Andhra Pradesh farmer: 30 ಲಕ್ಷ ಮೌಲ್ಯದ ಟೊಮೆಟೊ ಮಾರಾಟ ಮಾಡಿದ ರೈತನ ಹತ್ಯೆ
ಅಮರಾವತಿ, ಜುಲೈ. 14: ಆಂಧ್ರ ಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲೂಕಿನ ಬೋಡುಮಲ್ಲದಿನ್ನೆಯ ಹೊರವಲಯದಲ್ಲಿ 62 ವರ್ಷದ ಟೊಮೆಟೊ ಕೃಷಿಕರೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ರೈತರನ್ನು ನರೇಮ್ ರಾಜಶೇಖರ್ ರೆಡ್ಡಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೋಡುಮಲ್ಲದಿನ್ನೆ ಗ್ರಾಮದಿಂದ ದೂರದ ಕೃಷಿ ಭೂಮಿಯಲ್ಲಿ ವಾಸವಿದ್ದ ರಾಜಶೇಖರ್ ಹಾಲು ನೀಡಲು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತರು ಆತನನ್ನು ಅಡ್ಡಗಟ್ಟಿ, ಟವೆಲ್‌ನಿಂದ ಕೈಕಾಲುಗಳನ್ನು ಮರಕ್ಕೆ ಕಟ್ಟಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆರೋಪಿಗಳು ರೈತ ರಾಜಶೇಖರ್ ಅವರನ್ನು ದರೋಡೆ ಮಾಡಲು ಯತ್ನಿಸಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ವೇಳೆ ದಾರಿಹೋಕರು ಗ್ರಾಮದ ಹೊರವಲಯದಲ್ಲಿ ಶವವನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ರಾಜಶೇಖರ್ ಅವರ ಪತ್ನಿ ಜ್ಯೋತಿ ಅವರು, ಟೊಮೆಟೊ ಖರೀದಿಸುವ ನೆಪದಲ್ಲಿ ಮಂಗಳವಾರ ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಜಮೀನಿಗೆ ಭೇಟಿ ನೀಡಿದ್ದರು. ರೈತ ಹಾಲು ಮಾರಲು ಗ್ರಾಮಕ್ಕೆ ಹೋಗಿದ್ದಾನೆ ಎಂದು ತಿಳಿಸಿದ ಬಳಿಕ ಅಲ್ಲಿಂದ ತೆರಳಿದರು ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ರಾಜಶೇಖರ್ ಅವರು ಮಡ್ನಪಲ್ಲಿ ಮಾರುಕಟ್ಟೆಯಲ್ಲಿ 70ಕ್ಕೂ ಹೆಚ್ಚು ಕ್ರೇಟ್ ಟೊಮ್ಯಾಟೊ ಮಾರಾಟ ಮಾಡಿ ಸುಮಾರು 30 ಲಕ್ಷ ರೂಪಾಯಿ ಗಳಿಸಿದ್ದರು. ಈ ಕೊಲೆ ಮತ್ತು ಗಮನಾರ್ಹ ಆರ್ಥಿಕ ಲಾಭದ ನಡುವೆ ಸಂಭವನೀಯ ಸಂಪರ್ಕವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ರೈತ ರಾಜಶೇಖರ್ ತಮ್ಮ ಪತ್ನಿ ಮತ್ತು ಇಬ್ಬರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ. ಮಕ್ಕಳಿಬ್ಬರು ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಮಡ್ನಪಲ್ಲಿ ಎಸ್ಪಿ ಆರ್ ಗಂಗಾಧರ್ ರಾವ್ ಭೇಟಿ ನೀಡಿ ಮೃತರ ಸಂಬಂಧಿಕರೊಂದಿಗೆ ಮಾತನಾಡಿದ್ದಾರೆ. ''ಪ್ರಕರಣ ಭೇದಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ತನಿಖೆಯ ಭಾಗವಾಗಿ, ನಾವು ಸ್ನಿಫರ್ ಡಾಗ್ ಅನ್ನು ನಿಯೋಜಿಸಿದ್ದೇವೆ. ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು" ಎಂದು ಡಿಎಸ್‌ಪಿ ಕೆ.ಕೇಶಪ್ಪ ತಿಳಿಸಿದ್ದಾರೆ.












Click it and Unblock the Notifications