ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಗೋಯೆಲ್ ನೂತನ ಚುನಾವಣಾ ಆಯುಕ್ತರಾಗಿ ನೇಮಕ

|
Google Oneindia Kannada News

ನವದೆಹಲಿ, ನವೆಂಬರ್‌ 20: ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ನಿವೃತ್ತ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.

ನಿವೃತ್ತಿಗೆ ಆರು ವಾರಗಳ ಮೊದಲು ಸ್ವಯಂ ನಿವೃತ್ತಿ ಸೇವೆ (ವಿಆರ್‌ಎಸ್) ತೆಗೆದುಕೊಂಡಿದ್ದ ಭಾರೀ ಕೈಗಾರಿಕೆಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣ್ ಗೋಯೆಲ್ ಅವರನ್ನು ಶನಿವಾರ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್: ಗುಜರಾತ್‌ ಚುನಾವಣಾ ಕರ್ತವ್ಯದಿಂದ ಅಧಿಕಾರಿ ವಜಾಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್: ಗುಜರಾತ್‌ ಚುನಾವಣಾ ಕರ್ತವ್ಯದಿಂದ ಅಧಿಕಾರಿ ವಜಾ

ದೇಶದ ಉನ್ನತ ಚುನಾವಣಾ ಸಂಸ್ಥೆಯಲ್ಲಿ ಮೂರನೇ ಸದಸ್ಯ ಹುದ್ದೆಯು ಸುಮಾರು ಆರು ತಿಂಗಳಿನಿಂದ ಖಾಲಿಯಾಗಿತ್ತು. ಶನಿವಾರ ಸಂಜೆ ಕಾನೂನು ಸಚಿವಾಲಯದ ಪ್ರಕಟಣೆಯಲ್ಲಿ ಅಧ್ಯಕ್ಷರು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿ 1985ರ ಐಎಎಸ್‌ ಬ್ಯಾಚ್‌ನ ನಿವೃತ್ತ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ನೇಮಿಸಲು ಸಂತೋಷವಾಗಿದೆ ಎಂದು ಬರೆದಿದೆ.

Arun Goel has been appointed as the new Election Commissioner

1985 ರ ಬ್ಯಾಚ್‌ನ ಪಂಜಾಬ್ ಕೇಡರ್ ಅಧಿಕಾರಿಯಾಗಿರುವ ಗೋಯಲ್ ಅವರು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರ ಚುನಾವಣಾ ಸಮಿತಿಯಲ್ಲಿ ಸೇರಿಕೊಳ್ಳಲಿದ್ದಾರೆ. ಮಾಜಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುಶೀಲ್ ಚಂದ್ರ ಅವರು ಈ ವರ್ಷದ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿದ್ದು, ರಾಜೀವ್ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಚುನಾವಣಾ ಸಮಿತಿಯು ಎರಡು ಸದಸ್ಯರ ಸಂಸ್ಥೆಯಾಗಿದೆ. ಇದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಅನರ್ಹತೆಯ ಬೇಡಿಕೆಗಳು ಸೇರಿದಂತೆ ಹಲವಾರು ನಿರ್ಣಾಯಕ ಸಮಸ್ಯೆಗಳನ್ನು ನಿಭಾಯಿಸಬೇಕಾಗಿತ್ತು.

ಮುಂಬರುವ ತಿಂಗಳಲ್ಲಿ ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮತ್ತು ಕರ್ನಾಟಕಕ್ಕೆ ಚುನಾವಣಾ ವೇಳಾಪಟ್ಟಿಯನ್ನು ನಿರ್ಧರಿಸಿದಾಗ ಚುನಾವಣಾ ಸಮಿತಿಯು ತನ್ನ ಸಂಪೂರ್ಣ ಶಕ್ತಿಯನ್ನು ಹೊಂದಿರುತ್ತದೆ. ಇತ್ತೀಚಿನವರೆಗೂ ಗೋಯೆಲ್ ಅವರು ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಡಿಸೆಂಬರ್ 31, 2022ರಂದು ನಿವೃತ್ತರಾಗಬೇಕಿತ್ತು. ಆದರೆ ಅವರ ಸ್ವಯಂ ನಿವೃತ್ತಿಯಾದ ಕಾರಣ ನವೆಂಬರ್ 18ರಿಂದಲೇ ನಿವೃತ್ತಿ ಅವಧಿ ಜಾರಿಗೆ ಬಂದಿತು.

Arun Goel has been appointed as the new Election Commissioner

ಒಮ್ಮೆ ಅರುಣ್‌ ಗೋಯಲ್‌ ಅವರು ಹುದ್ದೆಯನ್ನು ವಹಿಸಿಕೊಂಡ ನಂತರ ಫೆಬ್ರವರಿ 2025ರ ವೇಳೆಗೆ ರಾಜೀವ್ ಕುಮಾರ್ ಅವರು ಅಧಿಕಾರವನ್ನು ತ್ಯಜಿಸಿದ ಬಳಿಕ ಗೋಯೆಲ್ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗುತ್ತಾರೆ. ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ನಿವೃತ್ತಿಯೊಂದಿಗೆ ವ್ಯವಹರಿಸುವ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯು ಆರು ವರ್ಷಗಳವರೆಗೆ ಅಥವಾ 65 ವರ್ಷ ವಯಸ್ಸಿನವರೆಗೆ ಆಯುಕ್ತರ ಹುದ್ದೆಯನ್ನು ಹೊಂದಬಹುದು ಎನ್ನಲಾಗಿದೆ. ಈಗ ಗೋಯೆಲ್ ಡಿಸೆಂಬರ್ 2027 ರವರೆಗೆ ಅಧಿಕಾರದಲ್ಲಿರುತ್ತಾರೆ.

English summary
Retired officer Arun Goel has been appointed as the Election Commissioner ahead of the assembly elections to be held in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X