ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೇಕ್ ಇಂಡಿಯಾ ನಂ.1' ಮಿಷನ್ ಪ್ರಾರಂಭಿಸಿದ ಅರವಿಂದ್‌ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಆಗಸ್ಟ್‌ 17: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ 'ಮೇಕ್ ಇಂಡಿಯಾ ನಂ.1' ರಾಷ್ಟ್ರೀಯ ಮಿಷನ್‌ಗೆ ಚಾಲನೆ ನೀಡಿದರು.

ನಾವು ಭಾರತವನ್ನು ಮತ್ತೊಮ್ಮೆ ವಿಶ್ವದ ನಂಬರ್ ಒನ್ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ. ನಾವು ಭಾರತವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಬೇಕು. ಹಾಗಾಗಿ ನಾವು ಇಂದು 'ಮೇಕ್ ಇಂಡಿಯಾ ನಂ.1' ಎಂಬ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಈ ಮಿಷನೊಂದಿಗೆ ಕೈಜೋಡಿಸುವಂತೆ ಎಲ್ಲಾ ದೇಶವಾಸಿಗಳನ್ನು ಒತ್ತಾಯಿಸಿದ ಅವರು, "ಈ ದೇಶದ ಪ್ರತಿಯೊಬ್ಬ ನಾಗರಿಕರು, 130 ಕೋಟಿ ಜನರು ಈ ಮಿಷನ್‌ಗೆ ಸಂಪರ್ಕ ಹೊಂದಿರಬೇಕು" ಎಂದು ಹೇಳಿದರು.

ಕೇಜ್ರಿವಾಲ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ ಕುಸ್ತಿಪಟು ದಿವ್ಯಾಕೇಜ್ರಿವಾಲ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ ಕುಸ್ತಿಪಟು ದಿವ್ಯಾ

ಈ ವೇಳೆ ದೇಶದ ನಾಗರಿಕತೆಯನ್ನು ಶ್ಲಾಘಿಸಿದ ಅವರು, ಇದು ಸಾವಿರಾರು ವರ್ಷಗಳಷ್ಟು ಹಳೆಯದಾಗಿದೆ. ಹಾಗಾಗಿ ಭಾರತವು ಶ್ರೇಷ್ಠ ದೇಶವಾಗಿದೆ ಎಂದರು. ದೇಶಾದ್ಯಂತ ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಉಚಿತ ಶಿಕ್ಷಣ ಸಿಗಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಯುದ್ದೋಪಾದಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಕು ಆಗ ಮಾತ್ರ ಭಾರತವು ನಂಬರ್ ಒನ್ ದೇಶವಾಗುತ್ತದೆ ಎಂದು ಹೇಳಿದರು.

 ಭಾರತವು ಶ್ರೀಮಂತ ರಾಷ್ಟ್ರವಾಗಬೇಕು

ಭಾರತವು ಶ್ರೀಮಂತ ರಾಷ್ಟ್ರವಾಗಬೇಕು

"ನನಗೆ ಒಂದೇ ಒಂದು ಕನಸು ಇದೆ. ಅದು ಏನೆಂದರೆ, ಭಾರತವನ್ನು ನಾನು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ನೋಡಲು ನಾನು ಬಯಸುತ್ತೇನೆ. ಭಾರತವು ಶ್ರೀಮಂತ ರಾಷ್ಟ್ರವಾಗಬೇಕೆಂದು ನಾವು ಬಯಸುತ್ತೇನೆ. ಪ್ರತಿಯೊಬ್ಬ ಭಾರತೀಯನು ಶ್ರೀಮಂತನಾದಾಗ ಭಾರತವು ಶ್ರೀಮಂತವಾಗುತ್ತದೆ. ದೇಶವು ಶ್ರೀಮಂತವಾಗಿದೆ ಎಂದರೆ ಆಗುವುದಿಲ್ಲ. ಆದರೆ ಜನರು ಇಲ್ಲಿ ಬಡವರು. ನಾನು ಭಾರತದ ಪ್ರತಿಯೊಬ್ಬ ಬಡವರನ್ನು ಶ್ರೀಮಂತನನ್ನಾಗಿ ಮಾಡಲು ಬಯಸುತ್ತೇನೆ ಎಂದು ಅವರು ಮಂಗಳವಾರ ಹೇಳಿದರು.

 ಬಡವನು ಶ್ರೀಮಂತನಾಗುವುದು ಹೇಗೆ?

ಬಡವನು ಶ್ರೀಮಂತನಾಗುವುದು ಹೇಗೆ?

