ANI's Twitter Blocked: ಎಎನ್‌ಐ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡಿದ ಟ್ವಿಟ್ಟರ್ ಸಂಸ್ಥೆ, ಕಾರಣವೇನು?
ಬೆಂಗಳೂರು, ಏಪ್ರಿಲ್ 29: ಭಾರತಾದ್ಯಂತ ಕ್ಷಣಾರ್ಧದಲ್ಲಿ ಸುದ್ದಿ ಪಸರಿಸುವ ಪ್ರಮುಖ ಏಜೆನ್ಸಿಯಾಗಿರುವ 'ಏಷಿಯನ್ ನ್ಯೂಸ್ ಇಂಟರ್‌ನ್ಯಾಷನ್' (ANI) ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಈ ಮೂಲಕ ಕೋಟ್ಯಂತರ ಎಎನ್‌ಐ ಅನುಯಾಯಿಗಳಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ.
So those who follow @ANI bad news, @Twitter has locked out India’s largest news agency which has 7.6 million followers and sent this mail - under 13 years of age! Our gold tick was taken away, substituted with blue tick and now locked out. @elonmusk pic.twitter.com/sm8e765zr4
— Smita Prakash (@smitaprakash) April 29, 2023
ಚಿಕ್ಕದಾಗಿ, ತತಕ್ಷಣಕ್ಕೆ ಮಾಹಿತಿ ನೀಡಲು ಪೋಸ್ಟ್ ಮಾಡುವ ಮೈಕ್ರೋ ಬ್ಲಾಗಿಂಗ್ ಅನ್ನು ನಿರ್ವಹಿಸಲು ಸುಮಾರು 13 ವರ್ಷವಾಗಿರಬೇಕು ಎಂದು ಟ್ವಿಟ್ಟರ್ ಸಂಸ್ಥೆ ಹೇಳುತ್ತದೆ. ಈ 3 ವರ್ಷ ನಿಯಮ ಪೂರೈಸಲು ಎಎನ್‌ಐ ವಿಫಲವಾಗಿದೆ ಎಂಬ ಕಾರಣಕ್ಕೆ ದೇಶಾದ್ಯಂತ ಸುದ್ದಿ ಜಾಲ ಹೊಂದಿರುವ ANI ಟ್ವಿಟ್ಟರ್ ಖಾತೆಯನ್ನು ಸಂಸ್ಥೆ ಶನಿವಾರ ಬ್ಲಾಕ್ ಮಾಡಲಾಗಿದೆ.

ಭಾರತದಲ್ಲಿ ಸುಮಾರು 100 ಶಾಖೆಗಳನ್ನು ಹೊಂದಿರುವ 'ಏಷಿಯನ್ ನ್ಯೂಸ್ ಇಂಟರ್‌ನ್ಯಾಷನ್' (ANI) ಹೊಂದಿದೆ. ಎಎನ್‌ಐಗೆ ಟ್ವಿಟ್ಟರ್ ನಿರ್ಬಂಧ ವಿಧಿಸಿದೆ. ಹೀಗಾಗಿ ಎಎನ್‌ಐ ಟ್ವೀಟ್ ಗಳು ಶನಿವಾರ ಪೋಸ್ಟ್ ಆಗಿಲ್ಲ. ಎಎನ್‌ಐ ಡಿಜಿಟಲ್ ಖಾತೆ ಇದೆ. ಈ ಕುರಿತು ಟ್ವಿಟ್ಟರ್ ಸಂಸ್ಥೆ ಎಎನ್‌ಐಗೆ ಕಳುಹಿಸಿರುವ ಮೇಲ್ ನ ಸ್ಕ್ರೀನ್ ಶಾಟ್ ಅನ್ನು ಎಎನ್‌ಐ ಸಂಪಾದಕಿಯಾದ ಸ್ಮಿತಾ ಪ್ರಕಾಶ್ ವೈಯಕ್ತಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ANI ಗೆ 7.6 ಮಿಲಿಯನ್ ಫಾಲೋವರ್ಸ್
ಎಎನ್‌ಐ ಸಂಸ್ಥೆ ದೇಶಾದ್ಯಂತ 7.6 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ. ಸದ್ಯ ಟ್ವಿಟ್ಟರ್ ಸಂಸ್ಥೆ ನಮ್ಮ 'ಏಷಿಯನ್ ನ್ಯೂಸ್ ಇಂಟರ್‌ನ್ಯಾಷನ್' (ANI) ಟ್ವಿಟ್ಟರ್‌ನಿಂದ ತೆಗೆದು ಹಾಕಿದೆ. ಇದು ಎಲ್ಲ ಅನುಯಾಯಿಗಳಿಗೆ ಕಹಿ ಸುದ್ದಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಎಎನ್‌ಐ ಗೋಲ್ಡ್ ಟಿಕ್ ಹೊಂದಿದ್ದು, ನಂತರ ಬ್ಲೂ ಟಿಕ್ ಹೊಂದಿತ್ತು. ಇದೀಗ ಹ್ಯಾಂಡಲ್‌ಗೆ ನಿರ್ಬಂಧ ವಿಧಿಸಲಾಗಿದೆ. ಟ್ವಿಟ್ಟರ್ ಸಂಸ್ಥೆ ಈ ನಿರ್ಧಾರವು ತಮಗೇ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದ್ದು, ದಯವಿಟ್ಟು ಎಎನ್‌ಐ ಟ್ವಿಟ್ಟರ್ ಹ್ಯಾಂಡರ್ ಪುನರ್‌ಸ್ಥಾಪನೆಗೆ ಅವಕಾಶ ನೀಡುವಂತೆ ಸ್ಮಿತಾ ಪ್ರಕಾಶ್ ಮನವಿ ಮಾಡಿದ್ದಾರೆ.

ಸಂಪಾದಕಿಯ ಟ್ವೀಟ್‌ಗೆ ಪ್ರಕ್ರಿಯಿಸಿದ ಹಲವರು, ಎಲಾನ್ ಮಸ್ಕ್ ಬಂದ ನಂತರ ಟ್ವಿಟ್ಟರ್‌ನಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ದೇಶದ ಪ್ರಮುಖ ಸುದ್ದಿ ಸಂಸ್ಥೆಗಳಲ್ಲಿ ಎಎನ್‌ಐ ಸಹ ಒಂದು. ಇಂತಹ ವಿಲಕ್ಷಣ ಕಾರಣದಿಂದಾಗಿ ಅದಕ್ಕೆ ನಿರ್ಬಂಧ ವಿಧಿಸುವುದು ಎಷ್ಟು ಸರಿ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಟ್ವಿಟ್ಟರ್ ಮಟ್ಟಿಗೆ ಇದೊಂದು ಬೃಹತ್ ಸಮಸ್ಯೆಯಾಗಿದ್ದು, ಕೂಡಲೇ ಬಗೆಹರಿಸಬೇಕು. ಎಎನ್‌ಐಗೆ ಟ್ವಿಟ್ಟರ್‌ನಲ್ಲಿ ಅವಕಾಶ ನೀಡಬೇಕು ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.












Click it and Unblock the Notifications