Vande Bharat Express: ವಂದೇ ಭಾರತ್ ರೈಲಿನ ವೇಗ ಕಡಿತಗೊಂಡಿದ್ದೇಕೆ! ನಿಮಗಿದು ಗೊತ್ತಾ?
Vande Bharat Express Train: ಭಾರತೀ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಕ್ರಾಂತಿ ತಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಂದ ವ್ಯಾಪಕವಾಗಿ ಸಂದನೆ ಪಡೆದುಕೊಂಡಿದೆ. ಕರ್ನಾಟಕ ಸೇರಿದಂತೆ ದೇಶದ ಹೊಸ ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ವಂದೇ ಭಾರತ್ ಸ್ಲೀಪರ್ ರೈಲು ಸಹ ಸೇವೆಗೆ ನಿಯೋಜನೆಗೊಳ್ಳಲಿದೆ. ಈ ಮಧ್ಯೆ ವಂದೇ ಭಾರತ್ ರೈಲಿನ ವೇಗದ ಕಡಿತ ಕುರಿತು ಪ್ರಶ್ನೆಗಳು ಎದ್ದಿವೆ.
ಹೌದು, ವಂದೇ ಭಾರತ್ ಎಕ್ಸ್‌ಪ್ರೆಸ್‌್ ರೈಲು ಹೆಸರೇ ಹೇಳುವಂತೆ ಐಶಾರಾಮಿ ಅನುಭವ ನೀಡುವ ವೇಗ ರೈಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ರೈಲಿನ ವೇಗ ಕಡಿಮೆಯಾಗಿದೆಯೇ ಎಂಬ ಕಳವಳ ವ್ಯಕ್ತವಾಗಿದೆ. ಅತ್ಯಧಿಕ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ 'ವಿಬಿ' ರೈಲಿನ ಸರಾಸರಿ ವೇಗ ಕಡಿಮೆಯಾಗಲು ಕಾರಣಗಳು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮುಂದೆ ಬಂದಿದೆ. ಈ ಕುರಿತು ಅವರು ಮಹತ್ವದ ಮಾಹಿತಿ ತಿಳಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೂಕ್ತ ಕಾರ್ಯಾಚರಣೆಯ ವೇಗ ಸಾಧಿಸಲು ಸರ್ಕಾರ ಕೈಗೊಂಡ ಕ್ರಮಗಳು, ಸಮಯ ಮತ್ತು ಕಾರ್ಯತಂತ್ರದ ಕುರಿತು ಕೇಳಿ ಬಂದ ಪ್ರಶ್ನೆಗಳಿಗೆ ಕೇಂದ್ರ ರೈಲ್ವೆ ಸಚಿವರು ವಿವರಣೆ ನೀಡಿದ್ದಾರೆ.
ಮಹತ್ವದ ಮೈಲಿಗಲ್ಲು ಸ್ಥಾಪಿರಿವು ಈ ವಂದೇ ಭಾರತ್ ರೈಲಿನ ವೇಗವು ತಯಾರಿಕೆ, ರೋಲಿಂಗ್ ಸ್ಟಾಕ್ ಪ್ರಕಾರ ನೋಡುವುದು ಮಾತ್ರವಲ್ಲದೇ, ಲಭ್ಯ ಮಾರ್ಗಗಳ ರಚನೆಯನ್ನು ನಾವು ಗಮನಿಸಬೇಕಿದೆ. ಭಾರತದಲ್ಲಿರುವ ಹಳಿಗಳ ರಚನೆ, ರೈಲ್ವೆ ಮೂಲಸೌಕರ್ಯದ ಆಧಾರದಲ್ಲಿ ಅದರ ವೇಗ ನಿರ್ಧರಿಸಲಾಗಿದೆ. ಇದೆಲ್ಲ ಮೂಲ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸುವುದು ಸುಧಾರಣೆ ಮಾಡಲು ರೈಲ್ವೆ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ.

