ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶ: ಉಗ್ರರ ದಾಳಿ, ಶಾಸಕ ಸೇರಿ ಆರು ಮಂದಿ ಸಾವು

|
Google Oneindia Kannada News

ಇಟಾನಗರ, ಮೇ 21: ಅರುಣಾಚಲ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿದ್ದು ಅರುಣಾಚಲ ಸರ್ಕಾರದ ಶಾಸಕರಾಗಿದ್ದ ತಿರಾಂಗ್ ಅಬೋಹ್ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಬೋಗಾಪನಿ ಎಂಬಲ್ಲಿ ಈ ದಾಳಿ ನಡೆದಿದ್ದು ನ್ಯಾಷನಲ್ ಸೋಷಿಯಲಿಸ್ಟ್‌ ಕೌನ್ಸಿಲ್ ಆಫ್ ನಾಗಲ್ಯಾಂಡ್‌ ನ ಉಗ್ರರು, ಶಾಸಕ ತಿರಾಂಗ್ ಅಬೋಹ್ ಅವರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅಬೋಹ್ ಅವರು ಕೋನ್ಸಾ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದರು, ಅಲ್ಲದೆ ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಅದರ ಫಲಿತಾಂಶ ಮೇ 23ಕ್ಕೆ ಹೊರಬೀಳಲಿದೆ.

Arunachal Pradesh: militants attack MLA dead

ಅಬೋಹ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಕೋನ್ಸಾ ದಕ್ಷಿಣ ಕ್ಷೇತ್ರದಲ್ಲಿ ಮರು ಚುನಾವಣೆಗೆ ಒತ್ತಾಯಿಸಿದ್ದರು, ಕ್ಷೇತ್ರದಲ್ಲಿ ನ್ಯಾಯಯುತ ಚುನಾವಣೆ ಆಗಿಲ್ಲವೆಂದು ಅವರು ಹೋರಾಡುತ್ತಿದ್ದರು, ಅದೇ ಕಾರಣದಿಂದ ಅವರ ಮೇಲೆ ದಾಳಿ ಆಗಿದೆ ಎನ್ನಲಾಗಿದೆ.

ಅರುಣಾಚಲ ಸಿಎಂ ಕೆ.ಸಂಗ್ಮಾ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಘಟನೆಯ ಶೀಘ್ರ ತನಿಖೆ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

English summary
Militants attack in Arunachal Pradesh, present MLA Tirong Aboh dead along with six people. Arunachal Pradesh CM K Sangma condemn the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X