ಶ್ರೀಮಂತರಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಾನು ಪ್ರತಿಯೊಬ್ಬ ಬಡವನನ್ನು ಶ್ರೀಮಂತನನ್ನಾಗಿ ಮಾಡಲು ಬಯಸುತ್ತೇನೆ. ಬಡವನು ಶ್ರೀಮಂತನಾಗುವುದು ಹೇಗೆ? ಎಂದು ನಾವು ಯೋಚಿಸಬೇಕಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ಉತ್ತಮವಾಗಿದ್ದರೆ, ಮಗು ಬಡತನದಿಂದ ಹೊರಬಂದು ವೈದ್ಯ, ಎಂಜಿನಿಯರ್, ಉದ್ಯಮಿಯಾಗಿ ವೃತ್ತಿಜೀವನವನ್ನು ಮುಂದುವರಿಸುವ ಮೂಲಕ ತನ್ನ ಕುಟುಂಬಕ್ಕೆ ಸಹಾಯ ಮಾಡುತ್ತಾನೆ ಎಂದು ಹೇಳಿದರು.

 ಬಹುತೇಕ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ

ಬಹುತೇಕ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ

ದೇಶದಲ್ಲಿ 17 ಕೋಟಿಗೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಅವರಲ್ಲಿ ಹೆಚ್ಚಿನವರು ಬಡ ಸ್ಥಿತಿಯಲ್ಲಿದ್ದಾರೆ. ದೇಶದಲ್ಲಿ 17 ಕೋಟಿಗೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಾರೆ. ಅಲ್ಲದೆ ಬಹುತೇಕ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ. ಖಾಸಗಿ ಶಾಲೆಗಳಲ್ಲಿ ಪೋಷಕರ ಬಳಿ ಹಣವಿಲ್ಲ (ಮಕ್ಕಳಿಗೆ ಶಿಕ್ಷಣ ನೀಡಲು) ನಾವು ಈ ಶಾಲೆಗಳನ್ನು ಉತ್ತಮಗೊಳಿಸಿದರೆ ಪ್ರತಿ ಮಗು ತನ್ನ ಕುಟುಂಬ ನೋಡಿಕೊಳ್ಳುತ್ತದೆ. ಈ ಎಲ್ಲಾ ಕುಟುಂಬಗಳು ಶ್ರೀಮಂತರಾದರೆ, ಭಾರತವೂ ಶ್ರೀಮಂತವಾಗುತ್ತದೆ. ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಸುಧಾರಿಸಲು ಬಯಸಿದರೆ ಕೇಂದ್ರದೊಂದಿಗೆ ಕೆಲಸ ಮಾಡಲು ಸಿದ್ಧ ಎಂದು ಕೇಜ್ರಿವಾಲ್ ಹೇಳಿದರು.

 ನನಗೆ ಒಂದು ಅವಕಾಶ ಕೊಡಿ

ನನಗೆ ಒಂದು ಅವಕಾಶ ಕೊಡಿ

ಹರಿಯಾಣ ಮುನ್ಸಿಪಲ್ ಕಾರ್ಪೊರೇಶನ್‌ನ 93 ವಾರ್ಡ್‌ಗಳಿಗೆ ಚುನಾವಣೆಗೆ ಮುನ್ನ ಕೇಜ್ರಿವಾಲ್ ಕುರುಕ್ಷೇತ್ರದಲ್ಲಿ ಪ್ರಚಾರದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸಿವಿಕ್ ಚುನಾವಣೆಯಲ್ಲಿ ಗೆದ್ದರೆ ರಾಜ್ಯದ ಎಲ್ಲಾ ಶಾಲೆಗಳನ್ನು ಸುಧಾರಿಸುವುದಾಗಿ ಭರವಸೆ ನೀಡಿದ್ದರು. ಕುರುಕ್ಷೇತ್ರದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ, ನನಗೆ ಒಂದು ಅವಕಾಶ ಕೊಡಿ, ನಾನು ಹರಿಯಾಣದ ಎಲ್ಲಾ ಶಾಲೆಗಳನ್ನು ಸುಧಾರಿಸುತ್ತೇನೆ. ದೆಹಲಿ ಸರ್ಕಾರಿ ಶಾಲೆಗಳ ಬಡವರ ಮಕ್ಕಳೂ ಎಂಜಿನಿಯರ್ ಮತ್ತು ವೈದ್ಯರಾಗುತ್ತಾರೆ, ಕಳೆದ ಏಳು ವರ್ಷಗಳಲ್ಲಿ ದೆಹಲಿಯ ಖಾಸಗಿ ಶಾಲೆಗಳು ತಮ್ಮ ಶುಲ್ಕವನ್ನು ಹೆಚ್ಚಿಸಿವೆ. ಇದಕ್ಕೆ ನಾವು ಅವಕಾಶ ನೀಡಲಿಲ್ಲ ಎಂದು ಹೇಳಿದ್ದರು.

English summary
Delhi Chief Minister Arvind Kejriwal launched the 'Make India No.1' national mission on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X