ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಎಂದು ಪ್ರಕಟಿಸಲಿದೆ?
Recommended Video
ನವದೆಹಲಿ, ನವೆಂಬರ್ 08 : ದೇಶದ ಚಿತ್ತ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ. ಅಯೋಧ್ಯೆ ಪ್ರಕರಣದ ತೀರ್ಪು ಎಂದು ಪ್ರಕಟವಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ತೀರ್ಪಿನ ಹಿನ್ನಲೆಯಲ್ಲಿ ದೇಶಾದ್ಯಂತ ಬದೋಬಸ್ತ್ ಕೈಗೊಳ್ಳಲಾಗುತ್ತಿದೆ.
ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ತೀರ್ಪು ನವೆಂಬರ್ 17ರೊಳಗೆ ಪ್ರಕಟವಾಗಲಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜಯ್ ಗೋಗಾಯ್ ನ.17ರಂದು ನಿವೃತ್ತರಾಗಲಿದ್ದು, ಅದಕ್ಕೂ ಮೊದಲು ತೀರ್ಪು ನೀಡಲಿದ್ದಾರೆ.
ನವೆಂಬರ್ 13 ರಿಂದ 15ರೊಳಗೆ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ. ತೀರ್ಪಿನ ಹಿನ್ನಲೆಯಲ್ಲಿ ಈಗಾಗಲೇ ಉತ್ತರ ಪ್ರದೇಶದ ಅಯೋಧ್ಯೆ ಸೇರಿದಂತೆ ದೇಶಾದ್ಯಂತ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ.

ರಂಜನ್ ಗೋಗಾಯ್ ಅವರು ಶಬರಿಮಲೆ ವಿವಾದ, ರಫೆಲ್ ವಿವಾದ, ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ನೀಡಬೇಕಿದೆ. ನವೆಂಬರ್ 9ರ ಶನಿವಾರ ನ್ಯಾಯಾಲಯಕ್ಕೆ ರಜೆ ಇರುತ್ತದೆ.
ಸೋಮವಾರದಿಂದ ಶುಕ್ರವಾರದ ತನಕ ಮುಖ್ಯ ನ್ಯಾಯಮೂರ್ತಿ ರಂಜಯ್ ಗೋಗಾಯ್ ವಿವಿಧ ತೀರ್ಪುಗಳನ್ನು ನೀಡಲಿದ್ದಾರೆ. ಅಯೋಧ್ಯೆ ತೀರ್ಪಿನ ಮೇಲೆ ದೇಶ ಚಿತ್ತ ನೆಟ್ಟಿದ್ದು, ಎಂದು ತೀರ್ಪು ಬರಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ರಂಜನ್ ಗೋಗಾಯ್ ಶುಕ್ರವಾರ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಂದ ಕೈಗೊಂಡಿರುವ ಭದ್ರತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.












Click it and Unblock the Notifications