ಅಂಧೇರಿ ಉಪಚುನಾವಣೆ ಫಲಿತಾಂಶ 2022: ಶಿವಸೇನಾ ಅಭ್ಯರ್ಥಿ ಋತುಜಾ ಲಟ್ಕೆ ಮುನ್ನಡೆ
ಮುಂಬೈ ನವೆಂಬರ್ 6: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಉದ್ಧವ್ ಠಾಕ್ರೆ ತಂಡ ಅಂಧೇರಿಯಲ್ಲಿ ಗೆಲುವಿನ ಸಮೀಪದಲ್ಲಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಅಭ್ಯರ್ಥಿ ಋತುಜಾ ಲಟ್ಕೆ ನಾಲ್ಕನೇ ಸುತ್ತಿನ ಮತ ಎಣಿಕೆಯ ನಂತರ 14,648 ಮತಗಳನ್ನು ಗಳಿಸಿದ್ದಾರೆ ಮತ್ತು ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಜ್ಜಾಗಿದ್ದಾರೆ.
ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ತೆಲಂಗಾಣದ ಮುನುಗೋಡು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಿದ್ದ ಹಿನ್ನಡೆ ಅನುಭವಿಸಿದ್ದು, ಟಿಆರ್‌ಎಸ್ ಮುನ್ನಡೆ ಕಾಯ್ದಕೊಂಡಿದೆ.
ಉತ್ತರಪ್ರದೇಶ ಗೋಲ್ ಗೋಕ್ರನಾಥ್, ಹಿರಿಯಾಣದ ಆದಂಪುರ, ಒಡಿಶಾದ ಧಮ್‌ನಗರದಲ್ಲಿ ಮೊದಲ ಹಂತದ ಮತ ಎಣಿಕೆಯಲ್ಲಿ ಕಮಲ ಮುನ್ನಡೆಯಲ್ಲಿದೆ. ಹಾಗೆಯೇ ತೆಲಂಗಾಣದ ಮುನುಗೋಡುದಲ್ಲಿ ಟಿಆರ್‌ಎಸ್ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಬಿಹಾರದಲ್ಲಿ ಆರ್‌ಜೆಡಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಿನ್ನಡೆಯಾಗಿದೆ.

ಇನ್ನೂ ಮೊಕಾಮಾದಲ್ಲಿ ಆರ್‌ಜೆಡಿಯ ನೀಲಮ್ ದೇವಿ ಮುನ್ನಡೆಯಲ್ಲಿ ಮುಂದುವರಿದಿದ್ದಾರೆ. ಒಂಬತ್ತನೇ ಸುತ್ತಿನ ಮತ ಎಣಿಕೆಯ ನಂತರ, ಆರ್‌ಜೆಡಿಯ ನೀಲಮ್ ದೇವಿ ಅವರು ಮೊಕಾಮಾ ವಿಧಾನಸಭಾ ಕ್ಷೇತ್ರದಲ್ಲಿ 39,063 ಮತಗಳೊಂದಿಗೆ ಮುನ್ನಡೆಯನ್ನು ಮುಂದುವರೆಸಿದ್ದಾರೆ. ಬಿಜೆಪಿಯ ಸೋನಂ ದೇವಿ 27,064 ಮತಗಳನ್ನು ಪಡೆದು ಹಿಂದುಳಿದಿದ್ದಾರೆ.
#AdampurByElection | As per officials ECI trends. BJP's Bhavya Bishnoi leading with 6399 votes.
— ANI (@ANI) November 6, 2022
Congress candidate Jai Parkash trailing with 3567 votes.#Haryana pic.twitter.com/yj54tLPzTT
ಧಾಮನಗರದಲ್ಲಿ ಬಿಜೆಪಿಯ ಸೂರ್ಯಬಂಶಿ ಸೂರಜ್ 8,737 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಮತ್ತು ಪ್ರದೇಶಿಕ ಪಕ್ಷಗಳಾದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್), ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ), ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ಬಿಜು ಜನತಾ ದಳ(ಬಿಜೆಡಿ)ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನವೆಂಬರ್ 3ರಂದು ಗುರುವಾರ ಬಿಹಾರದ ಮೊಕಾಮಾ ಮತ್ತು ಗೋಪಾಲ್‌ಗಂಜ್ ವಿಧಾನಸಭಾ ಕ್ಷೇತ್ರಗಳು, ಮಹಾರಾಷ್ಟ್ರದ ಅಂಧೇರಿ( ಪೂರ್ವ), ಹರಿಯಾಣದ ಆದಂಪುರ, ತೆಲಂಗಾಣದ ಮುನುಗೋಡು, ಉತ್ತರಪ್ರದೇಶದ ಗೋಲಾ ಗೋಕರನಾಥ್ ಮತ್ತು ಒಡಿಶಾದ ಧಮ್‌ನಗರದಲ್ಲಿ ಮತದಾನ ನಡೆದಿತ್ತು.












Click it and Unblock the Notifications