ಶ್ರೀಮಂತರಿಗೆ 'ಸ್ಲಿಪ್': ಚುನಾವಣೆಗೆ ಹಣ ವಸೂಲಿ ಮಾಡುತ್ತಿದ್ದ ಅತೀಕ್ ಅಹ್ಮದ್- ಹೇಗೆ ಗೊತ್ತಾ?
ಲಕ್ನೋ ಏಪ್ರಿಲ್ 20: ಏಪ್ರಿಲ್ 15 ರ ತಡರಾತ್ರಿ ಲವಲೇಶ್ ತಿವಾಲಿ, ಶಾನಿ ಮತ್ತು ಅರುಣ್ ಡಾನ್ ಎಂಬ ಆರೋಪಿಗಳು ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ಪೊಲೀಸ್ ಹಾಗೂ ಮಾಧ್ಯಮದವರ ಮುಂದೆ ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆಯ ನಂತರ ಅತೀಕ್ ಅಹ್ಮದ್ ಆದಾಯದ ಬಗ್ಗೆ ಮಾಹಿತಿಯೊಂದು ಬಹಿರಂಗವಾಗಿದೆ. ಜೊತೆಗೆ ಹಲವು ರಹಸ್ಯಗಳು ಕೂಡ ಮುನ್ನೆಲೆಗೆ ಬರುತ್ತಿವೆ.
ಹತ್ಯೆಗೀಡಾದ ಅತಿಕ್ ಅಹಮದ್ ಚುನಾವಣಾ ತೆರಿಗೆ ಹೆಸರಿನಲ್ಲಿ ಶ್ರೀಮಂತರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಅತೀಕ್ ಅಹ್ಮದ್ ಈ ತೆರಿಗೆಯನ್ನು ನಗದು ರೂಪದಲ್ಲಿ ತೆಗೆದುಕೊಂಡಿಲ್ಲ, ಆದರೆ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಚುನಾವಣಾ ತೆರಿಗೆ ಮತ್ತು ಭೂಹಗರಣ ಅತಿಕ್ ಅಹಮದ್ ಅವರ ದೊಡ್ಡ ಆದಾಯದ ಮೂಲವಾಗಿತ್ತು. ಸುದ್ದಿ ಪ್ರಕಾರ, ಅತಿಕ್‌ನ ಈ ಚುನಾವಣಾ ತೆರಿಗೆಯ ಮೂಲಕ ಅನೇಕ ಜನರ ಬಳಿ ಅಕ್ರಮ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ಬಹುತೇಕ ಎಲ್ಲ ಶ್ರೀಮಂತರ ಬಳಿ ಈತ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಜೊತೆಗೆ ಈತ ಹಣ ವಸೂಲಿಗಾಗಿ ಸೃಷ್ಟಿಸಲಾಗಿದ್ದ ಹಳದಿ ಚೀಟಿಗಳನ್ನು ಆಸ್ಪತ್ರೆಗಳು, ಕಾರ್ಖಾನೆಗಳು ಮತ್ತು ದೊಡ್ಡ ಚಿಲ್ಲರೆ ಶೋರೂಂಗಳ ಮಾಲೀಕರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅತಿಕ್ ಅಹ್ಮದ್ ಅವರು ಚುನಾವಣೆಗೆ ಸ್ಪರ್ಧಿಸಲು ದೊಡ್ಡ ಬಿಲ್ಡರ್‌ಗಳು ಮತ್ತು ದೊಡ್ಡ ಉದ್ಯಮಿಗಳಿಂದ ಚುನಾವಣಾ ತೆರಿಗೆಯನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಪ್ರಯಾಗ್‌ರಾಜ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಉದ್ಯಮಿಗಳು ಅತೀಕ್‌ನ ಟಾರ್ಗೆಟ್‌ನಲ್ಲಿದ್ದರು. ಈ ಬಗ್ಗೆ, ಅನೇಕ ಜನರು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅತೀಕ್ ಅವರ ಬ್ಯಾಂಕ್ ಖಾತೆಗಳಿಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದ ಠೇವಣಿ ಸ್ಲಿಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಾಜಿ ಶಾಸಕ ಮತ್ತು ಸಂಸದ ಅತಿಕ್ ಅಹ್ಮದ್ ಚುನಾವಣಾ ತೆರಿಗೆ ಚೀಟಿ ಕಳುಹಿಸುವ ಮೂಲಕ ವಸೂಲಿ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಸ್ಲಿಪ್ನ ಬಣ್ಣಗಳು ವಿಭಿನ್ನ ಅರ್ಥಗಳನ್ನು ಹೊಂದಿದ್ದವು. ಅಂದರೆ, ಚೀಟಿಯ ಬಣ್ಣದ ಆಧಾರದ ಮೇಲೆ ವ್ಯಾಪಾರಿಗಳು ಅಷ್ಟು ಹಣವನ್ನು ಪಾವತಿಸಬೇಕಾಗಿತ್ತು. ಯಾರಿಗಾದರೂ ವೈಟ್ ಸ್ಲಿಪ್ ಸಿಕ್ಕಿದ್ದರೆ, ಅವರು ಚುನಾವಣಾ ತೆರಿಗೆಯಾಗಿ 3 ರಿಂದ 5 ಲಕ್ಷ ರೂಪಾಯಿ ನೀಡಬೇಕಾಗಿತ್ತು. ಹಳದಿ ಚೀಟಿ ಸ್ವೀಕರಿಸುವವರು 5 ಲಕ್ಷದಿಂದ 50 ಲಕ್ಷದವರೆಗೆ ಪಾವತಿಸಬೇಕಾಗುತ್ತಿತ್ತು.
ಅತೀಕ್ ಅಹಮದ್ 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಸ್ಪರ್ಧಿಸಿ ಗೆದ್ದಿದ್ದರು. ಅತೀಕ್ ಅಹಮದ್ ಚುನಾವಣಾ ವೆಚ್ಚದ ಹೆಸರಿನಲ್ಲಿ ಜನರಿಂದ ಸಾಕಷ್ಟು ಸುಲಿಗೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಈ ಚೀಟಿಗಳಿಂದ ತೆಗೆದ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳದೆ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದ ಎನ್ನಲಾಗುತ್ತಿದೆ.
ಈ ಅಕ್ರಮ ಸುಲಿಗೆಯ ಆಧಾರದ ಮೇಲೆ ಅತೀಕ್ ಅಹ್ಮದ್ ಅವರು ಫುಲ್ಪುರದಿಂದ ಐದು ಬಾರಿ ಶಾಸಕರಾಗಿ ಮತ್ತು ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. NBT ಸುದ್ದಿ ಪ್ರಕಾರ, ಅವರು ಚುನಾವಣಾ ಯುದ್ಧದಲ್ಲಿ ಗೆಲ್ಲಲು ಅತಿಕ್ ಮತ್ತು ಆತನ ಹಿಂಬಾಲಕರು ಚುನಾವಣೆಗೆ ತಿಂಗಳುಗಳ ಮುಂಚೆಯೇ ಸುಲಿಗೆ ಯೋಜನೆ ಆರಂಭಿಸುತ್ತಿದ್ದರು ಎಂಬ ಸತ್ಯ ಬಯಲಾಗಿದೆ.












Click it and Unblock the Notifications