ಅಸ್ಸಾಂನಲ್ಲಿ ಭೀಕರ ಅಪಘಾತ, 9 ಮಂದಿ ಸಾವು
ಗುವಾಹಟಿ, ಅ.26: ಅಸ್ಸಾಂನ ನಾಗಾಂವ್ ಬಳಿ ತೆರಳುತ್ತಿದ್ದ ಬಸ್ ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ. ಬಸ್ ನಲ್ಲಿದ್ದ ಸುಮಾರು 9 ಮಂದಿ ಸಾವನ್ನಪ್ಪಿದ್ದು, 26ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿವೆ.
ಅಸ್ಸಾಂ ಬಸ್ ದುರಂತದಲ್ಲಿ ಕರ್ನಾಟಕದ ಗದಗ್ ಮೂಲದ ಯೋಧ ಬಸವರಾಜ್(32) ಸಾವನ್ನಪ್ಪಿರುವ ಸುದ್ದಿ ಬಂದಿದೆ. ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಬಸವರಾಜ್ ಅವರು ಜೋಧ್ ಪುರದಲ್ಲಿ ಸೇನಾ ತರಬೇತಿ ಕ್ಯಾಂಪಿನಲ್ಲಿದ್ದರು.
ಅತಿಯಾದ ವೇಗದಲ್ಲಿ ಬಸ್ ಚಲಿಸುತ್ತಿತ್ತು, ತಿರುವಿನಲ್ಲಿ ಸಾಗುತ್ತಿದ್ದಾಗ ಚಾಲಕ ಬಸ್ ಮೇಲೆ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ರಸ್ತೆ ಪಕ್ಕದ ಮೋರಿಗೆ ಬಿದ್ದಿತು ಎಂದು ಗಾಯಗೊಂಡವರು ಹೇಳಿದ್ದಾರೆ.

ಲಖೀಂಪುರಕ್ಕೆ ಬಸ್ ತೆರಳುತ್ತಿತ್ತು. ಬಸ್ ನಲ್ಲಿ ಸುಮಾರು 37ಜನ ಪ್ರಯಾಣಿಸುತ್ತಿದ್ದರು. ಮೃತರ ಪೈಕಿ ಐದು ಜನ ಪುರುಷರು ಹಾಗೂ ನಾಲ್ಕು ಮಂದಿ ಮಹಿಳೆಯರಿದ್ದಾರೆ.ಗಾಯಗೊಂಡವರಲ್ಲಿ ಕೆಲ ಮಂದಿ ಸ್ಥಿತಿ ಗಂಭೀರವಾಗಿದೆ. ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ನಾಗಾಂವ್ ನ ಪೊಲೀಸರು ಹೇಳಿದ್ದಾರೆ.












Click it and Unblock the Notifications