂಬುದು ನೀವು ಗಮನಿಸಬಹುದಾಗಿದೆ. ವಿವಿಧ ರಾಜ್ಯಗಳು ಹಬ್ಬವನ್ನು ಆಚರಿಸುವ ಪ್ರಯುಕ್ತ ಮುಚ್ಚಲಾಗಿರುತ್ತವೆ. ಆದ್ದರಿಂದ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಮೊದಲು ತಮ್ಮ ನಗರದಲ್ಲಿರುವ ರಜಾದಿನಗಳನ್ನು ಪರಿಶೀಲಿಸುವುದು ಉತ್ತಮ.












Click it and Unblock the Notifications