Ambani Gift: ವಿವಾಹಕ್ಕೆ ಬಂದ ಸ್ಟಾರ್ ನಟರಿಗೆ ಐಶಾರಾಮಿ ವಾಚ್ ಗಿಫ್ಟ್: 'ಯಶ್' ಕೈಲಿರುವ ಈ ವಾಚ್ ಬೆಲೆ, ವಿಶೇಷತೆ? ಫೋಟೋ
ಬೆಂಗಳೂರು, ಜುಲೈ 14: ತಿಂಗಳುಗಳಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ದೇಶದ ಅತೀ ಶ್ರೀಮಂತರದಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಪುತ್ರ 'ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್' ಮದುವೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ವಿವಾಹದಲ್ಲಿ ಪಾಲ್ಗೊಂಡ ಕನ್ನಡಿಗ ಕೆಜಿಎಫ್ ಖ್ಯಾತಿಯ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಸೇರಿದಂತೆ ಬಾಲಿವುಡ್ ಸ್ಟಾರ್‌ಗಳಿಗೆ ಉಡುಗೊರೆಯಾಗಿ ನೀಡಿರುವ ಕಾಸ್ಲೀಯಸ್ಟ್ ಗಿಫ್ಟ್ ಸಹ ಸುದ್ದಿಯಲ್ಲಿದೆ.
ಹೌದು, ಕಳೆದ ಸುಮಾರು ಆರು ತಿಂಗಳುಗಳಿಂದ ಅಂಬಾನಿ ಕುಟುಂಬವು ವಿವಾಹ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದೆ. ದೇಶ ವಿದೇಶಗಳ ಖ್ಯಾತ ನಾಮರು, ಕ್ರಿಕೆಟಿಗರು ಮತ್ತು ಬಾಲಿವುಡ್, ಹಾಲಿವುಡ್ ಸೇರಿದಂತೆ ಅನೇಕ ನಟ, ನಟಿಯರನ್ನು ವಿಶೇಷವಾಗಿ ಈ ವಿವಾಹಕ್ಕೆ ಆಹ್ವಾನಿಸಲಾಗಿತ್ತು.

ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಎಲ್ಲ ಆಹ್ವಾನಿತರಿಗೆ (ಸೆಲೆಬ್ರೆಟಿ) ಅಂಬಾನಿ ಕುಟುಂಬವು ಐಶ್ವರ್ಯಕ್ಕೆ ತಕ್ಕ ಗಿಫ್ಟ್‌ಗಳನ್ನು ನೀಡಿದ್ದಾರೆ. ಸುಮಾರು ₹2 ಕೋಟಿ ಬೆಲೆಯ ಆಡೆಮರ್ಸ್ ಪಿಗುಯೆಟ್‌ನ ಐಷಾರಾಮಿ ವಾಚ್‌ಗಳನ್ನು ಸೆಲೆಬ್ರೆಟಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ.
ವಿವಾಹಕ್ಕೆ ಹಾಜರಾದ ಕನ್ನಡದ ಒಬ್ಬೇ ಒಬ್ಬ ನಟ
ಇಂತಹ ದುಬಾರಿ ವಾಚ್ ಇದೀಗ ಕನ್ನಡಿಗ ಯಶ್ ಅವರ ಕೈಯಲ್ಲಿ ಸಹ ಮಿಂಚುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ದೇಶವ್ಯಾಪಿ ಹೆಸರು ಮಾಡಿದ ಯಶ್ ಅವರನ್ನು ಸಹ ಅಂಬಾನಿ ಕುಟುಂಬ ಮದುವೆ ಆಹ್ವಾನಿಸಿತ್ತು. ಕನ್ನಡ ಸ್ಟಾರ್ ನಟರಲ್ಲಿ ಯಶ್ ಒಬ್ಬರೇ ದಂಪತಿ ಸಮೇತವಾಗಿ ಅನಂತ್ ಅಂಬಾನಿ ವೆಡ್ಡಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ಸ್ಟಾರ್ಸ್ ಕೈಲಿ ಕಾಸ್ಲಿ ವಾಚ್: ಪೋಟೋ ವೈರಲ್
ಇತ್ತೀಚೆಗೆ ಅವರ ಹೇರ್‌ಸ್ಟೈಲ್, ನ್ಯೂ ಲುಕ್ ವೈರಲ್ ಆಗಿತ್ತು. ಆದರೆ ಅವರ ಕೈಯಲ್ಲಿದ್ದ ಐಶಾರಾಮಿ ವಾಚ್ ಅನ್ನು ಯಾರು ಗಮನಿಸಲೇ ಇಲ್ಲ. ಈ ದುಬಾರಿ ವಾಚ್ ಅನ್ನು ಕೇವಲ ಯಶ್ ಮಾತ್ರವಲ್ಲದೇ, ರಣವೀರ್ ಸಿಂಗ್, ಸಲ್ಮಾನ್ ಖಾನ್, ಶಾರುಖ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಆಗಮಿಸಿದ್ದ ಬಹುತೇಕ ಎಲ್ಲ ಸೆಲೆಬ್ರೆಟಿಗಳ ಕೈಯಲ್ಲಿ ಈ ದುಬಾರಿ ವಾಚ್ ಇದೆ.

