• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸಾಧ್ಯವಿದ್ದರೇ ನನ್ನನ್ನು ಬಂಧಿಸಿ, ಜಾರ್ಖಂಡ್ ಸಿಎಂ ಸವಾಲು

|
Google Oneindia Kannada News

ರಾಂಚಿ, ನ.03: "ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾನು ತಪ್ಪಿತಸ್ಥನಾಗಿದ್ದರೆ, ನೀವು ನನ್ನನ್ನು ಏಕೆ ಪ್ರಶ್ನಿಸುತ್ತಿದ್ದೀರಿ?. ನಿಮಗೆ ಸಾಧ್ಯವಾದರೆ ಬಂದು ನನ್ನನ್ನು ಬಂಧಿಸಿ" ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗುರುವಾರ ಸವಾಲು ಹಾಕಿದ್ದಾರೆ.

ರಾಂಚಿಯಲ್ಲಿ ಮಾತನಾಡಿರುವ ಹೇಮಂತ್ ಸೊರೆನ್, ಇದೆಲ್ಲಾ ಬುಡಕಟ್ಟು ಮುಖ್ಯಮಂತ್ರಿಗೆ ಕಿರುಕುಳ ನೀಡುವ ಸಂಚಿನ ಭಾಗ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಹಣ ಅಕ್ರಮ ವರ್ಗಾವಣೆ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಹಣ ಅಕ್ರಮ ವರ್ಗಾವಣೆ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆ ಹೇಮಂತ್ ಸೊರೆನ್ ಅವರಿಗೆ ಸಮನ್ಸ್ ನೀಡಿದೆ.

"ನಾನು ಛತ್ತೀಸ್‌ಗಢದಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಬೇಕಿದ್ದ ದಿನದಂದು ಏಜೆನ್ಸಿಯಿಂದ ನನಗೆ ಸಮನ್ಸ್ ಬಂದಿದೆ. ನಾನು ದೊಡ್ಡ ಅಪರಾಧ ಮಾಡಿದ್ದರೆ, ಬಂದು ನನ್ನನ್ನು ಬಂಧಿಸಿ. ಯಾಕೆ ಸುಮ್ಮನೆ ವಿಚಾರಣೆಗೆ ಕರೆದು ಪ್ರಶ್ನೆ ಮಾಡುತ್ತಿರಿ? ಸಾಧ್ಯವಾದರೆ ನನ್ನನ್ನು ಬಂಧಿಸಿ" ಎಂದಿದ್ದಾರೆ.

ಇನ್ನು, ಇಡಿ ಕಚೇರಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾಕೆ, ಜಾರ್ಖಂಡಿಗಳಿಗೆ ಹೆದರುತ್ತೀರಾ..? ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಅಧ್ಯಕ್ಷ ಸಭೆಯೊಂದರಲ್ಲಿ ಹೇಳಿದ್ದಾರೆ.

"ಕೇಂದ್ರದ ಬಿಜೆಪಿಯನ್ನು ವಿರೋಧಿಸುವವರ ಧ್ವನಿಯನ್ನು ಹತ್ತಿಕ್ಕಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.

"ರಾಜ್ಯದ ಆದಿವಾಸಿಗಳನ್ನು ತಮ್ಮ ಕಾಲ ಮೇಲೆ ನಿಲ್ಲಲು ಬಿಡದ ಕೆಲವು ಹೊರಗಿನ ಗುಂಪುಗಳನ್ನು ನಾವು ರಾಜ್ಯದಲ್ಲಿ ಗುರುತಿಸಿದ್ದೇವೆ. ಈ ರಾಜ್ಯದಲ್ಲಿ ಜಾರ್ಖಂಡಿಗಳ ಆಡಳಿತವಿರುತ್ತದೆಯೇ ಹೊರತು ಹೊರಗಿನ ಶಕ್ತಿಗಳಿಗಲ್ಲ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮವಾಗಲಿದೆ" ಎಂದು ಹೇಮಂತ್ ಸೊರೆನ್ ಭವಿಷ್ಯ ನುಡಿದಿದ್ದಾರೆ.

ಗುರುವಾರ ರಾಂಚಿಯಲ್ಲಿರುವ ಇಡಿ ಪ್ರಾದೇಶಿಕ ಕಚೇರಿಗೆ ಹಾಜರಾಗುವಂತೆ ತಿಳಿಸಲಾಗಿತ್ತಾದರೂ ಅವರು ವಿಚಾರಣೆಗೆ ಹಾಜರಾಗಲಿಲ್ಲ. ಬದಲಾಗಿ, ತಮ್ಮ ಮನೆಯ ಹೊರಗೆ ಕಾಂಗ್ರೆಸ್‌ನೊಂದಿಗೆ ಸಮ್ಮಿಶ್ರ ರಾಜ್ಯ ಸರ್ಕಾರ ಹೊಂದಿರುವ ಜಾರ್ಖಂಡ್ ಮುಕ್ತಿ ಮೋರ್ಚಾದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

2021 ರಲ್ಲಿ ಅಧಿಕಾರದಲ್ಲಿದ್ದಾಗ ತಮಗೆಯೇ ಗಣಿ ಗುತ್ತಿಗೆ ನೀಡಿಕೊಂಡಿದ್ದಕ್ಕಾಗಿ ಬಿಜೆಪಿಯ ದೂರಿನ ಮೇರೆಗೆ ಹೇಮಂತ್ ಸೊರೆನ್ ಶಾಸಕರಾಗಿ ಅನರ್ಹತೆಯನ್ನು ಎದುರಿಸುತ್ತಿದ್ದಾರೆ. ಚುನಾವಣಾ ಆಯೋಗವು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ರಮೇಶ್ ಬೈಸ್‌ಗೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.

English summary
Just come and arrest me if you can. Jharkhand Chief Minister Hemant Soren challenged ED summons in money laundering case. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X