ಅರ್ನಬ್ ರೀಎಂಟ್ರಿ ನಂತರ TRP ಸಮರದಲ್ಲಿ ಯಾರಿಗೆ ಮುನ್ನಡೆ?

Posted By:
Subscribe to Oneindia Kannada

ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ವಾಹಿನಿ ಕಾರ್ಯಾರಂಭಗೊಂಡ ನಂತರ ಭಾರತದ ಇಂಗ್ಲಿಷ್ ಸುದ್ದಿವಾಹಿನಿಗಳ ಟಿಆರ್ಪಿಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ರಿಪಬ್ಲಿಕ್ ಸದ್ಯ ಸ್ಪಷ್ಟ ಮೇಲುಗೈ ಸಾಧಿಸುತ್ತಿದೆ.

ಈ ನಡುವೆ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಶಿಯೇಷನ್, ಭಾರತೀಯ ಟಿವಿ ವೀಕ್ಷಕರ ರೇಟಿಂಗ್ ನಿರ್ಧರಿಸುವ ಬಾರ್ಕ್ (ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಸಂಸ್ಥೆಯ ಲೋಗೋವನ್ನು ತಮ್ಮ ವಾಹಿನಿಯ ಕಾರ್ಯಕ್ರಮಗಳಲ್ಲಿ ಪ್ರಸಾರಿಸುವುದನ್ನು ನಿಲ್ಲಿಸಿವೆ.[ಟೈಮ್ಸ್ ಸಮೂಹದಿಂದ ಅರ್ನಬ್ ಮೇಲೆ ಕ್ರಿಮಿನಲ್ ಕೇಸ್]

ಬಾರ್ಕ್ ಸಂಸ್ಥೆಯ ಸಿಇಓ ಪಾರ್ಥೋ ದೇಶಗುಪ್ತ ರಿಪಬ್ಲಿಕ್ ವಾಹಿನಿಯ ಟಿವಿ ರೇಟಿಂಗ್ ಬಿಡುಗಡೆಗೊಳಿಸಿದ್ದನ್ನು ವಿರೋಧಿಸಿ ಇಂಡಿಯಾ ಟುಡೇ, ಟೈಮ್ಸ್ ನೌ, ನ್ಯೂಸ್ ಎಕ್ಸ್, ಸಿಎನ್ಎನ್ ನ್ಯೂಸ್ 18, ಎನ್ಡಿಟಿವಿ 24X7 ವಾಹಿನಿಗಳು, ಬಾರ್ಕ್ ಸಂಸ್ಥೆಯ ವಾಟರ್ ಮಾರ್ಕ್ ಇರುವ ಚಿಹ್ನೆಯನ್ನು ತಮ್ಮ ಕಾರ್ಯಕ್ರಮದಲ್ಲಿ ಪ್ರಸಾರಿಸುವುದನ್ನು ತಡೆಹಿಡಿದಿದೆ.

ವಾಹಿನಿ ಕಾರ್ಯಾರಂಭಗೊಂಡ ಎರಡೇ ವಾರದಲ್ಲಿ ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ವಾಹಿನಿ, ಭಾರೀ ಸಂಚಲನವನ್ನು ಮೂಡಿಸಿದೆ. ದಿನದಿಂದ ದಿನಕ್ಕೆ ವಾಹಿನಿಗಳಿಸುತ್ತಿರುವ ಜನಮನ್ನಣೆ ಇಂತರ ಆಂಗ್ಲ ವಾಹಿನಿಗಳಿಗೆ ಬಿಸಿಮುಟ್ಟಿಸಿದೆ.[ಅರ್ನಬ್ ಗೋಸ್ವಾಮಿ ವಾಪಸ್ : ಟ್ವಿಟ್ಟರಲ್ಲಿ ಭರ್ಜರಿ ಹಾಸ್ಯೋತ್ಸವ]

ಕ್ರಿಮಿನಲ್ ಜನಪ್ರತಿನಿಧಿಯೊಂದಿಗಿನ ಲಾಲೂ ಸಂಭಾಷಣೆ ಮತ್ತು ಸುನಂದಾ ಪುಷ್ಕರ್ ಸಂಶಯಾಸ್ಪದ ಸಾವಿನ ಬಗೆಗಿನ ಟೇಪ್ ಇಟ್ಟುಕೊಂಡು ಅರ್ನಬ್, ಲಾಲೂ ಪ್ರಸಾದ್ ಯಾದವ್ ಮತ್ತು ಶಶಿ ತರೂರ್ ಅವರನ್ನು ಕಾರ್ಯಕ್ರಮದಲ್ಲಿ ಸರಿಯಾಗಿ ರುಬ್ಬಿದ್ದರು.

