ಆಟೋ ಚಾಲಕನ ಮಗಳ ಸಾಧನೆಗೆ ಸಲಾಂ.. ಸಾವಿರಾರು ಮಕ್ಕಳು, ಯುವತಿಯರ ಬದುಕಿಗೆ ಬೆಳಕಾದ ಅರ್ಚನಾ..

Inspiring Success Story: ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಬಹುತೇಕ ಮಂದಿ ಸ್ವಂತದವರ ಕಷ್ಟಕ್ಕೆ ಆಗುವುದು ಬಲು ಅಪರೂಪದಲ್ಲಿ ಅಪರೂಪ.. ಅಂತಹದ್ದರಲ್ಲಿ ಇಲೊಬ್ಬ ಆಟೋ ಚಾಲಕನ ಮಗಳು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು ಹಾಗೂ ಉದ್ಯೋಗವಿಲ್ಲದೆ ಕಷ್ಟಪಡುತ್ತಿರುವ ಯುವತಿಯರಿಗೆ ನರವಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಬಡತನ ಮತ್ತು ಸರಿಯಾದ ಮಾರ್ಗದರ್ಶನವಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಹಾಗೂ ಉದ್ಯೋಗವಿಲ್ಲದೆ ಕಷ್ಟಪಡುತ್ತಿರುವ ಗ್ರಾಮೀಣ ಯುವತಿಯರಿಗೆ ಅರ್ಚನಾ ಜೈಸ್ವಾಲ್ ಎಂಬುವರು 'ಶಿಕ್ಷಾ ಸಾಥಿ' ಎಂಬ ತಮ್ಮ ಸ್ಟಾರ್ಟ್‌ಅಪ್ ಮೂಲಕ ಹೊಸ ಆಶಾಕಿರಣವಾಗಿದ್ದಾರೆ.

Auto Driver Daughter Archana Jaiswal Empowers Rural Girls Through Shiksha Saathi Huge Viral

ತಂದೆಯ ಬದುಕೇ ಸ್ಫೂರ್ತಿ ಎಂದ ಅರ್ಚಾನಾ

ಅರ್ಚನಾ ಅವರ ತಂದೆ ಜಗದೀಶ್ ರಾಮ್, ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತೀವ್ರ ಬಡತನದಲ್ಲಿದ್ದರು. ಕುಟುಂಬದ ನಿರ್ವಹಣೆಗಾಗಿ 17ನೇ ವಯಸ್ಸಿನಲ್ಲಿ ರಿಕ್ಷಾ ಓಡಿಸಲು ಆರಂಭಿಸಿದರು. ಆದರೂ ಶಿಕ್ಷಣವನ್ನು ಕೈಬಿಡದ ಅವರು, ರಿಕ್ಷಾ ಚಲಾಯಿಸುತ್ತಲೇ ಪದವಿ ಪೂರ್ಣಗೊಳಿಸಿದರು. ನಂತರ ಪರಿಶ್ರಮದಿಂದ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ತಮ್ಮ ಕುಟುಂಬದ ಭವಿಷ್ಯವನ್ನೇ ಬದಲಾಯಿಸಿದರು. 'ಶಿಕ್ಷಣವು ಒಂದು ಕುಟುಂಬದ ಪರಿಸ್ಥಿತಿಯನ್ನೇ ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ನನ್ನ ತಂದೆಯ ಬದುಕೇ ಸಾಕ್ಷಿ,' ಎಂದು ಅರ್ಚನಾ ಹೇಳಿದ್ದಾರೆ.

ಶಿಕ್ಷಾ ಸಾಥಿ ಆರಂಭವಾಗಿದ್ದು ಯಾವಾಗ?

ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಚನಾ, ತಮ್ಮ ಗ್ರಾಮದ ಮಕ್ಕಳು ಶಾಲೆಗೆ ಹೋದರೂ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಹಾಗೂ ಕಲಿಯಲು ಕಷ್ಟಪಡುತ್ತಿರುವುದನ್ನು ಗಮನಿಸಿದರು. ಮತ್ತೊಂದೆಡೆ, ಉನ್ನತ ಶಿಕ್ಷಣ ಪಡೆದ ಗ್ರಾಮೀಣ ಯುವತಿಯರಿಗೆ ಸ್ಥಳೀಯವಾಗಿ ಕೆಲಸದ ಅವಕಾಶಗಳಿರಲಿಲ್ಲ. ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅರ್ಚನಾ 2022ರಲ್ಲಿ ಪ್ರಾರಂಭಿಸಿದ ಯೋಜನೆಯೇ 2023ರಲ್ಲಿ 'ಶಿಕ್ಷಾ ಸಾಥಿ'ಯಾಗಿ ನೋಂದಾಯಿಸಲ್ಪಟ್ಟಿತು.

