ಪದಚ್ಯುತ ಪ್ರಧಾನಿ ಮೇಲಿನ ಆರೋಪ ಸಾಬೀತು: ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ಮಾನವ ಹಕ್ಕು ಉಲ್ಲಂಘಿಸಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಮೇಲಿನ ಆರೋಪಗಳು ಸಾಬೀತಾಗಿವೆ. ಮಾನವೀಯತೆ ವಿರುದ್ಧದ ಅವರ ನಿರ್ಧಾರಗಳು ಇಂದು ಅವರಿಗೆ ಮುಳ್ಳಾಗಿವೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT BD) ದೋಷಿ ಎಂದಿದೆ. ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಬಾಂಗ್ಲಾದಲ್ಲಿ ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ವ್ಯಾಪಕವಾಗಿ ದಂಗೆಗಳು ಭುಗಿಲೆದ್ದಿದ್ದವು. ಈ ದಂಗೆ ಮೇಲಿನ ದಮನ, ತಡೆಯಲು ನೇರವಾಗಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸೂಚನೆ ನೀಡಿದ್ದರು. ಅವರ ಮುಂದಾಳತ್ವ, ಅರಿವು ಸೂಚನೆ ಮೇರೆಗೆ ಸಾಕಷ್ಟು ಹಿಂಸಾಚಾರ ನಡೆಯಿತು. ನೂರಾರು ಪ್ರಜೆಗಳು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಗಳನ್ನು ಹೊತ್ತಿದ್ದ ಹಸೀನಾಗೆ ಕೊನೆಗೂ ಶಿಕ್ಷೆ ಪ್ರಕಟವಾಗಿದೆ.

ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT BD) ತ್ರಿಸದಸ್ಯ ಪೀಠವು ಈ ಪ್ರಕರಣವನ್ನು ತಿಂಗಳುಗಳ ಕಾಲ ವಿಚಾರಣೆ ನಡೆಸಿತು. ಅವರ ಅಪರಾಧ ಸಾಭೀತಾಗಿದ್ದು, ಗರಿಷ್ಠ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ. ಶಿಕ್ಷೆ ಆದೇಶ ನೋಡಿದ ಜನರು ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶೇಖ್ ಹಸೀನಾ ಮಾತ್ರವಲ್ಲದೇ ಅವರ ಆಪ್ತರಾದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಹಾಗೂ ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರನ್ನೂ ಪ್ರಕರಣದಲ್ಲಿ ಕೋರ್ಟ್ ದೋಷಿ ಎಂದು ಉಲ್ಲೇಖಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ ಏನು?
2024ರ ಜುಲೈನಲ್ಲಿ ದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ಇದೇ ಶೇಖ್ ಹಸೀನಾ ಅವರು ಹತ್ತಿಕ್ಕಲು ಆದೇಶ ನೀಡಿದ್ದರು. ಭದ್ರತಾ ಪಡೆಗೆ ಅತೀಯಾದ ಬಲ ಪ್ರಯೋಗಕ್ಕೆ ಸೂಚನೆ ನೀಡಿದ್ದರಿಂದ ಹಿಂಸಾಚಾರಗಳೂ ನಡೆದವು. ಈ ವೇಳೆ ಅನೇಕ ವಿದ್ಯಾರ್ಥಿಗಳು, ನಾಗರಿಕರು ಪ್ರಾಣಬಿಟ್ಟರು. ಇದು ವಿಶ್ವವ್ಯಾಪಿ ಆಕ್ರೋಶಕ್ಕೆ ಕಾರಣವಾಗಿಯಿತು. ವಿಚಾರಣೆಯಲ್ಲೂ ಸಹ ಶೇಖ್ ಹಸೀನಾ ಅವರ ಪಾತ್ರ ಇರುವುದನ್ನು ತನಿಖಾಧಿಕಾರಿಗಳು ಬಯಲು ಮಾಡಿದ್ದಾರೆ. ಮಾನವೀಯತೆ ವಿರುದ್ಧ ಅವರು ಮಾಡಿದ ಅಪರಾಧ ಸಾಬೀತಾಗುದೆ. ವಿಚಾರಣೆ ಪೂರ್ಣಗೊಂಡಿದ್ದು, ಇದೀಗ ಶೇಖ್ ಹಸೀನಾರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.












Click it and Unblock the Notifications