ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ರದ್ದು ಕೋರಿ ಮೇಲ್ಮನವಿ ಸಲ್ಲಿಸಿದ ಅಸರಾಂ ಬಾಪು

ಜೋಧಪುರ, ಜುಲೈ 3: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪು ಶಿಕ್ಷೆ ರದ್ದು ಕೋರಿ ಸೋಮವಾರ ರಾಜಸ್ಥಾನ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಏಪ್ರಿಲ್ 25ರಂದು ಜೋಧಪುರದ ನ್ಯಾಯಾಲಯ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಐದು ವರ್ಷಗಳ ಹಿಂದೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿತ್ತು.

ಅಸರಾಂ ಬಾಪು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.
"ನಾವು ಅಸರಾಂ ಅವರಿಗೆ ಶಿಕ್ಷೆ ನೀಡಿರುವುದನ್ನು ಇಂದು (ಸೋಮವಾರ) ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದೇವೆ. ಸಹ ಅಪರಾಧಿಗಳಿಗೆ ಶಿಕ್ಷೆ ನೀಡಿರುವುದನ್ನೂ ಈಗಾಗಲೇ ಪ್ರಶ್ನಿಸಲಾಗಿದೆ. ಹೈಕೋರ್ಟ್ ವಿಚಾರಣಾ ನ್ಯಾಯಾಲಯದಿಂದ ದಾಖಲೆಗಳನ್ನು ಕೇಳಿದೆ," ಎಂದು ಅಸರಾಂ ಪರ ವಕೀಲ್ ನಿಶಾಂತ್ ಬೋರಾ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

Asaram challenges conviction in rape case

ಅಸರಾಂ ಸಹಾಯಕರಾದ ಶರದ್ ಮತ್ತು ಶಿಲ್ಪಿ ಎಂಬ ಇಬ್ಬರಿಗೆ ಜೋಧಪುರ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಜೋಧಪುರ ಸಮೀಪದ ಮನಾಯ್ ನಲ್ಲಿರುವ ಆಶ್ರಮಕ್ಕೆ 2013ರ ಆಗಸ್ಟ್ 15ರಂದು ತನ್ನನ್ನು ಕರೆಸಿಕೊಂಡು ತನ್ನ ಮೇಲೆ ಅಂದೇ ರಾತ್ರಿ ಅತ್ಯಾಚಾರ ನಡೆಸಲಾಗಿತ್ತು ಎಂದು 16 ವರ್ಷದ ಬಾಲಕಿ ದೂರು ಸಲ್ಲಿಸಿದ್ದಳು. ಈ ಪ್ರಕರಣದಲ್ಲಿ ಅಸರಾಂ ಶಿಕ್ಷೆಗೆ ಗುರಿಯಾಗಿದ್ದರು.

ಉತ್ತರ ಪ್ರದೇಶದ ಶಹಜಾನ್ಪುರಕ್ಕೆ ಸೇರಿದ ಯುವತಿ ಮಧ್ಯ ಪ್ರದೇಶದ ಛಿಂದ್ವಾರದಲ್ಲಿರುವ ಅಸರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದರ ಮಧ್ಯದಲ್ಲಿ ಆಕೆಯ ಮೇಲೆ ಅಸರಾಂ ಅತ್ಯಾಚಾರ ನಡೆಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+