Gridge Murder: ಪತಿ, ಅತ್ತೆಯನ್ನು ಕೊಂದು ಫ್ರಿಡ್ಜ್‌ನಲ್ಲಿ ದೇಹದ ಭಾಗಗಳನ್ನು ಬಚ್ಚಿಟ್ಟ ಅಸ್ಸಾಂ ಮಹಿಳೆ!
ಪತಿ ಮತ್ತು ಅತ್ತೆಯನ್ನು ಕೊಂದು ಕೊಂದು ಫ್ರಿಡ್ಜ್‌ನಲ್ಲಿ ದೇಹದ ಭಾಗಗಳನ್ನು ಬಚ್ಚಿಟ್ಟಿದ್ದ ಅಸ್ಸಾಂನ ಮಹಿಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಗುವಾಹಟಿ ಫೆಬ್ರವರಿ 20: ದೇಶದಲ್ಲಿ ಫ್ರಿಡ್ಜ್ ಹತ್ಯೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ದೆಹಲಿಯ ಶ್ರದ್ಧಾ ವಾಕರ್ ಹಾಗೂ ಇತ್ತೀಚೆಗೆ ನಿಕ್ಕಿ ಯಾದವ್ ಪ್ರಕರಣ ಮಾಸುವ ಮುನ್ನವೇ ಅಸ್ಸಾಂನ ಮಹಿಳೆಯೊಬ್ಬಳು ಪತಿ ಮತ್ತು ಅತ್ತೆಯನ್ನು ಕೊಂದಿದ್ದಾಳೆ. ಈ ಘಟನೆಗಳು ನಿಜಕ್ಕೂ ಕಾನೂನಿನ ಬಗ್ಗೆ ಇರುವ ಅಭಯವನ್ನು ಎತ್ತಿ ತೋರಿಸುತ್ತವೆ.
ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು ಅವರ ದೇಹಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿರುವ ಘಟನೆ ಅಸ್ಸಾಂನ ನೂನ್‌ಮತಿಯಲ್ಲಿ ನಡೆದಿದೆ. ವಂದನಾ ಕಲಿತಾ ಎಂಬ ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದರಿಂದಾಗಿ ಹತ್ಯೆ ಮಾಡಿದ್ದಾಳೆಂದು ಶಂಕಿಸಲಾಗಿದೆ.
ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು ಕೊಂದ ಮೂರು ದಿನಗಳ ನಂತರ, ವಂದನಾ ಕಲಿತಾ ಮತ್ತು ಆಕೆಯ ಪ್ರಿಯಕರ ದೇಹದ ಭಾಗಗಳನ್ನು ಗುವಾಹಟಿಯಿಂದ 150 ಕಿಮೀ ದೂರದಲ್ಲಿರುವ ನೆರೆಯ ಮೇಘಾಲಯದ ಚಿರಾಪುಂಜಿಗೆ ಕೊಂಡೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಇಬ್ಬರು ದೇಹದ ಭಾಗಗಳನ್ನು ಎಸೆದಿದ್ದಾರೆ. ಬಳಿಕ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾರೆ.

ತನಿಖೆ ವೇಳೆ ವಂದನಾ ಕಲಿತಾ ಅಸ್ಸಾಂನಿಂದ ಪೊಲೀಸ್ ತಂಡವನ್ನು ಮೇಘಾಲಯದ ಚಿರಾಪುಂಜಿಯ ಮೃತದೇಹ ಎಸೆದ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ಅವಳು ಮತ್ತು ಅವಳ ಪ್ರೇಮಿ ತಾಯಿ ಮತ್ತು ಮಗನ ದೇಹದ ಭಾಗಗಳನ್ನು ಎಸೆದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ವಂದನಾ ದೇಹಗಳನ್ನು ತುಂಡುಗಳಾಗಿ ಕತ್ತರಿಸುವ ಮೊದಲು ಅವರನ್ನು ಕೊಂದರು. ನಂತರ ಅವರ ದೇಹದ ಭಾಗಗಳನ್ನು ಫ್ರಿಡ್ಜ್ನಲ್ಲಿ ಮೂರು ದಿನಗಳ ಕಾಲ ಸಂಗ್ರಹಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ ಪ್ರಕರಣಕ್ಕೂ ಮೊದಲು ಕಳೆದ ವರ್ಷ ದೆಹಲಿಯಲ್ಲಿ ಶ್ರದ್ಧಾ ವಾಕರ್ ಅವರನ್ನು ಲಿವ್-ಇನ್ ಸಂಗಾತಿ ಆಫ್ತಾಬ್ ಪೂನಾವಾಲಾ ಹತ್ಯೆ ಮಾಡಿದ್ದನು. ಆಕೆಯ ದೇಹವನ್ನು ಸಹ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಲಾಗಿತ್ತು. ತೀರಾ ಇತ್ತೀಚೆಗೆ ಮತ್ತೊಬ್ಬ ಮಹಿಳೆ ನಿಕ್ಕಿ ಯಾದವ್ ಅವರನ್ನು ಆಕೆಯ ಸಂಗಾತಿ ಸಾಹಿಲ್ ಗೆಹ್ಲೋಟ್ ಕೊಂದು ದೆಹಲಿಯ ಅವರ ರೆಸ್ಟೋರೆಂಟ್‌ನ ಫ್ರಿಡ್ಜ್‌ನಲ್ಲಿ ಆಕೆಯ ದೇಹವನ್ನು ಸಂಗ್ರಹಿಸಿದ್ದನು. ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು ಜನರಲ್ಲಿ ಆತಂಕವನ್ನು ಹೆಚ್ಚಿಸಿವೆ.












Click it and Unblock the Notifications