ಅಸಾರಾಮ್ ಬಾಪು ಮೇಲೆ ಅತ್ಯಾಚಾರ ಆರೋಪ: ಇಂದು ತೀರ್ಪು
ಜೋಧಪುರ, ಏಪ್ರಿಲ್ 25: ಐದು ವರ್ಷದ ನಂತರ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಇಂದು(ಏ.25) ತೀರ್ಪು ನೀಡಲಿದೆ.
ಎರಡು ಪ್ರತ್ಯೇಕ ಘಟನೆಗ ಸಂಬಂಧಿಸಿದಂತೆ ಬಾಪು ವಿರುದ್ಧಪ್ರಕರಣ ದಾಖಲಾಗಿದ್ದು, ಒಂದು ರಾಜಸ್ಥಾನ ಮತ್ತು ಇನ್ನೊಂದು ಗುಜರಾತ್ ನಿಂದ ದಾಖಲಾಗಿವೆ.
ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರು ಜೋಧಪುರದ ಮನೈ ಎಂಬಲ್ಲಿರುವ ತಮ್ಮ ಆಶ್ರಮದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಯುವತಿಯೊಬ್ಬರು ಆ.13, 2013 ರಲ್ಲಿ ದೂರು ನೀಡಿದ್ದರು. ಇದೇ ಸಮಯದಲ್ಲಿ ಗುಜರಾತಿನ ಸೂರತ್ ಮೂಲದ ಇಬ್ಬರು ಸಹೋದರಿಯರು ತಮ್ಮ ಮೇಲೂ ಅತ್ಯಾಚಾರವಾಗಿದೆ ಎಂದು ದೂರು ದಾಖಲಿಸಿದ್ದರು.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ತೀರ್ಪು ಹೊರಬೀಳಲಿರುವ ನಿಟ್ಟಿನಲ್ಲಿ ಜೋಧಪುರ ಪರಿಶಿಷ್ಟ ಜಾತಿ ಮತ್ತು ಪಂಗಡ ನ್ಯಾಯಾಲಯದ ಸುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.












Click it and Unblock the Notifications