ಹಿಂದೂ ಧರ್ಮವನ್ನು ರಕ್ಷಿಸಲು 3,000 ದೇವಾಲಯ ನಿರ್ಮಿಸಲಿರುವ ಆಂಧ್ರ ಸರ್ಕಾರ: ಇಲ್ಲಿದೆ ವರದಿ, ವಿವರ

ಆಂಧ್ರಪ್ರದೇಶದ ಸರ್ಕಾರವು ಹಿಂದೂ ಧರ್ಮದ ರಕ್ಷಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರದ ಪ್ರತಿ ಜಿಲ್ಲೆಗಳಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಮುಂದಾಗಿದೆ.

ಅಮರಾವತಿ, ಮಾರ್ಚ್‌ 01: ಆಂಧ್ರಪ್ರದೇಶದ ಸರ್ಕಾರವು ಹಿಂದೂ ಧರ್ಮದ ರಕ್ಷಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರದ ಪ್ರತಿ ಜಿಲ್ಲೆಗಳಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಮುಂದಾಗಿದೆ. ಈ ದೊಡ್ಡ ಯೋಜನೆಗೆ ಭಾರೀ ಮೊತ್ತದ ಹಣವನ್ನು ವ್ಯಯಿಸಲು ಜಗನ್‌ ಮುಂದಾಗಿರುವುದು ವರದಿಯಾಗಿದೆ.

ಪ್ರತಿ ಜಿಲ್ಲೆಗೂ ಸರ್ಕಾರದಿಂದ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ. ರಾಜ್ಯದಲ್ಲಿ ದೇಗುಲಗಳ ನಿರ್ಮಾಣವನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಆಂಧ್ರ ಸರ್ಕಾರ ಹೇಳಿದೆ.

Andhra Pradesh To Build 3,000 Temples To Protect Hindu Faith

ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ, ಹಿಂದೂ ಧರ್ಮವನ್ನು ರಕ್ಷಿಸಲು ಮತ್ತು ಪ್ರಚಾರ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ ಹೇಳಿದರು.

'ಹಿಂದೂ ಧರ್ಮದ ನಂಬಿಕೆಯನ್ನು ಬೃಹತ್ ಪ್ರಮಾಣದಲ್ಲಿ ರಕ್ಷಿಸಬೇಕಿದೆ ಮತ್ತು ಪ್ರಚಾರ ಮಾಡಬೇಕಿದೆ. ದುರ್ಬಲ ವರ್ಗಗಳ ಪ್ರದೇಶಗಳಲ್ಲಿ ಹಿಂದೂ ದೇವಾಲಯಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ' ಎಂದು ದತ್ತಿ ಸಚಿವರೂ ಆಗಿರುವ ಸತ್ಯನಾರಾಯಣ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Andhra Pradesh To Build 3,000 Temples To Protect Hindu Faith

ತಿರುಮಲ ತಿರುಪತಿ ದೇವಸ್ಥಾನದ ವಾಣಿ ಟ್ರಸ್ಟ್ ದೇವಾಲಯಗಳ ನಿರ್ಮಾಣಕ್ಕೆ ತಲಾ ₹ 10 ಲಕ್ಷ ವಿನಿಯೋಗಿಸಲಿದೆ ಎಂದು ಹೇಳಿದ್ದಾರೆ.

1,330 ದೇವಾಲಯಗಳ ನಿರ್ಮಾಣ ಪ್ರಾರಂಭದ ಜೊತೆಗೆ, ಇನ್ನೂ 1,465 ಈ ಪಟ್ಟಿಗೆ ಸೇರಿಸಲಾಗಿದೆ. ಅದೇ ರೀತಿ ಕೆಲವು ಶಾಸಕರ ಮನವಿ ಮೇರೆಗೆ ಇನ್ನೂ 200 ನಿರ್ಮಿಸಲಾಗುವುದು. ಉಳಿದ ದೇವಸ್ಥಾನಗಳ ನಿರ್ಮಾಣವನ್ನು ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲಾಗುವುದು ಎಂದರು.

ದತ್ತಿ ಇಲಾಖೆಯ ಅಧೀನದಲ್ಲಿ 978 ದೇವಸ್ಥಾನಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರತಿ 25 ದೇವಸ್ಥಾನಗಳ ಕಾಮಗಾರಿಯನ್ನು ಒಬ್ಬ ಸಹಾಯಕ ಎಂಜಿನಿಯರ್‌ಗೆ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೆಲವು ದೇವಾಲಯಗಳ ಪುನರುಜ್ಜೀವನಕ್ಕಾಗಿ ಮತ್ತು ದೇವಾಲಯಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ₹ 270 ಕೋಟಿ ಮೀಸಲಿಡಲಾಗಿದೆ. ಸಿಜಿಎಫ್ ನಿಧಿಯಿಂದ ₹ 238 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ಅದೇ ರೀತಿ, ಪ್ರತಿ ದೇವಸ್ಥಾನಕ್ಕೆ ₹ 5,000 ಗಳನ್ನು ನೀಡಲಾಗುತ್ತಿದೆ. ಧಾರ್ಮಿಕ ಕ್ರಿಯೆಗಳಿಗೆ (ದೂಪ ದೀಪ ನೈವೇದ್ಯಂ) ಹಣಕಾಸು ವರ್ಷದಲ್ಲಿ ₹ 28 ಕೋಟಿ ಮೀಸಲಿಟ್ಟಿದ್ದು, ಈಗ ₹ 15 ಕೋಟಿಯನ್ನು ವ್ಯಯಿಸಲಾಗಿದೆ.

'ದೂಪ ದೀಪ ಯೋಜನೆಯಡಿ, 2019 ರ ವೇಳೆಗೆ ಕೇವಲ 1,561 ದೇವಾಲಯಗಳನ್ನು ನೋಂದಾಯಿಸಲಾಗಿದೆ. ಅದು ಈಗ 5,000 ಕ್ಕೆ ವಿಸ್ತರಿಸಿದೆ' ಎಂದು ಸತ್ಯನಾರಾಯಣ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+