ಹನ್ನೊಂದು ವರ್ಷಗಳ ಹಿಂದೆ ಅಂದರೆ 2014 ರಲ್ಲಿ ದೇಶದಲ್ಲಿ ಒಂದು ರೈಲು 110 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಬೇಕಾದರೆ ಅದಕ್ಕೆ ಬೇಕಾದ ಸೂಕ್ತ ಹಳಿಯ ಜಾಲ ಕೇವಲ 31,000 ಕಿಮೀ ಇತ್ತು. ಇದೀಗ ಅದರ ಸಾಮರ್ಥ್ಯವನ್ನು ನಾವು 80,000 ಕಿಲೋ ಮೀಟರ್‌ಗೆ ಹೆಚ್ಚಿಸಲಾಗಿದೆ. ಅಂದರೆ ಇಷ್ಟು ಕಿಲೋ ಮಿಟರ್ ಟ್ರ್ಯಾಕ್‌ನಲ್ಲಿ ಹಾಲಿ ವಂದೇ ಭಾರತ್ ರೈಲು ಪ್ರತಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಅದರ ಹೊರತು ಉಳಿದೆಡೆ ವೇಗ ಸಾಮಾನ್ಯವಾಗಿದೆ ಎಂದು ಅವರು ವಿವರಿಸಿದರು.
ವಂದೇ ಭಾರತ್ ಗರಿಷ್ಠ ವೇಗದ ಮಿತಿ 160 ಕಿ.ಮೀ.
ಹೌದು, ಭಾರತದ ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಉಂಟು ಮಾಡಿದ, ಪ್ರಯಾಣಿಕರ ಅಚ್ಚುಮೆಚ್ಚಿನ ವಂದೇ ಭಾರತ್ ರೈಲು ಪ್ರತಿ ಗಂಟೆಗೆ ಗಂಟೆಗೆ 160 ಕಿ.ಮೀ. ಇದೆ. ಇದನ್ನು ತಯಾರಿಸಿದೆ. ದೇಶಿಯ ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಿದೆ.
ಆದರೆ ಇಷ್ಟು ವೇಗದಲ್ಲಿ ಸಂಚರಿಸಲು ಅಗತ್ಯವಾದ ಹಳಿಗಳು ಇಲ್ಲ ಎಂಬುದೇ ವಿಪರ್ಯಾಸ. ಸದ್ಯ ರೈಲ್ವೆ ಇಲಾಖೆ ವಿದ್ಯುದೀಕರಣ, ದ್ವಿಪಥ ರೈಲ್ವೆ ಹಳಿ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿಗೆ ಕೈ ಹಾಕಿದೆ. ಮುಂದಿನ ದಿನಗಳಲ್ಲಿ ವಿಬಿ ರೈಲಿನ ವೇಗ ಹೆಚ್ಚಾದರೂ ಆಗಬಹುದು. ಈ ಬಗ್ಗೆ ರೈಲ್ವೆ ಸಚಿವರು ಭವಿಷ್ಯದಲ್ಲಿ ಅಧಿಕೃತ ಮಾಹಿತಿ ನೀಡಲಿದ್ದಾರೆ.
ವಂದೇ ಭಾರತ್ ರೈಲು ಭಾರತದಲ್ಲೇ ತಯಾರು
ವಿಶೇಷವೆಂದರೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸ್ಥಳೀಯವಾಗಿ ಅಂದರೆ ಚೆನ್ನೈ ಮೂಲಕ ಕಂಪನಿ ಅಭಿವೃದ್ಧಿಪಡಿಸುತ್ತಿದೆ. ಅರೆ-ಹೈ-ಸ್ಪೀಡ್ ರೈಲಿನ ಪರಿಚಯ ರೈಲ್ವೆಯ ಚಲನಶೀಲತೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲು ಅತ್ಯಾಧುನಿಕ ಸುವ್ಯವ್ಥೆಗಳನ್ನು ರೈಲು ಹೊಂದಿದೆ. ದೇಶದ ಆರ್ಥಿಕತೆಗೆ ತನ್ನದೇ ಆದ ರೀತಿಯಲ್ಲಿ ಈ ರೈಲು ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಬಿಎಚ್‌ಇಎಲ್ ವಂದೇ ಭಾರತ್ ಅಪ್‌ಗ್ರೆಡೇಷನ್ ಸ್ಲೀಪರ್ ರೈಲನ್ನು ಉತ್ಪಾದಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
2019ರ ಫೆಬ್ರವರಿ 15 ರಂದು ವಂದೇ ಭಾರತ್ ರೈಲು ಸೇವೆಗಳಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ಈವರೆಗೆ ಹಂತ ಹಂತವಾಗಿ ಭಾರತಾದ್ಯಂತ ಒಟ್ಟು 136 ವಿಬಿ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ 200 ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ಕೇಂದ್ರ ರೈಲ್ವೆ ಇಲಾಖೆ ಸಜ್ಜಾಗಿದೆ..












Click it and Unblock the Notifications