Ration Card: ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್
Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬರೀ ರೇಷನ್ ಪಡೆಯಲು ಅಷ್ಟೇ ಅಲ್ಲದೆ, ಸರ್ಕಾರಿ ಯೋಜನೆ ಪಡೆಯಲು ಸೇರಿದಂತೆ ಹಲವು ಅರ್ಜಿ ಸಲ್ಲಿಕೆ ವೇಳೆ ಇದು ಅತ್ಯಗತ್ಯವಾಗಿದೆ. ಇನ್ನೂ ಈ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇನ್ಮುಂದೆ ನೀವು ಆನ್‌ಲೈನ್ ಸೆಂಟರ್‌ಗಳ ಬಳಿ ದಿನಗಟ್ಟಲೇ ಕಾಯುವ ಅವಶ್ಯಕತೆ ಇರುವುದಿಲ್ಲ. ಇದ್ದಲ್ಲಿಯೇ ಈ ಪ್ರಕ್ರಿಯೆಯನ್ನು ಮುಗಿಸಬಹುದು. ಹಾಗಾದ್ರೆ ಪಾಲಿಸಬೇಕಾದ ಸರಳ ಮಾರ್ಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ.
ಸದ್ಯ ಇದೀಗ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಅವುಗಳನ್ನು ಎಪಿಎಲ್‌ಗೆ ವರ್ಗಾವಣೆ ಕಾರ್ಯ ಮುಂದುವರೆದಿದೆ. ಈ ಮೂಲಕ ಇಷ್ಟು ದಿನ ಬಡವರಿಗೆ ಸಿಗಬೇಕಾದ ಅನ್ನ ಹಾಗೂ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದ ಅನರ್ಹರಿಗೆ ಶಾಕ್ ಕೊಟ್ಟಿದೆ. ಈ ನಡುವೆಯೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ.

ಇಷ್ಟು ದಿನ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಲು ಜನರು ಆನ್‌ಲೈನ್ ಸೇಂಟರ್‌ಗಳ ಮುಂದೆ ದಿನಗಟ್ಟಲೇ ಕಾಯಬೇಕಿತ್ತು. ಆದರೆ, ಇದೀಗ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದ್ದು, ತಾವು ಇದ್ದಲ್ಲಿಯೇ ಅರ್ಜಿ ಸಲ್ಲಿಕೆ ಮಾಡಬಹುದು. ಹೇಗೆ ಎನ್ನವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿರುತ್ತದೆ. ಅದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ತಗಮನಿಸಿ.
ಇದೀಗ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಮನೆಯಿಂದಲೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ನೀವು ಇನ್ನೂ ಪಡಿತರ ಚೀಟಿ ಹೊಂದಿಲ್ಲದಿದ್ದರೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ದಿನಗಟ್ಟಲೇ ಸರದಿಯಲ್ಲಿ ನಿಂತುಕೊಳ್ಳುತ್ತಿದ್ದವರಿಗೆ ಈ ಉಪಕ್ರಮದಿಣದ ತುಂಬಾ ಸಹಾಯ ಆದಂತಾಗಲಿದೆ.
ನೀವು ಇದ್ದಲಿಯೇ ಮನೆಯಿಂದಲೇ UMANG ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ನೂತನ ಉಪಕ್ರಮವು ಅಗತ್ಯ ಸರ್ಕಾರಿ ಯೋಜನೆಗಳಿಗೆ ಪ್ರವೇಶವನ್ನು ಸುಲಭ, ವೇಗ ಮತ್ತು ಹೆಚ್ಚು ಪಾರದರ್ಶಕ ಆಗಿಸುವ ಗುರಿಯನ್ನು ಹೊಂದಿದೆ ಅಂತಲೇ ಹೇಳಬಹುದಾಗಿದೆ.
UMANG ಒಂದು ಸರ್ಕಾರಿ ಅಪ್ಲಿಕೇಶನ್ ಆಗಿದ್ದು, ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸೇವೆಗಳನ್ನು ಇದ್ದಲಿಯೇ ಪಡೆದುಕೊಳ್ಳಬಹದು. ಈ ಅಪ್ಲಿಕೇಶನ್ ಮೂಲಕ ನಾಗರಿಕರು ಪ್ರಮುಖ ಯಾವುದೇ ದಾಖಲೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಯುಟಿಲಿಟಿ ಬಿಲ್ ಪಾವತಿ, ಪಿಂಚಣಿ ಯೋಜನೆಗಳ ಪ್ರವೇಶ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದೀಗ ಇದರಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲ ಆದಂತಾಗಿದೆ.
ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಕೆ ಹಾಗೂ ಅಪ್ಲಿಕೇಶನ್ ಡೌನ್‌ಲೋಡ್ ಪ್ರಕ್ರಿಯೆ
* ಮೊದಲು Google Play Store ಅಥವಾ Apple App Storeನಿಂದ UMANG ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನೋಂದಾಯಿಸಿ.
* ನಿಮ್ಮ ಮೊಬೈಲ್ ಸಂಖ್ಯೆಯನ್ನು ಮೂಲಕ ನೋಂದಾಣಿ ಮಾಡಿಕೊಳ್ಳಿ ಮತ್ತು ಮೂಲ ಸೆಟಪ್ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸೇವೆಯನ್ನು ಆಯ್ಕೆ ಮಾಡಿ
* ಲಾಗಿನ್ ಆದ ಬಳಿಕ ಮುಖಪುಟ ಪರದೆಯಲ್ಲಿರುವ ಸೇವೆಗಳ ವಿಭಾಗಕ್ಕೆ ಭೇಟಿ ನೀಡಿ.
* ಯುಟಿಲಿಟಿ ಸೇವೆಗಳಿಗೆ ನ್ಯಾವಿಗೇಟ್ ಮಾಡಿ ಪಡಿತರ ಚೀಟಿ ಆಯ್ಕೆಯನ್ನು ಕ್ಲಿಕ್ ಮಾಡಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ.
* ಪಡಿತರ ಚೀಟಿ ಅನ್ವಯಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಬಳಿಕ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ.
* ಆ್ಯಪ್ ಡಿಜಿಟಲ್ ಅರ್ಜಿ ನಮೂನೆಯನ್ನು ತೆರೆಯುತ್ತದೆ.
* ನಿಮ್ಮ ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಕುಟುಂಬ ಸದಸ್ಯರ ಮಾಹಿತಿ ಸೇರಿದಂತೆ ಅಗತ್ಯ ಇರುವ ಎಲ್ಲಾ ವಿವರಗಳನ್ನು ಜಾಗ್ರತೆಯಿಂದ ನಮೂದಿಸಬೇಕಾಗುತ್ತದೆ.
* ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಅಥವಾ ಚಿತ್ರಗಳನ್ನು ಲಗತ್ತಿಸಬೇಕು.
* ಸಬ್ಮಿಟ್ ಮೇಲೆ ಕ್ಲಿಕ್ ಮಾಡುವ ಮುಂಚಿತವಾಗಿ ಎಲ್ಲಾ ಮಾಹಿತಿಯನ್ನ ಎಚ್ಚರಿಕೆಯಿಂದ ಪರಿಶೀಲಿಸಿ.
* ಬಳಿಕ ಅಪ್ಲಿಕೇಶನ್‌ನಿಂದ ನೇರವಾಗಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ನೀವು ಸ್ವೀಕೃತಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ಬಳಿಕ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಆದರೆ, ಈ ಸೌಲಭ್ಯ ಚಂಡೀಗಢ, ಲಡಾಖ್ ಮತ್ತು ದಾದ್ರಾ ಮತ್ತು ಹವೇಲಿಯಂತಹ ಕೆಲವು ಕಡೆಗಳಲ್ಲಿ ಮಾತ್ರ ಲಭ್ಯ ಇದೆ. ಆದರೆ, ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ಸಹ ಶೀಘ್ರದಲ್ಲಿಯೇ ಇದರ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications