ಸನಾತನ ಸಂಸ್ಥೆ ಸದಸ್ಯನ ಮನೆ ಮೇಲೆ ದಾಳಿ, 8 ಬಾಂಬ್ ವಶ
ನವದೆಹಲಿ, ಆಗಸ್ಟ್ 10: ಸನಾತನ ಸಂಸ್ಥೆಗೆ ಸೇರಿದ ಸದಸ್ಯರೊಬ್ಬನನ್ನು ಬಂಧಿಸಿ, ಆತನ ಮನೆ ಮೇಲೆ ದಾಳಿ ನಡೆಸಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವು 8 ಕಚ್ಚಾ ಬಾಂಬ್ ಗಳನ್ನು ವಶಪಡಿಸಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.
ಆದರೆ, ಆತ ಹಿಂದು ಕಾರ್ಯಕರ್ತನಲ್ಲ, ಸನಾತನ ಸಂಸ್ಥೆಗೆ ಸೇರಿದ ಸದಸ್ಯನಲ್ಲ ಎಂದು ಸನಾತನ ಸಂಸ್ಥೆ ಪರ ವಕೀಲ ಸಂಜೀವ್ ಪುನೇಲಿಕರ್ ಹೇಳಿದ್ದಾರೆ.
ಪಲ್ ಘರ್ ಜಿಲ್ಲೆಯ ನಲ್ಲಾಸೊಪಾರದ ನಿವಾಸಿಯಾಗಿರುವ ವೈಭವ್ ರೌತ್ ಎಂಬಾತ 'ಹಿಂದೂ ಗೋವಂಶ ರಕ್ಷ ಸಮಿತಿ' ಯ ಸದಸ್ಯನಾಗಿದ್ದಾನೆ. ಆತನ ಮನೆ, ಅಂಗಡಿ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತಗಳು, ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ದಾಳಿಯೊಂದು ಹಿಂದೂ ಸಂಘಟನೆಗಳ ಮೇಲೆ ದೌರ್ಜನ್ಯವಾಗಿದೆ. ಸುಳ್ಳು ಕೇಸುಗಳನ್ನು ಹಾಕಲಾಗುತ್ತದೆ. ಮಾಲೆಂಗಾವ್ ಪ್ರಕರಣದಲ್ಲಿ ಇದು ಸಾಬೀತಾಗಿದೆ. ಸನಾತನ ಸಂಸ್ಥೆಯ ಅನೇಕ ಮುಗ್ದರನ್ನು ಬಂಧಿಸಲಾಗಿದೆ ಎಂದು ಸಂಸ್ಥೆಯ ಘನಾವತ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications