Bank Holiday: ಇಂದು ಬ್ಯಾಂಕ್‌ಗಳಿಗೆ ರಜೆ ಇದೆಯೇ? ಇಲ್ಲಿದೆ ಅಪ್ಡೇಟ್ಸ್
ಹಬ್ಬಗಳು ಹಾಗೂ ಇತರ ಕಾರಣಗಳಿಂದಾಗಿ ಬ್ಯಾಂಕ್‌ಗಳಿಗೆ ಆಗಾಗ ರಜೆ ಘೋಷಣೆ ಆಗುತ್ತದೆ. ಆಗಸ್ಟ್ ಅಂತ್ಯಗೊಳ್ಳುತ್ತಿದೆ. ಗ್ರಾಹಕರು ಈ ಕಾರಣದಿಂದ ಆಗಸ್ಟ್ 20ರಂದು ಬುಧವಾರ ದೇಶಾದ್ಯಂತ ಬ್ಯಾಂಕ್ ರಜೆ ಇರುತ್ತದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ತಿಂಗಳಿನಿಂದ ಹಲವು ಸಾರ್ವಜನಿಕ ರಜಾದಿನ ಹಾಗೂ ಪ್ರಾದೇಶಿಕ ಆಚರಣೆ ಕಾರಣಕ್ಕೆ ಬ್ಯಾಂಕ್ ಗಳು ಮುಚ್ಚಿರುತ್ತವೆ. ಇದರಿಂದ ಬ್ಯಾಂಕಿಂಗ್ ಹಣಕಾಸು ಸೇವೆಯಲ್ಲಿ ವ್ಯತ್ಯಯವಾಗುತ್ತವೆ. ಹೀಗಾಗಿ ಜನರಿಗೆ ನಾಳೆ ರಜೆ ಇರುತ್ತಾ? ಇಲ್ಲವೇ? ಎಂಬುದರ ಮೇಲೆ ಕುತೂಹಲ ಹೆಚ್ಚಿರುತ್ತದೆ.
2025 ಆಗಸ್ಟ್ 20 ಭಾರತದಲ್ಲಿ ಬ್ಯಾಂಕ್ ರಜಾದಿನ ಅಲ್ಲ. ಆದರೆ ಕೆಲವು ರಾಜ್ಯಗಳಲ್ಲಿ ಬುಧವಾರ ಬ್ಯಾಂಕ್‌ಗಳಿಗೆ ರಜೆ ಇದೆ. ಪ್ರತಿ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಕ್ಯಾಲೆಂಡರ್ ಪ್ರಕಾರ ರಜೆ ನೀಡಲಾಗುತ್ತದೆ. ಅದರ ಪ್ರಕಾರ, ಅಂದರೆ ಭಾರತದ ಮಟ್ಟದಲ್ಲಿ ಬ್ಯಾಂಕ್‌ಗೆ ರಜೆ ಇಲ್ಲ. ಇನ್ನೂ ಸ್ಥಳೀಯ ಆಚರಣೆಗೆ ಸಂಬಂಧ ಪಟ್ಟದಂತೆ ಒಂದಷ್ಟು ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಆದ್ದರಿಂದ ಹಣಕಾಸು, ವ್ಯಾಪಾರ ವಹೀವಾಟು ನಡೆಸುವವರಿಗೆ ಡಿಜಿಟಲ್ ಸೇವೆ ಮಾತ್ರವೇ ಲಭ್ಯ ಇರುತ್ತದೆ.

ಆಗಸ್ಟ್ 20 ರಂದು ಬ್ಯಾಂಕ್‌ಗಳ ರಜೆ, ಪಟ್ಟಿ
* ಮಹಾರಾಷ್ಟ್ರದಲ್ಲಿ ಬ್ಯಾಂಕ್‌ಗಳಿಗೆ ರಜೆ: ಈ ರಾಜ್ಯದಲ್ಲಿ ಆಗಸ್ಟ್ 20ರ ಬುಧವಾರ ಪ್ರಾದೇಶಿಕ ಆಚರಣೆಯಾಗಿ ವಿದರ್ಭ ದಿನಕ್ಕಾಗಿ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಇದು ರಾಜ್ಯ ರಜಾ ದಿನವಲ್ಲ. ಆದರೆ ಇಲ್ಲಿನ ನಾಗ್ಪುರ ಮತ್ತು ಅಮರಾವತಿ ಭಾಗಗಳಲ್ಲಿ ಸ್ಥಳೀಯ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ.
* ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ: ಈ ರಾಜ್ಯದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ರವೀಂದ್ರ ನಾಥ ಟ್ಯಾಗೋರ್ ಜಯಂತಿ ಪ್ರಯುಕ್ತ ಕೋಲ್ಕತ್ತಾ ಪ್ರದೇಶದ ಸ್ಥಳೀಯ ಬ್ಯಾಂಕುಗಳು ಬುಧವಾರ ಮುಚ್ಚಲಿವೆ.
* ಒಡಿಶಾ ರಾಜ್ಯದಲ್ಲಿ ಬ್ಯಾಂಕ್ ರಜೆ ಇರಲಿದೆ. ಹೌದು, ಈ ರಾಜ್ಯದಲ್ಲಿ ಸ್ಥಳೀಯ ರಾಜ ಪರ್ಬದ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಹೀಗಾಗಿ ಇಂದು ಆಗಸ್ಟ್ 20 ರಂದು ಇಲ್ಲಿನ ಬ್ಯಾಂಕುಗಳು ಮುಚ್ಚಲಿವೆ.
* ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ರಜೆ: ಕಣಿವೆ ರಾಜ್ಯದಲ್ಲಿ ಇಂದು ಮುಸ್ಲಿಮರಿಗೆ ಶಬ್-ಇ-ಖದರ್ ಎಂಬ ಹಬ್ಬ ಆಚರಿಸುತ್ತಾರೆ. ಈ ಭಾಗದಲ್ಲಿ ಮಹತ್ವದ ಹಬ್ಬ ಇದಾಗಿದೆ. ಇಂದು ಇಲ್ಲಿನ ಬ್ಯಾಂಕ್‌ಗಳಿಗೆ ಧಾರ್ಮಿಕ ರಜಾ ದಿನವಾಗಿದೆ. ಹೀಗಾಗಿ ಶ್ರೀನಗರ ಮತ್ತು ಜಮ್ಮುವಿನ ಹಲವು ಸ್ಥಳೀಯ ಬ್ಯಾಂಕ್‌ಗಳು ಬಂದ್ ಆಗಿರಲಿವೆ.
* ತಮಿಳುನಾಡು ರಾಜ್ಯದಲ್ಲಿ ಬ್ಯಾಂಕ್‌ಗಳು ಬಂದ್: ಈ ರಾಜ್ಯದಲ್ಲಿ ಆಗಸ್ಟ್ 20 ರಂದು ಬ್ಯಾಂಕ್‌ಗಳಿಗೆ ರಜೆ ಇರಲಿವೆ. ಏಕೆಂದರೆ ಚೆನ್ನೈ ಜಿಲ್ಲೆಗಳಲ್ಲಿ ಕೆಲವು ಸ್ಥಳೀಯ ಸಮುದಾಯಗಳಲ್ಲಿ ಬುಧವಾರ ಮಳೆಗಾಲದ ಹಬ್ಬ ಅಚರಿಸಲಿದ್ದಾರೆ. ಹೀಗಾಗಿ ಚೆನ್ನೈ ಸ್ಥಳೀಯ ಬ್ಯಾಂಕ್‌ಗಳು ಮುಚ್ಚಲಿವೆ. ಹಣಕಾಸು ವಹೀವಾಟು ಒಂದು ದಿನ ಸ್ಥಗಿತಗೊಳ್ಳಲಿವೆ.
ಡಿಜಿಟಲ್ ಬ್ಯಾಂಕಿಂಗ್ ಸೇವೆ ಲಭ್ಯ
ಗಮನಿಸಬೇಕಾದ ಅಂಶವೆಂದರೆ ಬ್ಯಾಂಕ್‌ಗಳು ಬಂದ್ ಆಗಿವೆ. ಆದರೆ ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಷನ್ ಸೇರಿದಂತೆ ಇತರ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಗ್ರಾಹಕರಿಗೆ ಲಭ್ಯ ಇರುತ್ತದೆ.












Click it and Unblock the Notifications