Anant Ambani- Radhika Merchant wedding menu: 65 ಅಡುಗೆ ಭಟ್ಟರು, 2500 ಖಾಧ್ಯ
ಬೆಂಗಳೂರು, ಫೆಬ್ರವರಿ 28: ದೇಶದ ಶ್ರೀಮಂತರಲ್ಲಿ ಒಬ್ಬರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ 'ಅನಂತ್ ಅಂಬಾನಿ' (Anant Ambani wedding) ಅವರ ಅದ್ಧೂರಿ ವಿವಾಹವು ಮಾರ್ಚ್ 1-3 ರಿಂದ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿದೆ. ವಿವಾಹದಲ್ಲಿ ಸಾವಿರಾರು ಬಗೆಯ ಆಹಾರ ಪದಾರ್ಥ ಸಿದ್ಧಗೊಳ್ಳಲಿವೆ. ಅದೇಷ್ಟು ಬಾಣಸಿಗರು ಅಡುಗೆ ಮಾಡಲಿದ್ದಾರೆ, ಎಷ್ಟು ರೆಸಿಪಿಗಳು? ಮೆನುವಿನಲ್ಲಿ ಏನಿರಲಿದೆ? ಎಂಬೆಲ್ಲ ಮಾಹಿತಿ ತಿಳಿಯಲು ಮುಂದೆ ಓದಿ.
ಅವರು ಮುಂದಿನ ತಿಂಗಳು ಎನ್ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೆನ್ ಮರ್ಚೆಂಟ್ ಮತ್ತು ಉದ್ಯಮಿ ಶೈಲಾ ಮರ್ಚೆಂಟ್ ಅವರ ಕಿರಿಯ ಪುತ್ರಿ ರಾಧಿಕಾ ಮರ್ಚೆಂಟ್ (Radhika Merchant wedding) ಅವರನ್ನು ಅನಂತ್ ಅಂಬಾನಿ ವರಿಸಲಿದ್ದಾರೆ. ಹಲವು ದಿನಗಳಿಂದಲೇ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ವಿವಾಹ ಪೂರ್ವ ಆಚರಣೆಗಳಿಗೆ ಆಹ್ವಾನಿಸಲಾದ ಅತಿಥಿಗಳಿಗಾಗಿ ವಿಸ್ತಾರ ಆಗಾರ ಮೆನು ಸಿದ್ಧಪಡಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮಾರ್ಕ್ ಜುಕರ್‌ಬರ್ಗ್, ಬಿಲ್ ಗೇಟ್ಸ್ ಅತಿಥಿ
ಅದ್ಧೂರಿ ವಿವಾಹ ಕಾರ್ಯಕ್ರಮಕ್ಕೆ 1,000 ಕ್ಕೂ ಹೆಚ್ಚು ಅತಿಥಿಗಳು ಕಾರ್ಯಕ್ರಮಕ್ಕೆ ಬರಲಿದ್ದಾರೆ. ಬಿಲ್ ಗೇಟ್ಸ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಅತಿಥಿಗಳ ಪಟ್ಟಿಯಲ್ಲಿದ್ದಾರೆ. ಬ್ಲೂಮ್‌ಬರ್ಗ್ ಪ್ರಕಾರ, ಮೆಟಾ ಪ್ಲಾಟ್‌ಫಾರ್ಮ್‌ಗಳ ಮುಖ್ಯ ಕಾರ್ಯ ನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಸಹ ಈವೆಂಟ್‌ಗೆ ಹಾಜರಾಗುವ ನಿರೀಕ್ಷೆಗಳು ಇವೆ ಎನ್ನಲಾಗಿದೆ.
65 ಬಾಣಸಿಗರ ವಿಶೇಷ ತಂಡದಿಂದ ಅಡುಗೆ
ಈ ವಿಚಾಹದಲ್ಲಿ ಮಧ್ಯಪ್ರದೇಶದ ಇಂದೋರ್‌ನಿಂದ 65 ಬಾಣಸಿಗರ ವಿಶೇಷ ತಂಡವನ್ನು ಕರೆಸಲಾಗಿದೆ ಎನ್ನಲಾಗಿದೆ. ಇಂದೋರಿ ರೀತಿ ಆಹಾರದ ಮೇಲೆ ವಿಶೇಷ ಗಮನ ಇರುತ್ತದೆ. ಇಲ್ಲಿ ಪ್ಯಾನ್-ಏಷ್ಯನ್ ಭಕ್ಷ್ಯಗಳುನ್ನು ಹೊರತುಡಪಿಸಿ ಥಾಯ್, ಮೆಕ್ಸಿಕನ್ ಮತ್ತು ಜಪಾನೀಸ್‌ಗ ಪಾರ್ಸಿ ಆಹಾರವನ್ನು ಪಾಕಪದ್ಧತಿಗಳ ಕೌಶಲ್ಯವುಳ್ಳ ಬಾಣಸಿಗರಿಂದ ಆಹಾರ ತಯಾರಾಗಲಿದೆ.

