ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಷ್ಟಕ್ಕೂ ನರೇಂದ್ರ ಮೋದಿ ಜಾತಿ ಯಾವುದು?

By Srinath
|
Google Oneindia Kannada News

ಅಹಮದಾಬಾದ್‌, ಮೇ 9: ಇನ್ನೇನು ಲೋಕಸಭಾ ಚುನಾವಣೆ ಮುಗಿಯುತ್ತಾ ಬಂದಿದೆ. ಮೇ 12ಕ್ಕೆ ಕೊನೆಯ ಚರಣ ಮುಗಿದರೆ ನಾಲ್ಕು ದಿನಗಳ ಕಾಲ ಫಲಿತಾಂಶಕ್ಕಾಗಿ ಕಾಯಬೇಕಷ್ಟೇ. ಈ ಮಧ್ಯೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷವು ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಬಳಸಿದ ಬಳಿಕ ಅಂತಿಮವೆಂಬಂತೆ ಮೋದಿ ಜಾತಿ ಬಗ್ಗೆ ಕೆದಕಿದೆ.

ಮೋದಿ ತಾವು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ನಕಲಿ ಎಂದು ಕಾಂಗ್ರೆಸ್‌ ಮುಖಂಡ ಶಕ್ತಿಸಿಂಹ ಗೋಹಿಲ್‌ ಅವರು ದಿಲ್ಲಿಯಲ್ಲಿ ನಿನ್ನೆ ಗುರುವಾರ ಬೆಳಗ್ಗೆ ಆಪಾದಿಸಿದ್ದರು.

as-per-1994-notification-modi-belongs-to-obc-category-say-gujarat-govt

'ಮೋದಿ ಅವರು ಅವರೇ ಹೇಳುವಂತೆ ಮೋದ್‌- ಗಾಂಚಿ ಜಾತಿಗೆ ಸೇರಿತ್ತಾರಂತೆ. ಆದರೆ ಆ ಜಾತಿಯು (ಎಣ್ಣೆ ಗಾಣಿಗರು) ಸಿರಿವಂತ ಮತ್ತು ಮುಂದುವರಿದ ಜಾತಿಯಾಗಿದೆ. ಆ ಜಾತಿ ಮೊದಲಿನಿಂದಲೂ ಯಾವ ಮೀಸಲಾತಿಗಳನ್ನೂ ಪಡೆದುಕೊಂಡಿಲ್ಲ. ಆದರೆ ಮೋದಿ ಮುಖ್ಯಮಂತ್ರಿಯಾದ ಮೇಲೆ ರಾಜಕೀಯ ಲಾಭಕ್ಕಾಗಿ ಆ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೆಳಜಾತಿಯವರೆಂದು ಗುರುತಿಸಿಕೊಂಡಿದ್ದಾರೆ' ಎಂದು ಆರೋಪಿಸಿದ್ದರು.

ಗುಜರಾತ್ ಸರಕಾರದ ಸ್ಪಷ್ಟನೆ
ಮೋದಿ 'ನಕಲಿ ಒಬಿಸಿ ಜಾತಿಯವರು' ಎಂಬ ಕಾಂಗ್ರೆಸ್‌ ಆರೋಪಕ್ಕೆ ಗುಜರಾತ್‌ ಸರ್ಕಾರ ತತ್ತಕ್ಷಣವೇ ಸ್ಪಷ್ಟನೆ ನೀಡಿದೆ, 'ಮೋದಿ ಅವರು ಒಬಿಸಿ ಪಟ್ಟಿಯಲ್ಲಿರುವ ಜಾತಿಗೆ ಸೇರಿವುದು ನಿಜ. ರಾಜ್ಯ ಸಮಾಜ ಕಲ್ಯಾಣ ಇಲಾಖೆಯು ಜುಲೈ 25, 1994ರಲ್ಲೇ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಮೋದಿ ಅವರ 'ಮೋದ್‌- ಗಾಂಚಿ' ಜಾತಿಯು (Modh Ghanchis -OBC) ಒಬಿಸಿ ಪ್ರವರ್ಗಕ್ಕೆ ಸೇರುತ್ತದೆ. ಒಬಿಸಿ ಪ್ರವರ್ಗದಡಿ 36 ಜಾತಿಗಳು ಇವೆ. ಇದರ 25 (ಬಿ) ಸಂಖ್ಯೆಯಡಿ ಮೋದ್‌- ಗಾಂಚಿ ಜಾತಿಯೂ ಸೇರಿದೆ' ಎಂದು ರಾಜ್ಯ ಸರ್ಕಾರದ ವಕ್ತಾರ ನಿತಿನ್‌ ಪಟೇಲ್‌ ಅವರು ವಾಸ್ತವವನ್ನು ತೆರೆದಿಟ್ಟಿದ್ದಾರೆ.

ಅಂದರೆ 1994ರಲ್ಲಿ ಮೋದಿ ಇನ್ನೂ ಮುಖ್ಯಮಂತ್ರಿಯಾಗಿರಲಿಲ್ಲ. ರಾಜ್ಯ ಸರಕಾರದ ಪರವಾಗಿ ಜಾತಿಯಂತಹ ಸೂಕ್ಷ್ಮ ವಿಚಾರಗಳಲ್ಲಿ ಅಧಿಸೂಚನೆ (1994 notification) ಹೊರಡಿಸುವ ಅಧಿಕಾರವೂ 1994ರಲ್ಲಿ ಅವರಿಗೆ ಇರಲಿಲ್ಲ. ಆದರೂ ಮೋದಿ ಮುಖ್ಯಮಂತ್ರಿಯಾದ ಮೇಲೆ ರಾಜಕೀಯ ಲಾಭಕ್ಕಾಗಿ ಆ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ!

English summary
Lok Sabha polls 2014 - As per 1994 notification Gujarat Chief Minister Narendra Modi belongs to OBC category- Clarifies Gujarat govt. Responding to Congress charge that Narendra Modi was a "fake" OBC, Gujarat government on Thursday cited its two-decade old notification which says the Modh-Ghanchi (oil-pressers) caste, to which Modi belongs, was included in Other Backward Castes category. The Social Welfare Department of the Gujarat Govt had passed a notification on July 25, 1994 which included 36 castes as OBCs and at number 25 (b) Modh-Ghanchi caste has been mentioned to which Narendra Modi belongs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X