ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರೆ ಎಚ್ಚರ! ರಾತ್ರಿ ರೈಲಿನಲ್ಲಿ ಹೀಗೆ ಮಾಡಿದ್ರೆ ಹುಷಾರ್..!

|
Google Oneindia Kannada News

ನವದೆಹಲಿ, ಜನವರಿ 25: ರೈಲುಗಳಲ್ಲಿ ಪ್ರಯಾಣಿಸುವಾಗ ನಮಗೆಲ್ಲರಿಗೂ ಒಂದಲ್ಲ ಒಂದು ರೀತಿ ಇತರ ಸಹಪ್ರಯಾಣಿಕರಿಂದ ತೊಂದರೆಯಾಗುತ್ತದೆ. ಗುಂಪಿನಲ್ಲಿರುವ ಅನೇಕ ಜನರು ತಡರಾತ್ರಿಯಲ್ಲೂ ಜೋರಾಗಿ ಮಾತನಾಡುತ್ತಾರೆ. ಕೆಲ ಜನ ಮೊಬೈಲ್ ಫೋನ್‌ನಲ್ಲಿಯೇ ಹಾಡುಗಳನ್ನು ಹಾಕುತ್ತಾರೆ ಅಥವಾ ಸ್ವತ: ತಾವೇ ದೊಡ್ಡ ಧ್ವನಿಯಲ್ಲಿ ಹಾಡುಗಳನ್ನು ಹಾಡುತ್ತಾರೆ. ಕೆಲವರಿಗೆ ರಾತ್ರಿಯೂ ಲೈಟ್ ಆಫ್ ಮಾಡಲು ಕಷ್ಟವಾಗುತ್ತದೆ. ರೈಲಿನಲ್ಲಿ ತಾನು ಒಬ್ಬಂಟಿಯಾಗಿಲ್ಲ, ಇತರ ಪ್ರಯಾಣಿಕರು ಸಹ ಪ್ರಯಾಣಿಸುತ್ತಿದ್ದಾರೆ ಎಂಬುದನ್ನು ಕೆಲವರು ಮರೆತುಬಿಟ್ಟಿರುತ್ತಾರೆ. ಕೆಲವೊಮ್ಮೆ ಇದು ಜಗಳಕ್ಕೂ ಕಾರಣವಾಗುತ್ತದೆ. ಆದರೀಗ ಅಂಥ ಬುದ್ಧಿಹೀನ ಪ್ರಯಾಣಿಕರು ಜಾಗರೂಕರಾಗಿರಬೇಕು. ಯಾಕೆಂದರೆ ಇಂಥ ವರ್ತನೆಯ ಪ್ರಯಾಣಿಕರ ವಿರುದ್ಧ ರೈಲ್ವೇ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಭಾರತೀಯ ರೈಲ್ವೇ ಇದನ್ನು ಈ ವಾರದಿಂದ ಅಭಿಯಾನವಾಗಿ ಆರಂಭಿಸಬಹುದಾಗಿದೆ.

