ಮೊಬೈಲ್ ಫೋನ್ ಮೂಲಕ ಪಾಸ್ ಪೋರ್ಟ್ ಅರ್ಜಿ, ಬರಲಿದೆ ಸೇವಾ App

ನವದೆಹಲಿ, ಜೂನ್ 26: ದೇಶದ ಯಾವುದೇ ಭಾಗದಲ್ಲಿರಬಹುದು, ಪಾಸ್ ಪೋರ್ಟ್ ಗೆ ಮೊಬೈಲ್ ಫೋನ್ ನಲ್ಲಿ ಪಾಸ್ ಪೋರ್ಟ್ ಸೇವಾ App ಮೂಲಕವೇ ಅರ್ಜಿ ಹಾಕಿಕೊಳ್ಳಬಹುದು ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಎಎನ್ ಐ ಈ ಬಗ್ಗೆ ವರದಿ ಮಾಡಿದೆ. ಪಾಸ್ ಪೋರ್ಟ್ ಗೆ ಅರ್ಜಿ ಹಾಕಿಕೊಳ್ಳುವುದೊಂದಕ್ಕೆ ಅಲ್ಲ, ಮೊಬೈಲ್ ಫೋನ್ ನ ಈ Appನಲ್ಲಿ ನೀಡಿದ ವಿಳಾಸದ ಮೂಲಕವೇ ಇತರ ಪ್ರಕ್ರಿಯೆಗಳು ಕೂಡ ನಡೆಯುತ್ತವೆ. "ಪಾಸ್ ಪೋರ್ಟ್ ಸೇವಾ Appನಲ್ಲಿ ನೀಡಿದ ವಿಳಾಸದ್ದೇ ಪೊಲೀಸ್ ವೆರಿಫಿಕೇಷನ್ ಹಾಗೂ ಅದೇ ವಿಳಾಸಕ್ಕೆ ಪಾಸ್ ಪೋರ್ಟ್ ತಲುಪುತ್ತದೆ" ಎಂದು ಸುಷ್ಮಾ ಹೇಳಿದ್ದಾರೆ.

ಅಂತರ್ ಧರ್ಮೀಯ ದಂಪತಿ ಪಾಸ್ ಪೋರ್ಟ್ ವಿಚಾರವಾಗಿ ಅಧಿಕಾರಿಯೊಬ್ಬರ ವಿರುದ್ಧ ಆರೋಪ ಬಂದಾಗ ತಕ್ಷಣವೇ ಆ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಹೀಗೆ ನಡೆದುಕೊಂಡ ಬಗ್ಗೆ ಆಕ್ಷೇಪ ಕೇಳಿಬಂದಿದೆ. ಸಚಿವೆ ಪೂರ್ವಗ್ರಹದಿಂದ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಹಲವರ ಆಕ್ಷೇಪವಾಗಿದೆ.

Apply Passport Easily on Mobile via Passport Seva App

ಅಧಿಕಾರಿ ತನ್ನ ಕರ್ತವ್ಯವನ್ನಷ್ಟೇ ಮಾಡಿದ್ದಾರೆ. ಆ ದಂಪತಿ ಪೈಕಿ ಮಹಿಳೆ ತಪ್ಪಾದ ದಾಖಲಾತಿಯೊಂದಿಗೆ ಅರ್ಜಿ ಹಾಕಿದ್ದರು ಎಂದು ಆ ನಂತರ ಗೊತ್ತಾಗಿದೆ. ಇಷ್ಟಾದ ಮೇಲೆ ಸುಷ್ಮಾ ಸ್ವರಾಜ್ ರ ರಾಜೀನಾಮೆಗೆ ಆಗ್ರಹಿಸಲಾಯಿತು. ಜೂನ್ ಹದಿನೇಳರಿಂದ ಇಪ್ಪತ್ಮೂರರವರೆಗೆ ಸುಷ್ಮಾ ಸ್ವರಾಜ್ ದೇಶದಿಂದ ಹೊರಗಿದ್ದರು. ಆದ್ದರಿಂದ ಏನಾಗುತ್ತಿದೆ ಎಂಬ ಬಗ್ಗೆ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+