ದೆಹಲಿಯ ಜಂತರ್ ಮಂತರ್‌ನಲ್ಲಿ ಭುಗಿಲೆದ್ದ ಮೀಸಲಾತಿ ಹಟಾವೋ ಆಂದೋಲನ: ಮೋದಿ ಸರ್ಕಾರಕ್ಕೆ ಹೊಸ ತಲೆನೋವು

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಹ್ಯಾಷ್‌ಟ್ಯಾಗ್‌ ಮೂಲಕ ಆರಂಭವಾಗಿದ್ದ ಮೀಸಲಾತಿ ವಿರೋಧಿ ಅಭಿಯಾನ ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿದೆ. ಜಂತರ್ ಮಂತರ್‌ನಲ್ಲಿ ರಿಸರ್ವೇಶನ್ ಹಟಾವೋ ಆಂದೋಲನ ಬ್ಯಾನರ್ ಅಡಿ ನಿನ್ನೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದರು.

ಪ್ರಸ್ತುತ ಚಾಲ್ತಿಯಲ್ಲಿರುವ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನ ರದ್ದುಗೊಳಿಸಿ, ಸಂಪೂರ್ಣವಾಗಿ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಮೀಸಲಾತಿ ನೀಡುವಂತೆ ಈ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಇದು ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಭಾರೀ ರಾಜಕೀಯ ಸವಾಲಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿದೆ.

Anti Reservation Protest

ಯಾರು ಈ ಹೋರಾಟದ ನೇತೃತ್ವ ವಹಿಸಿದ್ದಾರೆ?

ಇನ್‌ಸ್ಟಾಗ್ರಾಮ್‌ನಲ್ಲಿ ಹರ್ಷ ದುಬೆ ಎಂಬ ವಿದ್ಯಾರ್ಥಿ ಆರಂಭಿಸಿದ ಈ ಡಿಜಿಟಲ್ ಅಭಿಯಾನಕ್ಕೆ ಈಗ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಸ್ತುತ ಅನುರಾಧಾ ತಿವಾರಿ, ಅಜಿತ್ ಭಾರ್ತಿ ಮತ್ತು ನೇಹಾ ದಾಸ್ ಅವರಂತಹ ಪ್ರಮುಖ ಸಾಮಾಜಿಕ ಜಾಲತಾಣದ ಹೋರಾಟಗಾರರು ಹಾಗೂ ಸಕ್ರಿಯ ಕಾರ್ಯಕರ್ತರು ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ.

ವಿಶೇಷವೆಂದರೆ, ಸಮಾಜದ ಸಾಮಾನ್ಯ ವರ್ಗವನ್ನು ಪ್ರತಿನಿಧಿಸುವ ಕರ್ಣಿ ಸೇನೆ ಹಾಗೂ ರಣವೀರ್ ಸೇನೆಯಂತಹ ಪ್ರಬಲ ಮತ್ತು ಪ್ರಭಾವಿ ಸಂಘಟನೆಗಳು ಕೂಡ ಈ ರಿಸರ್ವೇಶನ್ ಹಟಾವೋ ಆಂದೋಲನಕ್ಕೆ ಸಾಥ್ ನೀಡಿವೆ. ಕೇವಲ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸೀಮಿತವಾಗಿದ್ದ ಈ ಆಕ್ರೋಶ ಇದೀಗ ವ್ಯವಸ್ಥಿತವಾದ ಹಾಗೂ ಪ್ರತಿಭಟನೆಯ ರೂಪ ಪಡೆದುಕೊಂಡಿದ್ದು, ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೇನು?

ಭಾರತದ ಮೀಸಲಾತಿ ವ್ಯವಸ್ಥೆಯಲ್ಲಿ ಮೂಲಭೂತ ಹಾಗೂ ಸಂಪೂರ್ಣ ಬದಲಾವಣೆಯಾಗಬೇಕು ಎಂಬುದು ಈ ಹೋರಾಟಗಾರರ ಪ್ರಮುಖ ಆಗ್ರಹ. ಜಾತಿಗಿಂತ ಕೇವಲ ಆರ್ಥಿಕ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನ ತಕ್ಷಣವೇ ಜಾರಿಗೆ ತರಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.

ಇದಲ್ಲದೆ, ಒಂದು ಕುಟುಂಬಕ್ಕೆ ಒಂದು ಮೀಸಲಾತಿ ಎಂಬ ಹೊಸ ನಿಯಮ ಜಾರಿಗೊಳಿಸಬೇಕು, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಾತಿ ವರ್ಗದವರಿಗೂ ಕನಿಷ್ಠ ಅರ್ಹತಾ ಅಂಕಗಳನ್ನ ನಿಗದಿಪಡಿಸಬೇಕು, ಭರ್ತಿಯಾಗದ ಮೀಸಲು ಸೀಟುಗಳನ್ನ ಸಾಮಾನ್ಯ ವರ್ಗಕ್ಕೆ ಹಂಚಿಕೆ ಮಾಡಲು ಡಿ-ರಿಸರ್ವೇಶನ್ ಮಾಡಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಯಾಗಿದೆ.

ಜೊತೆಗೆ, ಈಗಿರುವ ಶೇ.50ರ ಮೀಸಲಾತಿ ಮಿತಿಯನ್ನ ಯಾವುದೇ ಕಾರಣಕ್ಕೂ ವಿಸ್ತರಿಸದಿರುವುದು, ಮೀಸಲಾತಿ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯನ್ನ ಕಾಲಕಾಲಕ್ಕೆ ಮರುಪರಿಶೀಲಿಸುವುದು ಮತ್ತು ಮೀಸಲಾತಿಗೆ ಒಂದು ನಿರ್ದಿಷ್ಟ ಅಂತ್ಯದ ಗಡುವನ್ನ ವಿಧಿಸುವುದು ಅವರ ಬೇಡಿಕೆಗಳ ಪಟ್ಟಿಯಲ್ಲಿ ಸೇರಿವೆ. ಇದರೊಂದಿಗೆ ಇತ್ತೀಚಿನ ಯುಜಿಸಿಯ 2026ರ ಜಾತಿ ಸಮಾನತೆಯ ನಿಯಮಾವಳಿಗಳನ್ನ ಹಿಂಪಡೆಯುವಂತೆಯೂ ಆಗ್ರಹ ಕೇಳಿಬಂದಿದೆ.

ಮೋದಿ ಸರ್ಕಾರಕ್ಕೆ ಎದುರಾಗಲಿರುವ ದೊಡ್ಡ ಸವಾಲು

ಈ ಮೀಸಲಾತಿ ವಿರೋಧಿ ಪ್ರತಿಭಟನೆ ಕೇವಲ ಒಂದು ವರ್ಗದ ಬೇಡಿಕೆಯಾಗಿರದೆ, ಭವಿಷ್ಯದಲ್ಲಿ ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಸಂಘರ್ಷವನ್ನ ಸೃಷ್ಟಿಸುವ ಲಕ್ಷಣಗಳಿವೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ವಲ್ಪವೇ ಒಲವು ತೋರಿ, ಜಾತಿ ಆಧಾರಿತ ಮೀಸಲಾತಿಯನ್ನ ಕೈಬಿಟ್ಟು ಆರ್ಥಿಕ ಆಧಾರಿತ ವ್ಯವಸ್ಥೆಗೆ ಮುಂದಾದರೆ ಅಥವಾ ಮೀಸಲಾತಿಯನ್ನ ಕೇವಲ ಒಂದು ತಲೆಮಾರಿಗೆ ಸೀಮಿತಗೊಳಿಸುವ ಪ್ರಯತ್ನ ಮಾಡಿದರೆ, ಅದು ಭಾರೀ ವಿವಾದಕ್ಕೆ ಕಾರಣವಾಗಲಿದೆ.

ಶತಮಾನಗಳಿಂದ ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ನೀಡಲಾದ ಸಾಂವಿಧಾನಿಕ ರಕ್ಷಣೆ ಮತ್ತು ಪ್ರಾತಿನಿಧ್ಯವನ್ನ ದುರ್ಬಲಗೊಳಿಸುವ ವ್ಯವಸ್ಥಿತ ಯತ್ನ ಇದಾಗಿದೆ ಎಂದು ಪರಿಗಣಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಲಿವೆ.

ಈ ನಡೆ ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳನ್ನ ಸಹ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ದೂಡುವ ಸಾಧ್ಯತೆ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+