ಬಾರ್ಕ್ ಬಿಡುಗಡೆಗೊಳಿಸಿದ ರ್ಯಾಂಕಿಂಗ್ ಪ್ರಕಾರ, ರಾಷ್ಟ್ರೀಯ ಇಂಗ್ಲಿಷ್ ವಾಹಿನಿಗಳಲ್ಲಿ ಸದ್ಯ ಯಾರು ಟಾಪ್? ಮುಂದೆ ಓದಿ..

ಬಾರ್ಕ್ ಬಿಡುಗಡೆಗೊಳಿಸಿದ ರೇಟಿಂಗ್

ಬಾರ್ಕ್ ಬಿಡುಗಡೆಗೊಳಿಸಿದ ರೇಟಿಂಗ್

ಬಾರ್ಕ್ ಬಿಡುಗಡೆಗೊಳಿಸಿದ ರೇಟಿಂಗ್ ಪ್ರಕಾರ ರಿಪಬ್ಲಿಕ್ ವಾಹಿನಿ, ಶೇ. 52ರಷ್ಟು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೇ ಆರರಿಂದ ಹನ್ನೆರಡರವರೆಗಿನ ಅವಧಿಯಲ್ಲಿ ರಿಪಬ್ಲಿಕ್, ಟೈಮ್ಸ್ ನೌಗಿಂತ ಶೇ. 84.4 ಅಧಿಕ ಇಂಪ್ರೆಸನ್ ಪಡೆದುಕೊಂಡಿದೆ.

ಪತ್ರಿಕೋದ್ಯಮದ ನೈತಿಕತೆಗೆ ವಿರುದ್ದವಾಗಿ ರಿಪಬ್ಲಿಕ್ ವಾಹಿನಿ ಕೆಲಸ

ಪತ್ರಿಕೋದ್ಯಮದ ನೈತಿಕತೆಗೆ ವಿರುದ್ದವಾಗಿ ರಿಪಬ್ಲಿಕ್ ವಾಹಿನಿ ಕೆಲಸ

ಪತ್ರಿಕೋದ್ಯಮದ ನೈತಿಕತೆಗೆ ವಿರುದ್ದವಾಗಿ ರಿಪಬ್ಲಿಕ್ ವಾಹಿನಿಗಳ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು, ಈ ಕೂಡಲೇ ಟ್ರಾಯ್ ಮಧ್ಯಪ್ರವೇಶಿಸಿ, ರಿಪಬ್ಲಿಕ್ ವಾಹಿನಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಶಿಯೇಷನ್ ಆಗ್ರಹಿಸಿದೆ. (ಚಿತ್ರ: ಇಂಡಿಯಾ ಟೆಲಿವಿಶನ್)

ಧನ್ಯವಾದ ಸಲ್ಲಿಸಿದ ಅರ್ನಬ್

ಇವೆಲ್ಲದರ ನಡುವೆ ರಿಪಬ್ಲಿಕ್ ವಾಹಿನಿಯ ಎಡಿಟರ್-ಇನ್-ಚೀಫ್ ಅರ್ನಬ್ ಗೋಸ್ವಾಮಿ ಟ್ವೀಟ್ ಮಾಡಿದ್ದು, ಎಲ್ಲಾ ಷಡ್ಯಂತ್ರ, ಬೆದರಿಕೆಯ ನಂತರವೂ ನಮ್ಮ ವಾಹಿನಿಯನ್ನು ನಂಬರ್ ಒನ್ ಮಾಡಿದ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

 ಕ್ವಿಂಟ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಯಾರು ನಂಬರ್ ಒನ್

ಕ್ವಿಂಟ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಯಾರು ನಂಬರ್ ಒನ್

ಕ್ವಿಂಟ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಯಾರಿಗೆ ಎಷ್ಟನೇ ಸ್ಥಾನ (ಇಂಪ್ರೆಸನ್, ಸಾವಿರದ ಲೆಕ್ಕದಲ್ಲಿ)
ರಿಪಬ್ಲಿಕ್ - 2,117
ಟೈಮ್ಸ್ ನೌ - 1,448
ಎನ್ಡಿಟಿವಿ 24X7 - 352
ಇಂಡಿಯಾ ಟುಡೇ - 350
ಸಿಎನ್ಎನ್ ನ್ಯೂಸ್ 18 - 315

ರಾಹುಲ್ ಕನ್ವಲ್ ಟ್ವೀಟ್

ರಿಪಬ್ಲಿಕ್ ವಾಹಿನಿ ಎರಡೆರಡು ಬಾರಿ ಪುನರಾವರ್ತನೆಗೊಳ್ಳುತ್ತಿದೆ ಎಂದು ಇಂಡಿಯಾ ಟುಡೇಯ ಮ್ಯಾನೇಜಿಂಗ್ ಎಡಿಟರ್ ರಾಹುಲ್ ಕನ್ವಲ್ ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Less than 2 weeks after Arnab Goswami's Republic TV was launched, the Broadcast Audience Research Council (BARC) has released the viewership data for the week commencing 6 to May 12, which puts Republic at the top spot in the English news channel category in India.
Please Wait while comments are loading...