ದೇಶಿಯ ವಿಮಾನ ಸೇವೆ; ಮಾರ್ಗಗಳು 7 ವಿಧವಾಗಿ ವಿಂಗಡನೆ

ನವದೆಹಲಿ, ಮೇ 21 : ಲಾಕ್ ಡೌನ್ ಪರಿಣಾಮ ವಿಮಾನ ಸಂಚಾರ ದೇಶದಲ್ಲಿ ಸ್ಥಗಿತವಾಗಿದೆ. ಮೇ 25ರಿಂದ ದೇಶಿಯ ವಿಮಾನ ಸೇವೆ ಆರಂಭವಾಗಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

Recommended Video

      ದೇವಸ್ಥಾನದ ಅರ್ಚಕರಿಗೆ ಸರ್ಕಾರ ಎಷ್ಟು ಹಣ ಕೊಡ್ತಿದೆ | Srinivas poojari | Oneindia Kannada

      ದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ದೇಶಿಯ ವಿಮಾನ ಸಂಚಾರದ ಬಗ್ಗೆ ಮಾಹಿತಿಯನ್ನು ನೀಡಿದರು. "ನಾವು ಕನಿಷ್ಠ ಮತ್ತು ಗರಿಷ್ಠ ದರವನ್ನು ನಿಗದಿ ಮಾಡಿದ್ದೇವೆ. ಇದು ಮೂರು ತಿಂಗಳಿಗೆ ಅನ್ವಯವಾಗಲಿದೆ. ಆಗಸ್ಟ್ 24ರ ತನಕ ಜಾರಿಯಲ್ಲಿರಲಿದೆ" ಎಂದರು.

      ದೇಶಿಯ ವಿಮಾನಗಳ ಮಾರ್ಗವನ್ನು ಏಳು ವಿಧವಾಗಿ ವಿಂಗಡನೆ ಮಾಡಲಾಗಿದೆ. ಬೇರೆ-ಬೇರೆ ಮಾರ್ಗಕ್ಕೆ ಪ್ರತ್ಯೇಕ ದರಗಳು ಇರುತ್ತದೆ. ವಿಮಾನದಲ್ಲಿ ಪ್ರಯಾಣ ಮಾಡುವವರು 2 ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದೆ.

      Domestic Flight Service From May 25 Routes Classified Into 7 Parts

      ವಿಮಾನ ನಿಲ್ದಾಣ ಮತ್ತು ಕ್ಯಾಬಿನ್‌ನಲ್ಲಿನ ಸಿಬ್ಬಂದಿ ಸುರಕ್ಷತೆಗೂ ಗಮನಕೊಡಲಾಗಿದೆ. ಕೇವಲ ಒಂದು ಚೆಕ್ ಇನ್ ಬ್ಯಾಗ್ ಮಾತ್ರ ತರಬಹುದಾಗಿದೆ. ಪ್ರಯಾಣಿಕರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಈಗಾಗಲೇ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದೆ.

      ದೇಶಿಯ ವಿಮಾನದ ಮಾರ್ಗವನ್ನು 40 ನಿಮಿಷಕ್ಕಿಂತ ಕಡಿಮೆ, 40 ರಿಂದ 60 ನಿಮಿಷ, 60 ರಿಂದ 90, 90 ರಿಂದ 120, 120 ರಿಂದ 150, 150 ರಿಂದ 180, 180 ರಿಂದ 210 ಎಂದು ವಿಂಗಡನೆ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+