10ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಮಹಿಳಾ ಟೆಕ್ಕಿ

ascendas-techie-reshma-jumps-to-death-10-th-floor-taramani-it-park
ಚೆನ್ನೈ, ಅ. 17: ಯುವ ಮಹಿಳಾ ಟೆಕ್ಕಿಯೊಬ್ಬರು ತಾವು ಉದ್ಯೋಗದಲ್ಲಿದ್ದ ಪ್ರತಿಷ್ಠಿತ ಅಸೆಂಡಾಸ್ ಸಾಫ್ಟ್ ವೇರ್ ಕಂಪನಿಯ 10ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮಹಾಬಲಿಪುರಂರಸ್ತೆಯಲ್ಲಿರುವ ತಾರಾಮಣಿ ಇನ್ಫಾರ್ಮೇಶನ್ ಟೆಕ್ನಾಲಜಿ ಪಾರ್ಕಿನಲ್ಲಿ ನಿನ್ನೆ ನಡೆದಿದೆ.

ಮೃತಳನ್ನು application developer ಆಗಿದ್ದ 24 ವರ್ಷದ ಎಸ್ ರೇಷ್ಮಾ ಎಂದು ಗುರುತಿಸಲಾಗಿದ್ದು, ಅವರ ಆತ್ಮಹತ್ಯೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕೇರಳ ಮೂಲದ ರೇಷ್ಮಾ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದು, ವೆಲಾಚೆರಿ ಬಳಿಯಿರುವ ಸರಕಾರಿ ಮಹಿಳಾ ಹಾಸ್ಟೆಲಿನಲ್ಲಿ ವಾಸವಾಗಿದ್ದಳು.

Ascendas IT parkನಲ್ಲಿ 10ನೇ ಮಹಡಿಯಲ್ಲಿರುವ ಕ್ಯಾಂಟೀನ್ ಬಳಿ ಆಕೆ ಸುಳಿದಾಡುತ್ತಿರುವುದು ಸಹೋದ್ಯೋಗಿಗಳು ನೋಡಿದ್ದಾರೆ. ಆದರೆ ಅವರು ನೋಡ ನೋಡುತ್ತಿದ್ದಂತೆಯೇ ರೇಷ್ಮಾ ಕಿಟಕಿಯಿಂದ ನೆಗೆದು ಪ್ರಾಣ ಬಿಟ್ಟಿದ್ದಾಳೆ.

ಮೊದಲು ಕಾಲುಜಾರಿ ಬಿದ್ದಿರಬಹುದೆ ಎಂದು ಊಹಿಸಲಾಗಿತ್ತು. ಆದರೆ ಸ್ಥಳ ಪರೀಕ್ಷೆ ನಡೆಸಿದಾಗ ಆಕೆ ತನ್ನ ಚಪ್ಪಲಿಗಳನ್ನು ಕಳಚಿಟ್ಟು ಸಾವಕಾಶವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Ascendas IT parkನ ಸಿಬ್ಬಂದಿ ತಕ್ಷಣ ರೇಷ್ಮಾಳನ್ನು ಅಡಯಾರ್ ಆಸ್ಪತ್ರೆಗೆ ದಾಖಲಿಸಿದರಾದರೂ ಆ ವೇಳೆಗೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಶವಪರೀಕ್ಷೆಗಾಗಿ ರೇಷ್ಮಾ ದೇಹವನ್ನು ರಾಯಪೇಟಾದಲ್ಲಿರುವ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+