ಜೋರಾಗಿ ಹಾಡು ಕೇಳುವ ಮುನ್ನ ಕೊಂಚ ಯೋಚಿಸಿ

ಜೋರಾಗಿ ಹಾಡು ಕೇಳುವ ಮುನ್ನ ಕೊಂಚ ಯೋಚಿಸಿ

ಭಾರತೀಯ ರೈಲ್ವೇ ಇಲಾಖೆಯು ಪ್ರಯಾಣಿಕರ ಪ್ರಯಾಣವನ್ನು ಆಹ್ಲಾದಕರ ಮತ್ತು ಅನುಕೂಲಕರವಾಗಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತದೆ. ಇದರ ಅಡಿಯಲ್ಲಿ ರೈಲ್ವೆ ಕೆಲವು ಹೊಸ ನಿಯಮಗಳನ್ನು ಮಾಡಿದೆ. ಇದರಿಂದ ಪ್ರಯಾಣಿಕರು ಸುಲಭವಾಗಿ ಸಂತೋಷದ ಪ್ರಯಾಣವನ್ನು ಆನಂದಿಸಬಹುದು. ಇದೀಗ ರೈಲ್ವೇ ಇಲಾಖೆಯು ರಾತ್ರಿ ವೇಳೆ ರೈಲಿನಲ್ಲಿ ಗಲಾಟೆ ಮಾಡುವುದು, ಫೋನ್‌ನಲ್ಲಿ ಜೋರಾಗಿ ಮಾತನಾಡುವುದು ಅಥವಾ ಮೊಬೈಲ್‌ನಲ್ಲಿ ಜೋರಾಗಿ ಹಾಡುಗಳನ್ನು ಕೇಳುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇನ್ನು ಮುಂದೆ ರಾತ್ರಿ ವೇಳೆ ಗೊತ್ತಿದ್ದೋ ಅಥವಾ ತಿಳಿಯದೆಯೋ ಸಹ ಪ್ರಯಾಣಿಕರ ಪ್ರಯಾಣಕ್ಕೆ ಅಡ್ಡಿಪಡಿಸಲು ಯತ್ನಿಸುವ ಪ್ರಯಾಣಿಕರ ಮೇಲೆ ರೈಲ್ವೆ ಸಿಬ್ಬಂದಿ ನಿಗಾ ಇಡುತ್ತಾರೆ.

ಪ್ರಯಾಣಿಕರ ಮೇಲೆ ನಿಗಾ

ಪ್ರಯಾಣಿಕರ ಮೇಲೆ ನಿಗಾ

ರೈಲ್ವೆ ಸಚಿವಾಲಯವು ಪ್ರಯಾಣಿಕರು ರಾತ್ರಿಯ ಸಮಯದಲ್ಲಿ ಜೋರಾಗಿ ಮಾತನಾಡುವುದು ಅಥವಾ ಹಾಡುಗಳನ್ನು ಕೇಳುವುದು ಪ್ರಯಾಣದಲ್ಲಿ ತೊಂದರೆ ಉಂಟುಮಾಡುವ ದೂರುಗಳನ್ನು ಸ್ವೀಕರಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಅಂತಹ ಸಮಸ್ಯೆಗಳನ್ನು ನಿವಾರಿಸಲು ರೈಲ್ವೆ ತನ್ನ ಎಲ್ಲಾ ವಲಯಗಳನ್ನು ಕೇಳಿದೆ. ಅಂತಹ ಪ್ರಯಾಣಿಕರೊಂದಿಗೆ ಕಟ್ಟುನಿಟ್ಟಾಗಿ ಕ್ರಮಕ್ಕೆ ರೈಲ್ವೆ ನಿರ್ಧರಿಸಿದೆ. ಪ್ರಯಾಣಿಕರು ಇನ್ನೂ ಅಂತಹ ಸಮಸ್ಯೆಗಳನ್ನು ಎದುರಿಸಿದರೆ ಅದಕ್ಕೆ ರೈಲು ಸಿಬ್ಬಂದಿಯೇ ಹೊಣೆಯಾಗುತ್ತಾರೆ ಎಂದಿದೆ.