ಒಟ್ಟು 2,500 ಭಕ್ಷ್ಯಗಳ ಮೆನು
ಮೂರು ದಿನದ ಈ ಸಮಾರಂಭದಲ್ಲಿ ಒಟ್ಟು 2,500 ಭಕ್ಷ್ಯಗಳು ಮೆನುವಿನಲ್ಲಿರಲಿವೆ. ಯಾವೊಂದು ಭಕ್ಷ್ಯವು ಈ ಮಹಾ ವಿವಾಹದಲ್ಲಿ ಪುನರಾವರ್ತನೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನೂ ಬೆಳಗಿನ ಉಪಾಹಾರ ಕುರಿತು ನೋಡುವುದಾದರೆ, 75 ಕ್ಕೂ ಹೆಚ್ಚು ಆಯ್ಕೆಗಳನ್ನು ಒಳಗೊಂಡಿರಲಿದೆ.
ಮಧ್ಯಾಹ್ನದ ಊಟದಲ್ಲಿ 225ಕ್ಕೂ ಹೆಚ್ಚು ರೀತಿಯ ಮೆನು ಇರಲಿದೆ. ರಾತ್ರಿ ಡಿನ್ನರ್‌ಗೆ 270ಕ್ಕೂ ಹೆಚ್ಚು ವಿಧದ ಭಕ್ಷ್ಯಗಳು ಮತ್ತು ಮಧ್ಯರಾತ್ರಿಯ ಊಟದಲ್ಲಿ 85 ವಿಧದ ಪದಾರ್ಥಗಳನ್ನು ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಸಹ ಊಟ ವಿತರಣೆ ಇರಲಿದೆ ಎಂಬುದು ಇಲ್ಲಿನ ಮತ್ತೊಂದು ವಿಶೇಷ ವಾಗಿದೆ. ಅತಿಥಿಗಳಿಗೆ ಸಸ್ಯಾಹಾರಿ ಭಕ್ಷ್ಯಗಳಿಗಾಗಿ ವಿಶೇಷ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ವರದಿ ಆಗಿದೆ.
ಮದುವೆಯ ಸ್ಥಳ ಆಯ್ಕೆಗೆ ಕಾರಣವೇನು?
ನನ್ನ ಅಜ್ಜಿ ಜಾಮ್‌ನಗರದವರು. ನಾನು ಬಾಲ್ಯದಲ್ಲಿ ಇಲ್ಲಿಯೇ ಸಾಕಷ್ಟು ಸಮಯ ಕಳೆದಿದ್ದೇನೆ. ಮುಂಬೈ ನನ್ನ ಮನೆಯಾದರೂ ಸಹ ಜಾಮ್‌ನಗರದಲ್ಲಿ ನನ್ನ ಹೃದಯ ವಿದೆ. ನನ್ನ ಪೋಷಕರು ಮತ್ತು ಅಜ್ಜಿ ಕೂಡ ಜಾಮ್‌ನಗರವನ್ನು ಸ್ಥಳವಾಗಿ ಆಯ್ಕೆ ಮಾಡಲು ಸಲಹೆ ನೀಡಿದರು. ಸಹೋದ್ಯೋಗಿಗಳು ಮತ್ತು ನಾನು ಕೆಲಸ ಮಾಡುವ ಇತರ ಜನರೊಂದಿಗೆ ಆಚರಿಸಲು ನನಗೆ ಅವಕಾಶ ಸಿಗಲಿದೆ ಎಂಬ ಕಾರಣಕ್ಕಾಗಿ ಜಾಮ್‌ನಗರವನ್ನು ಮದುವೆಗೆ ಆಯ್ಕೆ ಮಾಡಿಕೊಳ್ಳಲಾಯಿತು ಎಂದು CNBC-TV18 ಸಂದರ್ಶನದಲ್ಲಿ ಅನಂತ್ ಅಂಬಾನಿ ತಿಳಿಸಿದ್ದರು.
ಕಳೆದ ವರ್ಷ 2023ರ ಜನವರಿ 19ರಂದು ಮುಂಬೈನಲ್ಲಿ ನಡೆದ ಗೋಲ್ ಧನ ಸಮಾರಂಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು. ಈ ವರ್ಷ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ.












Click it and Unblock the Notifications