ಕರ್ನಾಟಕದ ಯೋಧ ನಿರಂಜನ್, ಹನುಮಂತಪ್ಪಗೆ ಸೇನಾ ಗೌರವ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 15: ಎನ್​ಎಸ್​ಜಿ ಪಡೆಯ ಬಾಂಬ್ ನಿಷ್ಕ್ರಿಯ ದಳದ ಕಮಾಂಡಿಂಗ್ ಆಫಿಸರ್ ಆಗಿದ್ದ ಹುತಾತ್ಮ ಲೆಫ್ಟಿನಂಟ್ ಕರ್ನಲ್ ನಿರಂಜನ್ ಅವರಿಗೆ 'ಶೌರ್ಯ ಚಕ್ರ' ಪ್ರಶಸ್ತಿ ಲಭಿಸಿದೆ. ಧಾರಾವಾಡ ಜಿಲ್ಲೆಯ ಲ್ಯಾನ್ಸ್ ನಾಯಕ ಹನುಮಂತಪ್ಪ ಅವರಿಗೆ ರಾಷ್ಟ್ರಪತಿ ಸೇನಾ ಪದಕ ಗೌರವ ನೀಡಲಾಗಿದೆ.

ಎನ್​ಎಸ್​ಜಿ ಪಡೆಯ ಬಾಂಬ್ ನಿಷ್ಕ್ರಿಯ ದಳದ ಕಮಾಂಡಿಂಗ್ ಆಫೀಸರ್ ಬೆಂಗಳೂರಿನ ನಿರಂಜನ್ ಜೊತೆಗೆ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ ಎಸ್ ಜಿ) ಪಡೆಯ ನಾಯಿ 'ರಾಕೆಟ್' ಕೂಡಾ ಮೊದಲ ಬಾರಿಗೆ ಶೌರ್ಯ ಪ್ರಶಸ್ತಿ ಲಭಿಸಿದೆ. 70ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. [ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]

Ashok Chakra for Hangpan Dada, Lt Col Niranjan gets Shaurya Chakra

ಪಠಾಣ್ ಕೋಟ್ ವಾಯುನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ಕಾರ್ಯನಿರತರಾಗಿದ್ದ ನಿರಂಜನ್ ಅವರು ಗ್ರೆನೇಡ್ ಸ್ಫೋಟವಾಗಿ ಮರಣವನ್ನಪ್ಪಿದ್ದರು.[ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]

ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರು ಕಾಶ್ಮೀರದ ಸಿಯಾಚಿನ್ ನಲ್ಲಿ ಹಿಮದಡಿಯಲ್ಲಿ 6 ದಿನಗಳ ಬದುಕುಳಿದಿದ್ದರು. ಫೆಬ್ರವರಿ 3 ರಂದು ಹನುಮಂತಪ್ಪ ಸೇರಿ 10 ಯೋಧರು ಹಿಮಪಾತದಿಂದ ಸಾವಿಗೀಡಾದರು. [ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]

ಅಶೋಕ್ ಚಕ್ರ: ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ನುಸುಳಿದ ಉಗ್ರರ ವಿರುದ್ಧದ ಹೋರಾಡಿ, ಮೂವರು ಉಗ್ರರನ್ನು ಕೊಂದು, ಹುತಾತ್ಮರಾದ ಹವಾಲ್ದಾರ್ ಹಂಗಾಪನ್ ದಾದಾ ಅವರಿಗೆ ಅಶೋಕ ಚಕ್ರ ಪ್ರಶಸ್ತಿ ಗೌರವ ನೀಡಲಾಗಿದೆ. [ವಾಘಾ ಗಡಿಯಲ್ಲಿ ಭಾರತ-ಪಾಕ್ ನಡುವೆ ಸಿಹಿ ಹಂಚಿಕೆ]

ರಕ್ಷಣಾ ಪಡೆ ಮತ್ತು ಅರೆಸೇನಾ ಪಡೆಗಳ ಒಟ್ಟು 82 ಜನರಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪದಕಗಳನ್ನು ಘೋಷಿಸಿದ್ದಾರೆ. ಈ ಬಾರಿ 14 ಜನರಿಗೆ ಶೌರ್ಯ ಚಕ್ರ, 63 ಜನರಿಗೆ ಸೇನಾ ಪದಕ, ತಲಾ ಇಬ್ಬರಿಗೆ ನವ (ನೌಕಾ) ಸೇನೆ ಮತ್ತು ವಾಯು ಸೇನೆ ಪದಕಗಳನ್ನು ಪ್ರದಾನ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A commando from Arunachal Pradesh Havildar Hangpan Dada is the sole recipient of this year’s Ashok Chakra, the nation's highest peace time gallantry award, posthumously.
Please Wait while comments are loading...