'ಮೋದಿಗೆ ಯಾರಾದರೂ 'ಐ ಲವ್ ಯೂ' ಹೇಳಿದ್ದಾರಾ?: ಜಿಗ್ನೇಶ್ ಮೇವಾನಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 14: ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿಗೆ ಕೂತರೂ ನಿಂತರೂ ಪ್ರಧಾನಿ ನರೇಂದ್ರ ಮೋದಿಯದ್ದೇ ಧ್ಯಾನ ಎನಿಸುತ್ತದೆ. ವಿಶ್ವವೆಲ್ಲಾ ತಮ್ಮ ಪಾಡಿಗೆ ಪ್ರೇಮಿಗಳ ದಿನ ಆಚರಿಸಿಕೊಳ್ಳುತ್ತಿದ್ದರೆ ಇಂದೂ ಕೂಡ ಇದೇ ನೆಪದಲ್ಲಿ ಮೇವಾನಿ ಮೋದಿ ಅವರ ಕಾಲೆಳೆದಿದ್ದಾರೆ.

ಪ್ರೇಮಿಗಳ ದಿನ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ ನನಗಂತೂ ಸಾಕಷ್ಟು ಜನ ಹೇಳಿದ್ದಾರೆ ಆದರೆ 'ಮೋದಿ ಅವರಿಗೆ ಯಾರಾದರೂ 'ಐ ಲವ್‌ ಯೂ' ಹೇಳಿದ್ದಾರಾ?' ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಜಿಗ್ನೇಶ್ ಸಂಕಲ್ಪ

ಬಿಜೆಪಿಯ ಕೆಲವು ಸದಸ್ಯರು ಹಾಗೂ ಬಿಜೆಪಿ ಮಾತೃ ಸಂಸ್ಥೆ ಎಂದೇ ಗುರುತಿಸಿಕೊಳ್ಳುವ ಆರ್‌ಎಸ್‌ಎಸ್‌ ಮತ್ತು ಅದರ ಅಂಗ ಸಂಘಟನೆಗಳು ಪ್ರೇಮಿಗಳ ದಿನವನ್ನು ವಿರೋಧಿಸುವ ಕಾರಣ ಜಿಗ್ನೇಶ್ ಅವರು ಈ ರೀತಿ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

Any one proposed love to Modi: Jignesh Mevani

ಜಿಗ್ನೇಶ್ ಅವರ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಮೋದಿ ಅಭಿಮಾನಿಗಳು ಜಿಗ್ನೇಶ್ ಅವರನ್ನು ಟ್ವೀಟ್‌ ಮೂಲಕವೇ ಜಾಡಿಸಿದ್ದಾರೆ. ಮೋದಿ ಅವರಿಗೆ ಇಡೀ ದೇಶವೇ 'ಐ ಲವ್‌ ಯೂ' ಹೇಳುತ್ತದೆ ಎಂದು ಪ್ರತಿ ಉತ್ತರ ನೀಡಿದ್ದಾರೆ.

ಜಿಗ್ನೇಶ್ ಬೆಂಬಲಿಗರೂ ಕೆಲವರೂ ಟ್ವೀಟ್ ಮಾಡಿದ್ದು, 'ಮೋದಿ ಅವರು ಕದ್ದು ಮುಚ್ಚಿ ನವಾಜ್ ಷರೀಪ್‌ಗೆ ಐ ಲವ್‌ ಯೂ ಹೇಳಿದ್ದಾರೆ' ಆದರೆ ಅವರಿಗೆ ಯಾರೂ ಹೇಳಿಲ್ಲ ಎನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dalit Activist, Gujarat MLA Jignesh Mevani tweeted by asking 'Any One ever said I Love You' to Modi?'. Mevani's tweet gets different replies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