Get Updates
Get notified of breaking news, exclusive insights, and must-see stories!

ಅರ್ನಬ್ ಗೋಸ್ವಾಮಿ ವಾಪಸ್ : ಟ್ವಿಟ್ಟರಲ್ಲಿ ಭರ್ಜರಿ ಹಾಸ್ಯೋತ್ಸವ

ಅರ್ನಬ್ ಗೋಸ್ವಾಮಿಯ ಹೊಸ ಚಾನೆಲ್ ರಿಪಬ್ಲಿಕ್ ಶನಿವಾರದಿಂದ (ಮೇ 6) ಪ್ರಸಾರ ಆರಂಭಿಸಿದೆ. ಅರ್ನಬ್ ಹಾಗೂ ಅವರ ಹೊಸ ಚಾನೆಲ್ ಬಗ್ಗೆ ಟ್ವಿಟ್ಟರ್ ನಲ್ಲಿ ಕೇಳಿಬರುತ್ತಿರುವ ಮಾತುಗಳ ಆಯ್ದು ಇಲ್ಲಿ ಕೊಡಲಾಗಿದೆ

ಬೆಂಗಳೂರು, ಮೇ 6: ಪತ್ರಿಕೆಯಲ್ಲಿ ಸ್ವಲ್ಪ ದಿನ ಬೈಲೈನ್ ಬರದಿದ್ದರೆ, ಮುಖ ಟಿವಿಯಲ್ಲಿ ಕಾಣದಿದ್ದರೆ, ಅಷ್ಟೇ ಯಾಕೆ ಒಂದಾರು ತಿಂಗಳು ವೃತ್ತಿಯಿಂದ ದೂರವಿದ್ದರೆ ಹೊಸ ಪಟ್ಟುಗಳು ಬಂದು ಬಿಟ್ಟಿರುತ್ತವೆ, ಜನ ಆ ವ್ಯಕ್ತಿಯ ಮುಖ, ಹೆಸರು ಮರೆತು ಹೋಗಿರ್ತಾರೆ. ಮುಖ್ಯವಾಗಿ ಬೇರೆ ವ್ಯಕ್ತಿ, ಸುದ್ದಿ, ಪತ್ರಿಕೆ ಅಥವಾ ಟಿವಿಗೆ ಹೊಂದಿಕೊಂಡು ಬಿಟ್ಟಿರ್ತಾರೆ.

ಇದಮಿತ್ಥಂ, ಇದು ಹೀಗೇ ವರ್ಕೌಟ್ ಆಗುತ್ತೆ ಅಂತ ಕರಾರುವಾಕ್ ಆಗಿ ಹೇಳುವುದಂತೂ ದೂರದ ಮಾತಾಯಿತು ಬಿಡಿ. ಆದರೆ ಈ ಮನುಷ್ಯನ ಬಗ್ಗೆ ಒಂದು ಬಗೆಯ ವಿಶ್ವಾಸ. ಏನ್ ಮಾತಾಡ್ತಾನೆ ಗುರೂ ಅಂತ ಆಶ್ಚರ್ಯ ಇತ್ತು. ಕೆಲ ತಿಂಗಳಿಂದ ತನ್ನ ಹೊಸ ಚಾನೆಲ್ ನ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಆ ವ್ಯಕ್ತಿ ಶನಿವಾರ (ಮೇ 6) ಹಿಂತಿರುಗಿದ್ದಾರೆ.[ಮೊದಲ ಪ್ರಸಾರದಲ್ಲೇ ಲಾಲೂ ವಿರುದ್ದ ಅರ್ನಬ್ ಸರ್ಜಿಕಲ್ ಸ್ಟ್ರೈಕ್]