ಆರ್‌ಪಿಎಫ್‌ಗೆ ಜವಬ್ದಾರಿ

ಆರ್‌ಪಿಎಫ್‌ಗೆ ಜವಬ್ದಾರಿ

ರಾತ್ರಿಯಲ್ಲಿ ವಿಶ್ರಾಂತಿ ಪಡೆಯುವ ರೈಲ್ವೇ ಪ್ರಯಾಣಿಕರಿಗೆ ಇಂತಹ ಅನಾನುಕೂಲತೆಗಳು ಉಂಟಾಗದಂತೆ ನೋಡಿಕೊಳ್ಳಲು ಆರ್‌ಪಿಎಫ್, ಟಿಕೆಟ್ ತಪಾಸಣೆ ಸಿಬ್ಬಂದಿ, ಕೋಚ್ ಅಟೆಂಡೆಂಟ್‌ಗಳು, ನಿರ್ವಹಣಾ ಸಿಬ್ಬಂದಿ ಮತ್ತು ಅಡುಗೆ ಸಿಬ್ಬಂದಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಸಂಬಂಧಪಟ್ಟ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಇವರು ಜವಾಬ್ದಾರರಾಗಿರುತ್ತಾರೆ. ಪ್ರಯಾಣಿಕರು ಯಾವುದೇ ರೀತಿಯ ತೊಂದರೆಯನ್ನು ಎದುರಿಸದಂತೆ ಇವರು ನಿಗಾ ವಹಿಸಿರುತ್ತಾರೆ.

ರಾತ್ರಿ 10 ಗಂಟೆಯ ನಂತರ ಮೇಲ್ವಿಚಾರಣೆ

ರಾತ್ರಿ 10 ಗಂಟೆಯ ನಂತರ ಮೇಲ್ವಿಚಾರಣೆ

ಅಷ್ಟೇ ಅಲ್ಲ ರಾತ್ರಿ 10 ಗಂಟೆಯ ನಂತರ ಫೋಕಸ್ ಲೈಟ್ ಹೊರತುಪಡಿಸಿ ಇತರ ಲೈಟ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ. ಪ್ರಯಾಣಿಕರ ಬಗ್ಗೆ ದೂರು ನೀಡಿದ ನಂತರವೂ ಸಹ-ಪ್ರಯಾಣಿಕರು ತಮ್ಮಿಂದಾಗುವ ಇಂಥ ತೊಂದರೆಗಳನ್ನು ನಿಲ್ಲಿಸದೇ ಇದ್ದರೆ, ರೈಲ್ವೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಅಷ್ಟೇ ಅಲ್ಲ ರೈಲ್ವೆಯ ನೌಕರರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಇಂತಹ ಯಾವುದೇ ಕೃತ್ಯವನ್ನು ಮಾಡದಂತೆ ಸೂಚನೆ ನೀಡಲಾಗಿದೆ.

ರೈಲ್ವೆ ಸಿಬ್ಬಂದಿಯಿಂದ ತಕ್ಷಣ ಸಹಾಯ

ರೈಲ್ವೆ ಸಿಬ್ಬಂದಿಯಿಂದ ತಕ್ಷಣ ಸಹಾಯ

ವರದಿಗಳ ಪ್ರಕಾರ, ಪ್ರಯಾಣಿಕರಿಂದ ಬಂದ ದೂರುಗಳ ನಂತರ ಭಾರತೀಯ ರೈಲ್ವೆ ಈ ವಾರದಿಂದ ಈ ಸಮಸ್ಯೆಗಳನ್ನು ನಿವಾರಿಸಲು ಅಭಿಯಾನವನ್ನು ಪ್ರಾರಂಭಿಸಲಿದೆ. ಹಿರಿಯ ನಾಗರಿಕರು, ಒಂಟಿಯಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ಅಥವಾ ವಿಕಲಚೇತನರಿಗೆ ಪ್ರಯಾಣದ ಸಮಯದಲ್ಲಿ ಯಾವುದೇ ಸಹಾಯದ ಅಗತ್ಯವಿದ್ದಲ್ಲಿ ರೈಲ್ವೆ ಸಿಬ್ಬಂದಿಯಿಂದ ತಕ್ಷಣದ ಸಹಾಯವನ್ನು ಒದಗಿಸಲಾಗುವುದು ಎಂದು ರೈಲ್ವೆ ಖಚಿತಪಡಿಸುತ್ತದೆ.

English summary
The Department of Indian Railways has enacted a rule to facilitate rail passenger travel. Singing out loud at night, listening to loud singing, light hockey has been suggested for action against troublemakers. Train crews have been instructed to keep an eye on troubled passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X