ಕಡಿಮೆ ಶುಲ್ಕದಲ್ಲಿ ತರಬೇತಿ ಹಾಗೂ ಉದ್ಯೋಗಾವಕಾಶ

'ಶಿಕ್ಷಾ ಸಾಥಿ'ಯ ಮೂಲ ಉದ್ದೇಶ ನಗರದ ಗುಣಮಟ್ಟದ ಶಿಕ್ಷಣವನ್ನು ಹಳ್ಳಿಗಳ ಹೊಸ್ತಿಲಿಗೆ ತರುವುದು. 1ರಿಂದ 12ನೇ ತರಗತಿಯ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ (ತಿಂಗಳಿಗೆ ₹100 ರಿಂದ ₹600) ಶಾಲೆಯ ನಂತರದ ಕೋಚಿಂಗ್ ನೀಡಲಾಗುತ್ತದೆ. ಶುಲ್ಕ ನೀಡಲು ಸಾಧ್ಯವಾಗದ ಬಡ ಮಕ್ಕಳಿಗೂ ಇಲ್ಲಿ ಉಚಿತ ಪ್ರವೇಶವಿದೆ.

ಕೇವಲ ಮಕ್ಕಳಿಗೆ ಪಾಠ ಮಾಡುವುದಷ್ಟೇ ಅಲ್ಲದೆ, ಗ್ರಾಮೀಣ ಮಹಿಳೆಯರು ಮತ್ತು ಯುವತಿಯರಿಗೆ ಆರು ತಿಂಗಳ ಬೋಧನಾ ತರಬೇತಿ ನೀಡಲಾಗುತ್ತದೆ. ಇದರಿಂದ ಅವರು ತಮ್ಮ ಸ್ವಂತ ಗ್ರಾಮಗಳಲ್ಲೇ ಶಿಕ್ಷಕಿಯರಾಗಿ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ಉದಾಹರಣೆಗೆ 19 ವರ್ಷದ ನೀತು ಎಂಬ ಯುವತಿ ಈಗ ಶಿಕ್ಷಕಿಯಾಗಿ ತಿಂಗಳಿಗೆ ₹6,000 ರಿಂದ ₹7,000 ಗಳಿಸುತ್ತಿದ್ದು, ತಮ್ಮ ಸ್ವಂತ ಶಿಕ್ಷಣದ ವೆಚ್ಚವನ್ನು ತಾವೇ ಭರಿಸುತ್ತಿದ್ದಾರೆ.

ಪ್ರಸ್ತುತ ಉತ್ತರ ಪ್ರದೇಶದ ಭದೋಹಿ, ವಾರಣಾಸಿ, ಮಿರ್ಜಾಪುರ, ಪ್ರಯಾಗ್‌ರಾಜ್, ಮೌ ಮತ್ತು ಗಾಜಿಪುರ ಸೇರಿದಂತೆ 6 ಜಿಲ್ಲೆಗಳಲ್ಲಿ 'ಶಿಕ್ಷಾ ಸಾಥಿ'ಯ 78ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ. 67ಕ್ಕೂ ಹೆಚ್ಚು ಶಿಕ್ಷಕಿಯರು 7,650ಕ್ಕೂ ಹೆಚ್ಚು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಇಲ್ಲಿಯವರೆಗೆ 740ಕ್ಕೂ ಹೆಚ್ಚು ಗ್ರಾಮೀಣ ಯುವತಿಯರು ಶಿಕ್ಷಕಿಯರಾಗಿ ತರಬೇತಿ ಪಡೆದಿದ್ದಾರೆ.

ಪ್ರಾರಂಭದಲ್ಲಿ ಗ್ರಾಮಸ್ಥರಿಂದ ಸ್ವಲ್ಪ ವಿರೋಧ ವ್ಯಕ್ತವಾಗಿದ್ದರೂ, ಮಕ್ಕಳಲ್ಲಿ ಕಂಡುಬಂದ ಶೈಕ್ಷಣಿಕ ಸುಧಾರಣೆಯನ್ನು ನೋಡಿ ಈಗ ಗ್ರಾಮಸ್ಥರೇ ಕೇಂದ್ರಗಳನ್ನು ನಡೆಸಲು ಜಾಗ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಬೆಂಬಲಿಸುತ್ತಿದ್ದಾರೆ. ತಂದೆಯ ಶ್ರಮ ಮತ್ತು ಶಿಕ್ಷಣದ ಮೇಲಿದ್ದ ನಂಬಿಕೆಯನ್ನು ಅರ್ಚನಾ ಜೈಸ್ವಾಲ್ ಇಂದು ಸಾವಿರಾರು ಹಳ್ಳಿ ಮಕ್ಕಳ ಬದುಕಿನಲ್ಲಿ ಸಾಕಾರಗೊಳಿಸುತ್ತಿದ್ದಾರೆ. ಇವರು ಇವರು ಯುವಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+