ರಾನ್ಸಮ್ವೇರ್ ಭೀತಿಗೆ ಎಟಿಎಂ ವ್ಯವಸ್ಥೆಯಲ್ಲಿ ವ್ಯತ್ಯಯ

By: ಮಾಧುರಿ ಅದ್ನಾಳ್
Subscribe to Oneindia Kannada

ನವದೆಹಲಿ, ಮೇ 15: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕುಗಳಿಗೆ ಎಟಿಂಎಂ ಸಾಫ್ಟ್ ವೇರ್ ಗಳನ್ನು ಅಪ್ಡೇಟ್ ಮಾಡುವಂತೆ ಸೂಚನೆ ನೀಡಿದೆ. ಜಗತ್ತಿನಾದ್ಯಂತ ಬ್ಯಾಂಕಿಂಗ್ ಸಿಸ್ಟಂ ಮೇಲೆ ವಾನ್ನಕ್ರೈ ರಾನ್ಸಮ್ವೇರ್ ದಾಳಿ ನಡೆದಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಮತ್ತೆ ದೇಶದಾದ್ಯಂತ ಎಟಿಎಂ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಲಿದೆ.

ಎಟಿಎಂಗಳಲ್ಲಿರುವ ವಿಂಡೋಸ್ ಸಿಸ್ಟಂಗಳನ್ನು ಅಪ್ಡೇಟ್ ಮಾಡುವಂತೆ ಆರ್ಬಿಐ ಹೇಳಿದೆ. ಅಪ್ಡೇಟ್ ಮಾಡದೇ ಎಟಿಂಎಗಳು ಕಾರ್ಯಚರಿಸುವುದು ಬೇಡ ಎಂದು ಸ್ಪಷ್ಟ ಸಂದೇಶವನ್ನು ರಿಸರ್ವ್ ಬ್ಯಾಂಕ್ ನೀಡಿದೆ.[ಸೈಬರ್ ದಾಳಿ 'ರಾನ್ಸಮ್ವೇರ್'ನಿಂದ ತಪ್ಪಿಸಿಕೊಳ್ಳುವುದು ಹೇಗೆ?]

 Avoid your ATM until RBI updates it to beat WannaCry ransomware

ದೇಶದಲ್ಲಿ ಈಗಾಗಲೇ ಹಲವು ರಾನ್ಸಮ್ವೇರ್ ದಾಳಿ ನಡೆದ ವರದಿಯಾದ ಹಿನ್ನಲೆಯಲ್ಲಿ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ರಿಸರ್ವ್ ಬ್ಯಾಂಕ್ ಹೇಳಿದೆ.[ಕೇರಳದ ವಯನಾಡು, ಕೊಲ್ಕೊತ್ತಾದಲ್ಲೂ ರಾನ್ಸಮ್ವೇರ್ ದಾಳಿ]

ಶನಿವಾರ ಹೈದರಾಬಾದ್ ಪೊಲೀಸರ 102 ಕಂಪ್ಯೂಟರ್ ಗಳು ವಾನ್ನಕ್ರೈ ದಾಳಿಗೆ ಗುರಿಯಾಗಿತ್ತು. ಇನ್ನು ನಿಸ್ಸಾನ್ ರೆನಾಲ್ಟ್ ಕಾರು ಉತ್ಪಾದನೆಯೂ ಮಾಲ್ವೇರ್ ದಾಳಿಯಿಂದ ಸ್ಥಗಿತವಾಗಿತ್ತು. ಇನ್ನು ಇಂದು ವಯನಾಡು ಹಾಗೂ ಕೊಲ್ಕೊತ್ತಾದಲ್ಲಿ ಇದೇ ರೀತಿಯ ರಾನ್ಸಮ್ವೇರ್ ದಾಳಿಗಳು ನಡೆದಿವೆ.[ರಾನ್ಸಮ್ವೇರ್ ಸೈಬರ್ ದಾಳಿಗೆ ತುತ್ತಾದ ಮೊದಲ ಕನ್ನಡಿಗ ಹಾವೇರಿಯವರು]

ದೇಶದಲ್ಲಿ ಒಟ್ಟು 2.25 ಲಕ್ಷ ಎಟಿಎಂಗಳಿದ್ದು ವರದಿಗಳ ಪ್ರಕಾರ ಶೇಕಡಾ 60 ಕಂಪ್ಯೂಟರ್ ಗಳು ಔಟ್ ಡೇಟ್ ಆದ 'ವಿಂಡೋಸ್ ಎಕ್ಸ್ ಪಿ' ಸಿಸ್ಟಂನಲ್ಲೇ ಕಾರ್ಯಚರಿಸುತ್ತಿವೆ. ಹೀಗಾಗಿ ಈ ಸಿಸ್ಟಂಗಳು ಅಪ್ಟೇಡ್ ಆಗುವವರೆಗೆ ಈ ಎಟಿಎಂಗಳು ಕಾರ್ಯಚರಿಸುವುದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Reserve Bank of India on Monday had asked all banks to put in place a software update at ATMs to protect their systems from WannaCry ransomware that has attacked payment systems across the world.
Please Wait while comments are loading...