Anant-Radhika Wedding: ದುಬಾರಿ ಮದುವೆಗಾಗಿ ಕನ್ನಡಿಗರ ರಾಮೇಶ್ವರಂ ಕೆಫೆಯಿಂದ ವಿಶೇಷ ಖಾದ್ಯ

ಭಾರತದ ಅತಂತ್ಯ ಶ್ರೀಮಂತ ವ್ಯಕ್ತಿ ಮುಕೇಶ್‌ ಅಂಬಾನಿ ಅವರ ಮಗನ ಮದುವೆಯ ಸಮಾರಂಭದ ಸಂಭ್ರಮದ ಮುಂಬೈನಲ್ಲಿ ಮೆಳೈಸಿದೆ. ಈಗಾಗಲೇ ಮುಂಬೈನತ್ತ ಹಲವು ಗಣ್ಯರು ದೌಡಾಯಿಸಿದ್ದಾರೆ. ಬಂದ ಅತಿಥಿಗಳಿಗೆ ಬಿನ್ನ ವಿಭಿನ್ನ ಖಾದ್ಯಗಳು ಕೈ ಬೀಸಿ ಕರೆಯುತ್ತಿವೆ. ಇದರಲ್ಲಿ ಕರ್ನಾಟಕದ ಹೆಮ್ಮೆಯ ಖಾದ್ಯಗಳು ಸಹ ಸೇರಿವೆ.

ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಸಮಾರಂಭದಲ್ಲಿ ಹಲವು ದೇಶ ಹಾಗೂ ವಿದೇಶಿ ಗಣ್ಯರು ಭಾಗವಹಿಸಲಿದ್ದಾರೆ. ಈ ವೇಳೆ ಖಾದ್ಯಗಳು ಸಹ ಅದೇ ರೀತಿ ಆಗಿ ಒಂದಕ್ಕಂದು ಭಿನ್ನವಾಗಿರಲಿವೆ. ದೇಶದ ಹಲವು ಭಾಗದಿಂದ ಪ್ರಸಿದ್ಧ ಖಾದ್ಯಗಳನ್ನು ಮದುವೆಗೆ ಬಂದ ಅತಿಥಿಗಳಿಗೆ ಉಣಬಡಿಸಲು ಸಜ್ಜಾಗಿವೆ. ಈ ಖಾದ್ಯಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯಗಳು ಸೇರಿವೆ.

Anant-Radhika Wedding A special dish from Karnataka Rameswaram Cafe for an expensive wedding

ಈಗಾಗಲೇ ವಿದೇಶದಲ್ಲಿ ನಡೆದ ಕ್ರೂಸ್‌ ಪಾರ್ಟಿಯಲ್ಲೂ ಸಹ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ವಿಶೇಷ ಖಾದ್ಯಗಳನ್ನು ಉಣ ಬಡಿಸಿತ್ತು. ಈಗ ಈ ತಂಡ ಮುಂಬೈನಲ್ಲೂ ಬೆಂಗಳೂರಿನ ದೋಸೆಯ ಘಮವನ್ನು ಪಸರಿಸಲು ಸಿದ್ಧವಾಗಿದೆ. ಕ್ರೂಸ್‌ ಪಾರ್ಟಿಯಲ್ಲಿ ಮಾಡಿದ ಬಹುತೇಕ ಖಾದ್ಯಗಳನ್ನೇ ಈ ಬಾರಿಯೂ ಮಾಡಲು ಆರ್ಡರ್‌ ಬಂದಿದೆ ಎಂದು ತಿಳಿದು ಬಂದಿದೆ.

ಖಾದ್ಯಗಳ ಮೆನ್ಯೂ ಇಲ್ಲಿದೆ

ರಾಮೇಶ್ವರಂ ಕೆಫೆ ತನ್ನ ವಿಶಿಷ್ಠ ಶೈಲಿಯ ಖಾದ್ಯಗಳಿಂದಲೇ ದಕ್ಷಿಣ ಭಾರತದಲ್ಲಿ ಹೆಸರು ವಾಸಿಯಾಗಿರುವ ಖಾದ್ಯಗಳನ್ನೇ ಈ ಬಾರಿಯೂ ಮದುವೆ ಸಮಾರಂಭದಲ್ಲಿ ಮಾಡಲಿವೆ. ರಾಮೇಶ್ವರಂ ಕೆಫೆಯ ತಟ್ಟೆಯ ಪುಡಿ ಇಡ್ಲಿ, ದೋಸೆ ಸೇರಿದಂತೆ ಹಲವು ಖಾದ್ಯಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಹಾಗಿದ್ದರೆ ಏನೆಲ್ಲಾ ಖಾದ್ಯಗಳನ್ನು ರಾಮೇಶ್ವರಂ ಕೆಫೆ ಮದುವೆ ಸಮರಾಂಭಕ್ಕೆ ಮಾಡುತ್ತಿದೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್..

Anant-Radhika Wedding A special dish from Karnataka Rameswaram Cafe for an expensive wedding

ದಕ್ಷಿಣ ಭಾರತದ ಖಾದ್ಯಗಳು

ದೋಸೆ
ಬಟರ್‌ ದೋಸೆ
ತುಪ್ಪದ ದೋಸೆ
ಗಾರ್ಲಿಕ್‌ ದೋಸೆ
ಹೆಸರುಕಾಳು ದೋಸೆ

(ಈ ಖಾದ್ಯಗಳ ಜೊತೆ ಸಾಂಬಾರ (ಜೈನ್‌ ಸ್ಟೈಲ್‌), ಬಿಳಿ ಚಟ್ನಿ, ಕಡ್ಲೆಕಾಳು ಚಟ್ನಿ,)

ಇಡ್ಲಿ
ತಟ್ಟೆ ಇಡ್ಲಿ, ಪ್ಲೇನ್‌ ಹಾಗೂ ಪುಡಿ
ತುಪ್ಪದ ಪಡ್ಡು
(ಈ ಖಾದ್ಯಗಳನ್ನು ಸಾಂಬಾರ್, ಕೊಬ್ಬರಿ ಚಟ್ನಿ, ಶೆಂಗಾ ಚಟ್ನಿ ಹಾಗೂ ಸಾಗೂ)

ವಡಾ
ಬೋಡಾ ಸೂಪ್‌
(ಈ ಖಾದ್ಯವನ್ನು ಪುದಿನಾ ಚಟ್ನಿಯೊಂದಿಗೆ ನೀಡಲಾಗುತ್ತದೆ)

ಫಿಲ್ಟರ್‌ ಕಾಫಿ

ಅಂಬಾನಿ ಮದುವೆ ಸಮಾರಾಂಭದಲ್ಲಿ ಬನಾರಸ್‌ನ ಚಾಟ್ಸ್‌ಗಳು ಜನರನ್ನು ಆಕರ್ಷಿಸಲಿವೆ. ಈ ಚಾಟ್‌ ಮಸಾಲ್‌ಗಳ ಅಂಗಡಿ ಸಹ ಈಗಾಗಲೇ ಮದುವೆ ಸಮಾರಂಭದಲ್ಲಿ ತೆರೆಯಲಿದ್ದು, ವಿವಿಧ ಬಗೆಯ ಪಾನ್‌ಗಳ ಸ್ವಾದವನ್ನು ಸಹ ಅತಿಥಿಗಳು ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+