Shares Price Drop: ಇರಾನ್-ಇಸ್ರೇಲ್ ಯುದ್ಧದಿಂದ ಈ ವೈಮಾನಿಕ ಸಂಸ್ಥೆಗಳ ಶೇರು ಮೌಲ್ಯ ಭಾರೀ ಕುಸಿತ
Iran-Israel War Effect: ಜಾಗತಿಕ ದೃಷ್ಟಿ ಇದೀಗ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮಧ್ಯದ ಯುದ್ಧದ ಮೇಲೆ ನೆಟ್ಟಿದೆ. ಯುದ್ಧ ಮುಂದುವರಿದಿದ್ದು, ನಾಗರಿಕ ವಿಮಾನಗಳ ಸಂಚಾರದ ಮೇಲೂ ದುಷ್ಪರಿಣಾಮ ಬೀರಿದೆ. ಒಂದೊಂದೇ ವಲಯಗಳ ಮೇಲೆ ಯುದ್ಧದ ಪ್ರಭಾವ ಬಿದ್ದಿದೆ. ಇದೀಗ ವೈಮಾನಿಕ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್‌ಜೆಟ್ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಷೇರುಗಳ ಮೌಲ್ಯ ತೀವ್ರವಾಗಿ ಕುಸಿದಿದೆ.
ವಾಯು ಪ್ರದೇಶಗಳು ನಿರ್ಬಂಧ
ಶನಿವಾರ ಆರಂಭದವಾದ ಯುದ್ಧ ಇಂದು ಸೋಮವಾರವು (ಮಾರ್ಚ್ 02) ಮುಂದುವರಿದಿದೆ. ಇಂಡಿಗೋದ ಮಾತೃ ಸಂಸ್ಥೆಯಾದ ಇಂಟರ್‌ಗ್ಲೋಬ್ ಏವಿಯೇಷನ್ ಮತ್ತು ಸ್ಪೈಸ್‌ಜೆಟ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳು ಹಾಗೂ ಇಕ್ಸಿಗೋ ಮತ್ತು ಈಸಿ ಟ್ರಿಪ್ ಪ್ಲಾನರ್ಸ್‌ನಂತಹ ಆನ್‌ಲೈನ್ ಪ್ರಯಾಣ ಸಂಸ್ಥೆಗಳ ಷೇರುಗಳು ಸೋಮವಾರ ಒಂದೇ ದಿನ ಶೇಕಡ 13.5ರಷ್ಟು ಕುಸಿತ ಕಂಡಿವೆ. ಇರಾನ್, ಇಸ್ರೇಲ್ ಸೇರಿ ಮಧ್ಯಪ್ರಾಚ್ಯ ದೇಶಗಳ ವಾಯು ಪ್ರದೇಶ ನಿರ್ಬಂಧಿಸಲಾಗಿದೆ. ಯಾವುದೇ ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಎಂಟು ದೇಶಗಳ ವಾಯಯಾನ ಸ್ಥಗಿತ
ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ದೊಡ್ಡ ವೈಮಾನಿಕ ಸಂಸ್ಥೆಯಾಗಿರುವ ಇಂಡಿಗೋ, ಮಧ್ಯಪ್ರಾಚ್ಯಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ ಶನಿವಾರ ರಾತ್ರಿಯೇ ವಾಯುಯಾನ ಸ್ಥಗಿತಗೊಳಿಸಿ ಪ್ರಯಾಣಿಕರಿಗೆ ಧೈರ್ಯ ತುಂಬಿದೆ. ಹೆಚ್ಚು ಪ್ರಯಾಣಿಕರು ಓಡಾಡುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇಂದ್ರವಾದ ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ ಮತ್ತು ಕತಾರ್‌ನ ದೋಹಾದಂತಹ ಪ್ರಮುಖ ಸಾರಿಗೆ ಕೇಂದ್ರಗಳು ಯುದ್ಧ ಭೀತಿಗೆ ಬಂದ್ ಆಗಿವೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧಗಳು ದಾಳಿಗಳ ನಂತರ ಹಲವು ದೇಶಗಳು, ನಗರಗಳು ವಾಯು ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಕನ್ನಡಿಗರು ದುಬೈ ಸೇರಿ ಬೇರೆ ಬೇರೆ ರಾಷ್ಟ್ರಗಳ ಏರ್‌ಪೋರ್ಟ್‌ನಲ್ಲಿ ಸಿಲುಕಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.
ಯುದ್ಧ ಶುರುವಾಗುತ್ತಿದ್ದಂತೆ ಇರಾನ್, ಇಸ್ರೇಲ್, ಇರಾಕ್, ಜೋರ್ಡಾನ್, ಕತಾರ್, ಬಹ್ರೇನ್, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಕನಿಷ್ಠ ಎಂಟು ದೇಶಗಳ ವಾಯುಯಾನವು ಸ್ಥಗಿತಗೊಂಡಿದೆ. ಈ ಬಗ್ಗೆ ಆಯಾ ವೈಮಾನಿಕ ಸಂಸ್ಥೆಗಳು ಅಧಿಕೃತ ಮಾಹಿತಿ ಘೋಷಿಸಿವೆ.












Click it and Unblock the Notifications