ಅದಲ್ಲದೇ ಬಾಲಿವುಡ್ ಸ್ಟಾರ್ ಎಲ್ಲರೂ ಸೇರಿ ವಾಚ್ ಕಟ್ಟಿದ ಕೈಗಳ ಫೋಟೋ ತೆಗೆಸಿಕೊಂಡಿದ್ದಾರೆ. ಈ ಪೋಟೋ ಸಹ ಭಾರೀ ವೈರಲ್ ಆಗುತ್ತಿದೆ. ಈ ಮೂಲಕ ಅಂಬಾನಿಯವರು ಅಳಿಯಂದಿರನ್ನು ಅತಿರಂಜಿತ ಉಡುಗೊರೆಯ ಮೂಲಕ ಬೆರಗುಗೊಳಿಸಿದ್ದಾರೆ. ಪ್ರತಿಯೊಬ್ಬರಿಗೂ ₹2 ಕೋಟಿ ಮೌಲ್ಯದ ವಾಚ್ ನೀಡಿ ಸತ್ಕರಿಸಿದ್ದಾರೆ.
ಅತಿಥಿಗಳು ಈ ಅದ್ಭುತವಾದ ಸೊಗಸಾದ ಕೈಗಡಿಯಾರಗಳನ್ನು ಒಳಗೊಂಡಿರುವ ಅದ್ದೂರಿ ಹ್ಯಾಂಪರ್‌ಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಗಮನಾರ್ಹ ಉಡುಗೊರೆಯು ಅಂಬಾನಿ ವಿವಾಹದ ವೈಭವ ಹೇಗಿತ್ತು ಎಂಬುದನ್ನು ಸಾರಿ ಸಾರಿ ಹೇಳುತ್ತದೆ.
ಈ ಐಶಾರಾಮಿ ವಾಚ್ ವಿಶೇಷತೆಗಳ ಪಟ್ಟಿ
ಇನ್ನೂ ಬ್ಲಾಕ್ ಟೀ ಶರ್ಟ್‌ನಲ್ಲಿ ಮುಂಬೈನಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ನಟ ರಾಕಿಂಗ್ ಸ್ಟಾರ್ ಯಶ್ ಅವರ ಕೈಯಲ್ಲೂ ಈ ವಾಚ್ ಎದ್ದು ಕಾಣುತ್ತದೆ. ಈ ಕೈ ಗಡಿಯಾರವು 41 ಎಂಎಂ 18 ಕೆ ಪಿಂಕ್ ಗೋಲ್ಡ್ ಕೇಸ್, 9.5 ಎಂಎಂ ದಪ್ಪ, ನೀಲಮಣಿ ಸ್ಫಟಿಕ ಹಿಂಭಾಗ ಮತ್ತು ಸ್ಕ್ರೂ-ಲಾಕ್ ಕಿರೀಟವನ್ನು ಹೊಂದಿದೆ.
ಇದು ಗ್ರ್ಯಾಂಡೆ ಟ್ಯಾಪಿಸ್ಸೆರಿ ಮಾದರಿಯೊಂದಿಗೆ ಗುಲಾಬಿ ಚಿನ್ನದ-ಟೋನ್ ಡಯಲ್ ಅನ್ನು ಒಳಗೊಂಡಿದೆ. ನೀಲಿ ಕೌಂಟರ್‌ಗಳು, ಗುಲಾಬಿ ಬಣ್ಣದ ಚಿನ್ನದ ಗುರುತುಗಳು ಮತ್ತು ರಾಯಲ್ ಓಕ್ ಲೇಪನವನ್ನು ಇದೆ.
Ambanis gifted limited edition watches worth ₹2 Crore each to all their guests. pic.twitter.com/OGoDAifKQo
— Hyderabad Intellectuals Forum 🇮🇳 (@HydForum) July 14, 2024
ಗುಲಾಬಿ ಬಣ್ಣದ ಚಿನ್ನದ ಟೋನ್ ಒಳಗಿನ ಅಂಚು ಮತ್ತು ಮ್ಯಾನುಫ್ಯಾಕ್ಚರ್ ಕ್ಯಾಲಿಬರ್ 5134 ಸ್ವಯಂ-ಅಂಕುಡೊಂಕಾದ ಚಲನೆಯನ್ನು ಒಳಗೊಂಡಿದೆ. ದಿನ, ದಿನಾಂಕ, ಖಗೋಳ ಚಂದ್ರ, ತಿಂಗಳು, ಅಧಿಕ ವರ್ಷ ಮತ್ತು ಗಂಟೆಗಳು ಮತ್ತು ನಿಮಿಷಗಳನ್ನು ಸಹ ತೋರಿಸುವ ಶಾಶ್ವತ ಕ್ಯಾಲೆಂಡರ್ ಒಳಗೊಂಡ ವಾಚ್ ಇದಾಗಿದೆ.
ಈ ವಾಚ್ 40-ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಗರಿಷ್ಠ 20 ಮೀಟರ್ ನೀರಿನ ಅಡಿಯಲ್ಲಿಯು ಇದು ಕಾರ್ಯನಿರ್ವಹಿಸುತ್ತದೆ.
ಜುಲೈ 12 ರಂದು ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ದೂರಿ ವಿವಾಹಕ್ಕೆ ನಟರಾದ ಯಶ್, ರಾಧಿಕಾ ಪಂಡಿತ್, ರಣಬೀರ್ ಕಪೂರ್, ಆಲಿಯಾ ಭಟ್, ಕೃತಿ ಸನೋನ್, ಅನನ್ಯಾಪಾಂಡೆ, ಶನಯಾ ಕಪೂರ್, ಐಶ್ವರ್ಯಾ ರೈ ಅವರ ಮಗಳು ಆರಾಧ್ಯ, ವರುಣ್ ಧವನ್ ಇದ್ದಾರೆ.
ರಣವೀರ್ ಸಿಂಗ್, ರಜನಿಕಾಂತ್, ಅನಿಲ್ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಮತ್ತಿತರು ಪಾಲ್ಗೊಂಡಿದ್ದರು.












Click it and Unblock the Notifications