ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಗೆ ಶುಭಾಶಯದ ಮಹಾಪೂರ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 7: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ(The Armed Forces Flag Day ಅಥವಾ Flag Day)ಯನ್ನು ಡಿಸೆಂಬರ್ 7 ರಂದು ದೇಶದಾದ್ಯಂತ ಆಚರಿಸಲಾಗುತ್ತದೆ.

ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ವಿಭಿನ್ನವಾಗಿ ಈ ದಿನವನ್ನು 1949 ರಿಂದಲೂ ಆಚರಿಸುತ್ತ ಬರಲಾಗುತ್ತಿದೆ. ಪ್ರತಿವರ್ಷವೂ ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಎಲ್ಲಾ ಸೈನಿಕರಿಗೂ ಗೌರವ ನೀಡುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಭಾರತೀಯ ನೌಕಾದಿನ: ನೌಕಾಪಡೆ ಕುರಿತು ಹೆಮ್ಮೆಪಡುವ 10 ಸಂಗತಿ

ಸ್ವಾತಂತ್ರ್ಯಾನಂತರ ಭಾರತಕ್ಕೆ, ತನ್ನ ದೇಶವನ್ನು ಕಾಯುವ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಏನನ್ನಾದರೂ ಮಾಡಬೇಕು ಎಂಬ ಯೋಚನೆ ಬಂತು. ಇದರ ಫಲವಾಗಿ ಪುಟ್ಟ ಧ್ವಜವನ್ನು ಸಾರ್ವಜನಿಕರಿಗೆ ನೀಡಿ, ಅವರ ಮೂಲಕ ಕೈಲಾದಷ್ಟು ದೇಣಿಗೆ ಪಡೆದು, ಅದನ್ನು ಸೇನೆಗೆ ಅರ್ಪಿಸುವ ಈ ಮಹೋನ್ನತ ಕೆಲಸ ಆರಂಭವಾಯಿತು.

ಭಾರತೀಯ ಸೇನೆ ಸೇರ್ಪಡೆಗೆ ಕರ್ನಾಟಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಈ ದೇಣಿಗೆಯಿಂದ ಸಂಗ್ರಹವಾದ ಹಣವನ್ನು ಸೈನಿಕರು ಮತ್ತು ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ, ಯುದ್ಧದ ಸಮಯದ ಅಗತ್ಯಕ್ಕೆ, ಮಾಜಿ ಸೈನಿಕರು ಮತ್ತವರ ಕುಟುಂಬದ ಕಲ್ಯಾಣಕ್ಕೆ ಬಳಸಲಾಗುತ್ತದೆ.

ಟ್ವಿಟ್ಟರ್ ನಲ್ಲೂ The Armed Forces Flag Day ಅಥವಾ Flag Day ಟ್ರೆಂಡಿಂಗ್ ಆಗಿದ್ದು, ಹಲವರು ಸೈನಿಕರ ಶೌರ್ಯ, ತ್ಯಾಗವನ್ನು ಈ ಮೂಲಕ ನೆನಪಿಸಿಕೊಂಡಿದ್ದಾರೆ.

ಮನೋಹರ್ ಪಾರಿಕ್ಕರ್

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ಎಲ್ಲಾ ವೀರ ಸೈನಿಕರಿಗೂ, ಹುತಾತ್ಮ ಯೋಧರಿಗೂ ನನ್ನ ನಮನಗಳು. ಭದ್ರತಾ ಪಡೆಯ ಧ್ವಜವನ್ನು ಅತ್ಯಂತ ಹೆಮ್ಮೆಯಿಂದ ಧರಿಸಿ, ಮತ್ತು ನಿಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಟ್ವೀಟ್ ಮಾಡಿದ್ದಾರೆ.

ಸುರೇಶ್ ಪ್ರಭು

ತಾಯ್ನೆಲವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಸೈನಿಕರಿಗೂ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ನನ್ನ ಸೆಲ್ಯೂಟ್ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ

ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕರಿಗೂ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ನನ್ನ ನಮನಗಳು. ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರಿಗೆ ನೆರವು ನೀಡಲು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಒಂದು ಉತ್ತಮ ಅವಕಾಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಓಂ ಪ್ರಕಾಶ್ ಮಾಥೂರ್

ನಾವು ರಾತ್ರಿ ನೆಮ್ಮದಿಯ ನಿದ್ದೆ ಮಾಡುತ್ತಿದ್ದರೆ ಅದಕ್ಕೆ ಕಾರಣರಾದ ನಮ್ಮ ಸೈನಿಕರ ಧೈರ್ಯ ಮತ್ತು ತ್ಯಾಗಕ್ಕೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ನನ್ನ ಶುಭಾಶಯಗಳು, ನಮನಗಳು ಎಂದು ರಾಜ್ಯಸಭಾ ಸದಸ್ಯ ಓಂ ಪ್ರಕಾಶ್ ಮಾಥುರ್ ಟ್ವೀಟ್ ಮಾಡಿದ್ದಾರೆ.

ವಸುಂಧರಾ ರಾಜೆ

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ನಮ್ಮೆಲ್ಲ ವೀರ ಸೈನಿಕರಿಗೆ ನಮನಗಳು. ನಾವು ಎಂದಿಗೂ ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಿಸುವ ಸೈನಿಕರ ಪರವಾಗಿ ಒಗ್ಗಟ್ಟಾಗಿರುವ ಪಣತೊಡೋಣ ಎಂದು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Armed Forces Flag Day or the Flag Day of India is a day dedicated to India towards collection of funds from people of India for the welfare of the Indian Armed Forces personnel. It has been observed annually in India on December 7 since 1949. #ArmedForcesFlagDay is trending on twitter now.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