ಯುಪಿ: ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿದ ಚುನಾವಣಾ ಆಯೋಗ
ನವದೆಹಲಿ ಫೆಬ್ರವರಿ 22: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ರ ನಾಲ್ಕನೇ ಹಂತದ ಚುನಾವಣೆಗೂ ಮುನ್ನ ಚುನಾವಣಾ ಆಯೋಗ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಮಂಗಳವಾರ ಜಿಲ್ಲಾ ಅಧಿಕಾರಿಗಳ ಪೂರ್ವಾನುಮತಿಯೊಂದಿಗೆ ರೋಡ್‌ಶೋಗಳನ್ನು ಅನುಮತಿಸುವ ಮೂಲಕ ಚುನಾವಣಾ ಪ್ರಚಾರದ ಮೇಲೆ ಹೇರಲಾಗಿದ್ದ ಕೋವಿಡ್-ಪ್ರೇರಿತ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಭೆಗಳು ಮತ್ತು ರ್‍ಯಾಲಿಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಕೇವಲ 50ರಷ್ಟು ಜಾಗವನ್ನು ಮಾತ್ರ ಬಳಸಿಕೊಳ್ಳುವ ನಿರ್ಬಂಧವನ್ನು ಸಡಿಲಿಸಲಾಗಿದೆ. ಸದ್ಯ ಉತ್ತರ ಪ್ರದೇಶ ಚುನಾವಣೆಯ ಐದು, ಆರು ಮತ್ತು ಏಳನೇ ಹಂತಗಳಿಗೆ ಪ್ರಚಾರ ನಡೆಯುತ್ತಿದೆ.
ಹೊಸ ನಿಯಮಗಳು ಯಾವುವು?
- ಚುನಾವಣಾ ಆಯೋಗ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ತಮ್ಮ ಸಭೆಗಳು ಮತ್ತು ರ್‍ಯಾಲಿಗಳನ್ನು ಎಸ್‌ಡಿಎಂಎ ನಿಯಮಗಳಿಗೆ ಒಳಪಟ್ಟು ನಡೆಸಲು ಅನುಮತಿ ನೀಡಿದೆ.
- 50ರಷ್ಟು ಜಾಗವನ್ನು ಮಾತ್ರ ಬಳಸಿಕೊಳ್ಳುವ ನಿರ್ಬಂಧವನ್ನು ಸಡಿಲಿಸಲಾಗಿದೆ.
- ಆಯೋಗವು SDMA ನಿಯಮಗಳಿಗೆ ಒಳಪಟ್ಟು ಮತ್ತು ಜಿಲ್ಲಾ ಅಧಿಕಾರಿಗಳ ಪೂರ್ವಾನುಮತಿಯೊಂದಿಗೆ ರೋಡ್ ಶೋಗಳನ್ನು ಸಹ ಅನುಮತಿಸಿದೆ.
ಯುಪಿ: ಫೆ. 23 ರಂದು 4 ನೇ ಹಂತದ ಮತದಾನ- ಅಂಕಿ ಅಂಶ
"ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಎಲ್ಲಾ ನಿಬಂಧನೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ" ಎಂದು ಆಯೋಗವು ಅಧಿಕೃತ ಆದೇಶದಲ್ಲಿ ತಿಳಿಸಿದೆ.













Click it and Unblock the Notifications