ಆತನ ಹೆಸರು ಅರ್ನಬ್ ಗೋಸ್ವಾಮಿ. ಬರೀ ಪತ್ರಕರ್ತ ಎಂದು ಪರಿಚಯಿಸುವಷ್ಟು ಸಲೀಸಾದ ವ್ಯಕ್ತಿಯಲ್ಲ. ಏಕೆಂದರೆ ಆತ ಬ್ರ್ಯಾಂಡ್. ಫೈರ್ ಬ್ರ್ಯಾಂಡ್. ಚಾನೆಲ್ ನಡೆಸುವುದು ಅಂದರೆ ಜನರ ವಿಶ್ವಾಸವೂ ಉಳಿಸಿಕೊಳ್ಳಬೇಕು. ಕೆಲಸ ಮಾಡುವ ಪತ್ರಕರ್ತರ ಹೊಟ್ಟೆಯೂ ತುಂಬಬೇಕು. ಎರಡರ ಸವಾಲನ್ನೂ ತೆಗೆದುಕೊಂಡಿರುವ ಅರ್ನಬ್ ಗೋಸ್ವಾಮಿ ಬಗ್ಗೆ ಟ್ವಿಟ್ಟರ್ ನಲ್ಲಿ ಬಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಬಗ್ಗೆ ನಿಮ್ಮ ಗಮನಕ್ಕೂ ಇರಲಿ ಎಂದು ಇಲ್ಲಿ ಕೊಡ್ತಿದ್ದೀವಿ.

ಅಭಿಷೇಕ್ ಜೈನ್

ಫೋಟೋ 1-ಅರ್ನಬ್ ಅಭಿಮಾನಿಗಳು ಆತನಿಗಾಗಿ ಕಾಯುತ್ತಿರುವುದು
ಫೋಟೋ 2-ಅರ್ನಬ್ ಆಗಮನ
ಫೋಟೋ 3- ಅಂತಿಮ ತೀರ್ಮಾನ

ಅಭಿಷೇಕ್ ಚೌಹಾನ್

ಮೊದಲ ದಿನ ಮೊದಲ ಧಮಾಕಾ
ಹತ್ಯೆ ಆರೋಪಿ ಮೊಹ್ಮದ್ ಶಹಾಬುದ್ದೀನ್ ನಿಂದ ಲಾಲೂ ಪ್ರಸಾದ್ ಯಾದವ್ ಸೂಚನೆಗಳನ್ನು ಸ್ವೀಕರಿಸುತ್ತಿರುವುದು

ಕೃಷ್ಣಾ

ಬರ್ಕಾ ದತ್ ರಿಪಬ್ಲಿಕ್ ಟಿವಿ ನೋಡ್ತಿದ್ದಾರೆ.

ಧವಲ್ ಪಟೇಲ್

ರಾಷ್ಟ್ರೀಯತಾ ವಾದಿಗಳು ಅರ್ನಬ್ ಗೋಸ್ವಾಮಿ ಅವರಿಗೆ ಕವಚ ತೊಡಿಸಿ ಸ್ವಾಗತಿಸುತ್ತಿದ್ದಾರೆ ಎಂಬರ್ಥದ ಪೋಸ್ಟ್

ಭೈಯ್ಯಾಜಿ

ಲಾಲೂ ಪ್ರಸಾದ್ ರನ್ನು ಬಯಲು ಮಾಡಿದ ಅರ್ನಬ್ ರನ್ನು ಬಲಪಂಥೀಯರು ಸೆಲ್ಯೂಟ್ ಮಾಡಿ ಸ್ವಾಗತಿಸುತ್ತಾರೆ.

ದ ಮಸ್ಕಡಾಸ್

ಬರ್ಕಾ, ಬೋನಿ ಮತು ಕ್ಲೈಡ್ ಲಾಲೂ ಪ್ರಸಾದ್ ಜತೆ ಹೇಗಿದ್ದರು ನೋಡಿ. ಅರ್ನಬ್ ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿದ್ದಾರೆ. ಟಿಆರ್ ಪಿ ಬರುವುದರಲ್ಲಿ ಅನುಮಾನವೇ ಇಲ್ಲ

ಅಲಿಯಾಸ್ ಓಂಕಾರ್

ಲೌಡ್ ಸ್ಪೀಕರ್ ರಿಪೇರಿ ನಂತರ ವಾಪಸಾಗಿದೆ.

ಅನುಪಮ್ ಖೇರ್

ಪ್ರಿಯ ಅರ್ನಬ್ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಒಳ್ಳೆದಾಗಲಿ. ಹೊಸ ಆರಂಭಕ್ಕೆ ಶುಭವಾಗಲಿ. ಜೈ ಹೋ

ರವಿ

ಈ ಫೋಟೋಗಳು ಅರ್ನಬ್ ಗೋಸ್ವಾಮಿ ಏನು ಅನ್ನೋದನ್ನು ತಿಳಿಸುತ್ತವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+