Good News: ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: 26 ತಿಂಗಳ ವೇತನ ಹಿಂಬಾಕಿಗೆ ₹1271 ಕೋಟಿ ಅನುಮೋದನೆ, ₹450 ಕೋಟಿ ಬಿಡುಗಡೆ

ಕರ್ನಾಟಕ ಸರ್ಕಾರವು ಸಾರಿಗೆ ನೌಕರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. 1,271 ಕೋಟಿ ಹಿಂಬಾಕಿ ಬಾಕಿ ಹಣವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬಿಡುಗಡೆ ಮಾಡಿದೆ.

ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ನೌಕರರ ಹಲವು ತಿಂಗಳುಗಳಿಂದ ಈ ಬೇಡಿಕೆ ಈಡೇರಿಸುವುದಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೆ ಬಾಕಿ ವೇತನ ಬಿಡುಗಡೆ ಮಾಡುವುದಕ್ಕೆ ಆಗ್ರಹಿಸಿ ಮುಷ್ಕರವನ್ನೂ ನಡೆಸಿದ್ದರು. ಇದೀಗ ಸಾರಿಗೆ ನೌಕರರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. 36 ತಿಂಗಳ ವೇತನ ಹಿಂಬಾಕಿ, ವೇತನ ಪರಿಷ್ಕರಣೆ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಸರ್ಕಾರವು ಸಾರಿಗೆ ನೌಕರರ 26 ತಿಂಗಳ ಹಿಂಬಾಕಿ ಬಿಡುಗಡೆ ಮಾಡಿದೆ. ಈ ಮೂಲಕ ಸಾರಿಗೆ ನೌಕರರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಮೊದಲ ಕಂತಿನ ಹಿಂಬಾಕಿ ಹಣವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 450 ಕೋಟಿ ರೂ. ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

Good News

ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಅಧಿಕಾರಿ / ನೌಕರರ ವೇತನ ಪರಿಷ್ಕರಣೆ ಹಿಂಬಾಕಿ ನಿಟ್ಟಿನಲ್ಲಿ ಮಹತ್ವದ ಆದೇಶವನ್ನು ಸರ್ಕಾರ ಮಾಡಿದೆ. ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳ ಅಧಿಕಾರಿ / ನೌಕರರಿಗೆ ದಿನಾಂಕ:01.01.2021ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ.

ಸರ್ಕಾರದ ಆದೇಶದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿ/ ನೌಕರರು (ಪೂರ್ವ ಕಿಂಕೋ ನೌಕರರು ಸೇರಿದಂತೆ) ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತದ ಪಾವತಿಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ನೆರವಿನಡಿ 2026-27ನೇ ಸಾಲಿನ ಲೆಕ್ಕ ಶೀರ್ಷಿಕೆ: 3055-00-001-0-02-100ರಡಿ 62000.00ಲಕ್ಷ ರೂ.ಗಳು, ಎಸ್.ಸಿ.ಎಸ್.ಪಿ-422-ರಡಿ 21700.00 ಲಕ್ಷಗಳು ರೂ. ಮತ್ತು ಟಿ.ಎಸ್.ಪಿ- 423ರಡಿ 6300.00 ಲಕ್ಷಗಳು ಹೀಗೆ ಒಟ್ಟು 90000.00 ಲಕ್ಷಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಪ್ರಸ್ತುತ ನಾಲ್ಕು, ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾಗಿದ್ದು, ಮಾರ್ಚ್ 2026 ಮಾಹೆಯ ಅಂತ್ಯಕ್ಕೆ 7130.80 ಕೋಟಿಗಳ ಹೂಣಗಾರಿಕೆ ಕ್ರೋಢೀಕೃತವಾಗಿರುವುದರ ಹಿನ್ನೆಲೆಯಲ್ಲಿ ದಿನಾಂಕ:01.01.2021 ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ 1271.92 ಕೋಟಿಗಳನ್ನು ಸಂಸ್ಥೆಗಳ ಆಂತರಿಕ ಮೂಲಗಳಿಂದ ಪಾವತಿಸುವುದು ಕಷ್ಟ ಸಾಧ್ಯವಾಗಿರುತ್ತದೆ.

ಆದುದರಿಂದ, 2026-27ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 479ರಲ್ಲಿ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗೆ ದಿನಾಂಕ:01.03.2023ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಿದ್ದು, ಸದರಿ ಅವಧಿಯ ವೇತನ ಪರಿಷ್ಕರಣೆ ಬಾಕಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ದಿನಾಂಕ:01.01.2021 ರಿಂದ 28.02.2023 ರವರೆಗಿನ ವೇತನ ಬಾಕಿಯನ್ನು ಪಾವತಿಸಲು ನಿಶ್ಚಯಿಸಿ, ವೇತನ ಬಾಕಿ ಪಾವತಿಗಾಗಿ 1271.92 ಕೋಟಿಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ಅದರಂತ, ದಿನಾಂಕ:01.01.2021 ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳನ್ನು ಪಾವತಿಸಲು ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೋರಲಾಗಿತ್ತು.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿ/ನೌಕರರ (ಪೂರ್ವ ಕಿಂಕೋ ನೌಕರರು ಸೇರಿದಂತೆ) ದಿನಾಂಕ:01.01.2021 ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳಲ್ಲಿ ಪ್ರಸ್ತುತ ರೂ.450.00 ಕೋಟಿಗಳನ್ನು (ನಾಲ್ಕು ನೂರ ಐವತ್ತು ಕೋಟಿಗಳು ಮಾತ್ರ) ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನಿಗಮವಾರು ಬಿಡುಗಡೆಗೊಳಿಸಿ ಆದೇಶಿಸಿದೆ ಎಂದು ಕರ್ನಾಟಕ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.

Good News: ಲೆಕ್ಕ ಶೀರ್ಷಿಕೆ (ಕೋಟಿ ರೂ.ಗಳಲ್ಲಿ)

ಸಂಸ್ಥೆಗಳು ವಿಶೇಷ ನೆರವು
(3055-00-001-0-02-100)
ಎನ್.ಸಿ.ಎಸ್.ಪಿ
(3055-00-001-0-02-422)
ಟಿ.ಎಸ್.ಪಿ
(3055-00-001-0-02-423)
ಒಟ್ಟು ಬಿಡುಗಡೆ ಮೊತ್ತ
ಕ.ರಾ.ರಾ.ಸಾ.ನಿಗಮ 99.10 34.68 10.07 143.85
ಬೆಂ.ಮ.ಸಾ.ಸಂಸ್ಥೆ 94.54 33.09 9.61 137.24
ವಾ.ಕ.ರ.ಸಾ.ಸಂಸ್ಥೆ 59.93 20.98 6.09 87.00
ಕ.ಸ.ರ.ಸಾ.ನಿಗಮ 56.43 19.75 5.73 81.91
ಒಟ್ಟು 310.00 108.50 31.50 450.00
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+