ಟೈಮ್ಸ್ ಸಮೂಹದಿಂದ ಅರ್ನಬ್ ಮೇಲೆ ಕ್ರಿಮಿನಲ್ ಕೇಸ್

By: ಅನುಷಾ ರವಿ
Subscribe to Oneindia Kannada

ಮುಂಬೈ, ಮೇ 17: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಅವರ ಹಳೆಯ ಬಾಸ್ ಕ್ರಿಮಿನಲ್ ದೂರು ಸಲ್ಲಿಸಿದ್ದಾರೆ.

ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಟೈಮ್ಸ್ ನೌ ಚಾನಲ್ ನ ಮಾತೃ ಸಂಸ್ಥೆ ಬೆನೆಟ್, ಕೋಲ್ಮನ್ ಆ್ಯಂಡ್ ಕಂಪೆನಿ ಲಿಮಿಟೆಡ್ (ಬಿಸಿಸಿಎಲ್) ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಟಿವಿ ವರದಿಗಾರ್ತಿ ಪ್ರೇಮ ಶ್ರೀದೇವಿ ವಿರುದ್ಧ ಕೃತಿಸ್ವಾಮ್ಯ ಉಲ್ಲಂಘನೆ ದೂರು ದಾಖಲಿಸಿದೆ.[ಅರ್ನಬ್ ಗೋಸ್ವಾಮಿ ವಾಪಸ್ : ಟ್ವಿಟ್ಟರಲ್ಲಿ ಭರ್ಜರಿ ಹಾಸ್ಯೋತ್ಸವ]

ಮುಂಬೈನ ಅಝಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ. ಕಳ್ಳತನ, ವಿಶ್ವಾಸದ್ರೋಹ, ಆಸ್ತಿ ದುರ್ಬಳಕೆ ಹಾಗೂ ಬಿಸಿಸಿಎಲ್ ನಿಯಮಗಳ ಉಲ್ಲಂಘನೆ ಪ್ರಕರಣವನ್ನು ದಾಖಲಿಸಲಾಗಿದೆ.

 Former bosses file criminal case against Arnab Goswami

ಮೇ 6 ಮತ್ತು 8ರಂದು ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಿದ ಆಡಿಯೋ ಮತ್ತು ವೀಡಿಯೋ ಟೈಮ್ಸ್ ನೌ ವಾಹಿನಿಗೆ ಸೇರಿದ್ದು. ಕಾಪಿರೈಟ್ ಉಲ್ಲಂಘನೆ ಮಾಡಿ ಅರ್ನಬ್ ಗೋಸ್ವಾಮಿ ಮತ್ತು ಪ್ರೇಮ ಶ್ರೀದೇವಿ ಆಡಿಯೋ ಮತ್ತು ವೀಡಿಯೋ ಪ್ರಸಾರ ಮಾಡಿದ್ದಾರೆ ಎಂದು ದೂರಿನಲ್ಲಿ ಕಂಪೆನಿ ಹೇಳಿದೆ.

ಅವರೆಲ್ಲಾ ಬಿಸಿಸಿಎಲ್ ಉದ್ಯೋಗಿಗಳಾಗಿದ್ದ ಅವಧಿಯಲ್ಲಿ ಇದನ್ನು ಸಂಗ್ರಹಿಸಿದ್ದರು ಎಂದು ಕಂಪೆನಿ ಮಾಹಿತಿ ನೀಡಿದೆ.

ಮಾರ್ಚ್ 6ರಂದು ತನ್ನ ಚಾನಲ್ ಉದ್ಘಾಟನೆಯ ದಿನ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗೂ ಜೈಲಿನಲ್ಲಿರುವ ಶಹಾಬುದ್ದೀನ್ ನಡುವೆ ನಡೆದ ಫೋನ್ ಸಂಭಾಷಣೆಯನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು.[ಮೊದಲ ಪ್ರಸಾರದಲ್ಲೇ ಲಾಲೂ ವಿರುದ್ದ ಅರ್ನಬ್ ಸರ್ಜಿಕಲ್ ಸ್ಟ್ರೈಕ್]

ಇನ್ನು ಮೇ 8ರಂದು ಶ್ರೀದೇವಿ ಸುನಂದಾ ಪುಷ್ಕರ್ ಜತೆ ಮಾತನಾಡಿದ ಆಡಿಯೋ ತುಣುಕನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಇದು ಆಕೆ ಟೈಮ್ಸ್ ನೌ ವಾಹಿನಿಯಲ್ಲಿದ್ದಾಗ ರೆಕಾರ್ಡ್ ಮಾಡಿದ ಆಡಿಯೋ ಎಂದು ಬಿಸಿಸಿಎಲ್ ವಾದಿಸಿದೆ.

ಇಬ್ಬರೂ ಟೈಮ್ಸ್ ನೌ ನಲ್ಲಿದ್ದಾಗ ಈ ಆಡಿಯೋ ಟೇಪ್ ಗಳನ್ನು ರೆಕಾರ್ಡ್ ಮಾಡಿ ಇದೀಗ ಬೇರೊಂದು ಸಂಸ್ಥೆಗೆ ಅವುಗಳನ್ನು ಬಳಸಿಕೊಂಡಿದ್ದಾರೆ. ಇಬ್ಬರೂ ಗೊತ್ತಿದ್ದು, ಬೆಂಕೆಂದೇ, ಎಲ್ಲಾ ಅರಿವಿದ್ದು ಈ ಕೃತ್ಯ ನಡೆಸಿದ್ದಾರೆ. ಈ ಮೂಲಕ ಟೈಮ್ಸ್ ನೌ ಆಸ್ತಿಯನ್ನು ದುರ್ಬಳಕೆ ಮಾಡಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 403ರ ಅಡಿಯಲ್ಲಿ ಹಾಗೂ ಇತರ ಕಾನೂನುಗಳ ಅ಻ಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಂಪೆನಿ ದೂರಿನಲ್ಲಿ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A criminal case has been filed against journalist and founder of Republic TV, Arnab Goswami. His former employers Bennett, Coleman & Co Ltd filed a complaint accusing Goswami and reporter of Republic TV Prema Sridevi of copyright infringement.
Please Wait while comments are loading...