ತಮಿಳಿಗರಿಗೆ ಈಗ "ಸೂರ್ಯೋದಯ" ಅರ್ಥವಾಗಿದೆ ಎಂದ ಅಣ್ಣಾಮಲೈ, ಯಾಕೆ
ತಮಿಳುನಾಡಿನ ಕುಟುಂಬ ರಾಜಕೀಯಕ್ಕೆ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಕಿಡಿಕಾರಿದ್ದು, ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಅವರು ಮಾಡಿರುವ ಟ್ವೀಟ್ ಭಾರೀ ವೈರಲ್ ಆಗಿದೆ. ಈಗಲಾದರೂ ತಮಿಳುನಾಡು ಜನರಿಗೆ ಇವರ ಆಟ ತಿಳಿಯಲಿ ಎಂದು ಅಣ್ಣಾಮಲೈ ಹೇಳಿದ್ದಾರೆ. ಆಡಳಿತರೂಢ ಡಿಎಂಕೆ (ದ್ರಾವಿಡ ಮುನ್ನೇತ್ರಕಳಗಂ) ಬಗ್ಗೆ ಟಾಂಗ್‌ಕೊಟ್ಟಿದ್ದು, "ಸೂರ್ಯ" ಈ ಪಕ್ಷಕ್ಕೆ ಮಾತ್ರ ಎಂದಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಹೊಸ ಮಾದರಿಯ ಬದಲಾವಣೆ ಆಗಿದೆ. ಆದರೆ, ಈ ಬದಲಾವಣೆಗೆ ಆಡಳಿತರೂಢ ಡಿಎಂಕೆಯ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ತಮಿಳುನಾಡಿನ ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ರಾಜಕೀಯ ಸಮರ ತೀವ್ರವಾಗಿದೆ. ವಿರೋಧ ಪಕ್ಷದ ಜೊತೆಗೆ ಆಡಳಿತ ಪಕ್ಷದಿಂದಲೂ ಕೆಲವು ಅಸಮಾಧಾನ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಬಹಿರಂಗವಾಗಿ ಯಾರೂ ಸಹ ಮಾತನಾಡುತ್ತಿಲ್ಲ.

ಕೆಲವರಿಗಷ್ಟೇ ಸೂರ್ಯೋದಯ ಎಂದ ಅಣ್ಣಾಮಲೈ
ತಮಿಳುನಾಡಿನಲ್ಲಿ ಕೆಲವರಿಗೆ ಮಾತ್ರ ಸೂರ್ಯೋದಯ ಎಂದು ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಅವರು, ಸೂರ್ಯೋದಯ ಎನ್ನುವುದು ಕೆಲವರಿಗೆ ಮಾತ್ರ. ತಮಿಳುನಾಡಿನ ಉಳಿದ ಭಾಗ ಕಳೆದ 40 ತಿಂಗಳಿನಿಂದ ಗ್ರಹಣಕ್ಕೆ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಆಡಳಿತ ಪಕ್ಷದ ಚಿಹ್ನೆಯು ಸೂರ್ಯೋದಯದ ಸಂಕೇತವಾಗಿದೆ. ಇದನ್ನು ಉಲ್ಲೇಖಿಸಿ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ. ಸವಲತ್ತು ಇರುವ ಕೆಲವರಿಗೆ ಮಾತ್ರ ಸೂರ್ಯನ ಬೆಳಕು ಸಿಗುತ್ತದೆ (Sun shines for the privileged few). ತಮಿಳುನಾಡಿನ ಜನರಿಗೆ ಈಗಾಲಾದರೂ ನಿಜವಾದ ಸೂರ್ಯೋದಯ ಗೊತ್ತಾಗಿದೆ ಎಂದಿದ್ದಾರೆ.

ತಮಿಳಿನ ವಿಡಿಯಾಲ್ (ಸೂರ್ಯೋದಯ) ಎನ್ನುವ ಪದವನ್ನು ಉಲ್ಲೇಖಿಸಿರುವ ಅವರು,ನಿಜವಾದ ಸೂರ್ಯೋದಯ ಎಂದರೇನು ಎಂದು ಜನರಿಗೆ ಈಗ ಅರ್ಥವಾಗಿದೆ. ಸ್ವಯಂ ಸೂರ್ಯೋದಯ, ಕುಟುಂಬ ಹಾಗೂ ಆ (ಡಿಎಂಕೆ) ಪಕ್ಷದವರಿಗೆ ಮಾತ್ರ ಸೂರ್ಯೋದಯ ಎಂದಿದ್ದಾರೆ. ಈ ರೀತಿ ಸೂರ್ಯೋದಯ ಎನ್ನುವುದು ಅಧಿಕಾರ ಹಾಗೂ ಅಂತಸ್ತಿನ ಸೂಚಕವಾಗಿ ಬಳಸಲಾಗಿದೆ.
ಡಿಎಂಕೆಯಲ್ಲಿ ಸ್ವಜನಪಕ್ಷಪಾತ ಎಲ್ಲೆ ಮೀರಿದೆ ಎಂದು ಅಲ್ಲಿನ ಜನ ಹೇಳುತ್ತಿದ್ದು. ಆಡಳಿತರೂಢ ಡಿಎಂಕೆಯ ಮುಖ್ಯಮಂತ್ರಿ ಅವರ ಪುತ್ರ ಉದಯನಿಧಿ ಸ್ಟಾಲಿನ್‌ಗೆ ಐದು ವರ್ಷದ ಒಳಗೆ (ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಅವಧಿಯಲ್ಲೇ) ತಮಿಳುನಾಡಿನ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದೆ. ಇದಕ್ಕೆ ಪೊಲಿಟಿಕಲ್ ನೆಪೋಟಿಸ್ ಎಂದು ಜನ ಹೇಳುತ್ತಿದ್ದಾರೆ.
The Sun shines for the privileged few & an eclipse for the rest of the state for the last 40 months.
— K.Annamalai (@annamalai_k) September 29, 2024
People have now understood what the term “Vidiyal” actually meant: Vidiyal for self, family, and the chieftains. pic.twitter.com/0SKRxvOEVf
ಕುಟುಂಬ ರಾಜಕೀಯಕ್ಕೆ ಬೆಸ್ಟ್ ಉದಾಹರಣೆ: ತಮಿಳುನಾಡಿನ ಡಿಎಂಕೆ ಪಕ್ಷವು ಕುಟುಂಬ ರಾಜಕೀಯಕ್ಕೆ ಬೆಸ್ಟ್ ಉದಾಹರಣೆ ಎಂದೇ ಹೇಳಬಹುದು. ಇಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ದಿವಂಗತ ಎಂ ಕರುಣಾನಿಧಿ ಅವರು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.
ಅವರ ಆಡಳಿತದ ಅವಧಿಯಲ್ಲೇ ಎಂ.ಕೆ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಕರುಣಾನಿಧಿ ಅವರ ಮಗಳು ಕನಿಮೊಳಿ ಸಂಸದೆಯಾಗಿದ್ದಾರೆ. ಉದಯ್, ದಯಾನಿಧಿ,ಮುರಸೋಲಿ, ಅಳಗಿರಿ ಹೀಗೆ ಎಲ್ಲರೂ ಒಂದೇ ಕುಟುಂಬದವರಾಗಿದ್ದು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications