ಆಂಧ್ರಪ್ರದೇಶ: ಬೀದಿನಾಯಿ ದಾಳಿಗೆ 9 ವರ್ಷದ ಬಾಲಕ ಬಲಿ

ಬಲಿಜಿಪೇಟೆ(ಆಂಧ್ರಪ್ರದೇಶ), ಫೆಬ್ರವರಿ 28: ಬೀದಿ ನಾಯಿಗಳ ದಾಳಿಗೆ ಒಂಬತ್ತು ವರ್ಷದ ಬಾಲಕನೊಬ್ಬ ಮೃತನಾದ ಘಟನೆ ಆಂಧ್ರಪ್ರದೇಶದ ಬಲಿಜಿಪೇಟೆ ಎಂಬಲ್ಲಿ ನಡೆದಿದೆ.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಆರ್.ಜಸ್ವಂತ್ ಎಂಬ ಬಾಲಕ ತನ್ನ ಸ್ನೇಹಿತನೊಂದಿಗೆ ತೋಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಘಟನೆ ನಡೆದ ತಕ್ಷಣವೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ದೇಹದ ಹಲವೆಡೆ ಗಾಯವಾಗಿ ರಕ್ತಸ್ರಾವವಾಗುತ್ತಿದ್ದ ಕಾರಣ ಬಾಲಕ ಮೃತಪಟ್ಟಿದ್ದಾನೆ.

Andhra Pradesh: Stray dogs maul nine-year-old boy to death

ಬೀದಿ ನಾಯಿ ಉಪಟಳ ಹೆಚ್ಚುತ್ತಿರುವ ಕುರಿತು ಪದೇ ಪದೇ ದೂರು ನೀಡಲಾಗುತ್ತಿದೆಯಾದರೂ, ಇಂಥ ಸಾವುಗಳು ನಿಂತಿಲ್ಲ. ಕಳೆದ ಏಪ್ರಿಲ್ ನಲ್ಲಿ ಬೆಂಗಳೂರಿನ ಆನೇಕಲ್ ನಲ್ಲಿ ಬೀದಿನಾಯಿಗಳ ಉಪಟಳಕ್ಕೆ ಎರಡು ವರ್ಷದ ಹೆಣ್ಣು ಮಗು ಮೃತಳಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+