Anant-Radhika wedding: ಅನಂತ್ ಸ್ನೇಹಿತರಿಗೆ ದುಬಾರಿ ಬೆಲೆಯ ವಾಚ್ ರಿಟರ್ನ್ ಗಿಫ್ಟ್!
ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ಅನಂತ್ ಅಂಬಾನಿ ಮದುವೆ ಸಮರಂಭ ಕಳೆ ಕಟ್ಟಿದೆ. ದೇಶದ ವಿದೇಶದ ಗಣ್ಯರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ತನ್ನ ಬಹುಕಾಲದ ಗೆಳತಿ ರಾಧಿಕಾಳೊಂದಿಗೆ ಹಸೆ ಮಣೆ ಏರಿದ್ದಾರೆ. ಇವರಿಗೆ ಶುಭ ಕೋರಲು ಭಾರತದ ಖ್ಯಾತನಾಮರೆಲ್ಲಾ ಒಂದು ಕಡೆ ಸೇರಿದ್ದಾರೆ.
ಜುಲೈ 13, 2024 ರಂದು ಮಂಗಳಕರ ಆಶೀರ್ವಾದ ಸಮಾರಂಭದ ನಂತರ, ಜುಲೈ 14 ರಂದು ಅಂದರೆ ಇಂದು ಆರತಕ್ಷತೆ ಆಯೋಜಿಸಲಾಗಿದೆ. ಈ ಮದುವೆ ಸಮಾರಂಭದ ಮಧ್ಯ ಅನಂತ್ ಅಂಬಾನಿ ತನ್ನ ಸ್ನೇಹಿತರಿಗೆ ನೀಡಿರುವ ರಿಟರ್ನ್ ಗಿಫ್ಟ್ ಬಹಳ ಚರ್ಚೆಗೆ ಗ್ರಾಸವಾಗಿದೆ. ಅನಂತ್ ಅಂಬಾನಿ ತಮ್ಮ ಆತ್ಮಿಯ ಗೆಳೆಯರಿಗೆ ಸದಾ ಅವರ ಮನಸ್ಸಿನಲ್ಲಿ ಉಳಿಯುವಂತಹ ರಿರ್ಟನ್ ಗಿಫ್ಟ್ ನೀಡಿದ್ದಾರೆ. ಹಾಗಿದ್ದರೆ ಅನಂತ್ ಅಂಬಾನಿ ನೀಡಿರುವ ರಿರ್ಟನ್ ಗಿಫ್ಟ್ ಏನು ಇಲ್ಲಿದೆ ಮಾಹಿತಿ.

ದುಬಾರಿ ಬೆಲೆಯ ವಾಚ್ ಗಿಫ್ಟ್!
ದೇಶದ ಅತ್ಯಂತ ದುಬಾರಿ ಮದುವೆಯ ವೈಭವದ ಕ್ಷಣಗಳು ಈಗಾಗಲೇ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿವೆ. ವಧು ವರರ ಡ್ರೆಸ್ಸಿಂಗ್‌ನಿಂದ ಹಿಡಿದು, ಅಲ್ಲಿ ಬಂದವರ ಫೋಟೋಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ಈ ಮದುವೆಗೆ ಬಂದಿರುವ ಅನಂತ್ ಅಂಬಾನಿ ಅವರ ವಿಶೇಷ ಸ್ನೇಹಿತರಿಗೆ ಭಾರೀ ದೊಡ್ಡ ಗಿಫ್ಟ್ ನೀಡಿದ್ದಾರೆ. ಈ ವೇಳೆ ಅನಂತ್ ತನ್ನ ನೆಚ್ಚಿನ ಸ್ನೇಹಿತರಿಗೆ ಕೋಟಿಗಟ್ಟಲೆ ಮೌಲ್ಯದ ಆಡೆಮಾರ್ಸ್ ಪಿಗೆಟ್ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅನಂತ್ ಅಂಬಾನಿ ಅವರು ಉಡುಗೊರೆಯಾಗಿ ನೀಡಿದ ವಾಚ್‌ಗಳ ಮೌಲ್ಯವನ್ನು ತಿಳಿದರೆ ನೀವು ದಂಗಾಗುತ್ತೀರಿ. ಅನಂತ್ ಅವರು ಒಟ್ಟು 25 ಆಡೆಮಾರ್ಸ್ ಪಿಗೆಟ್ ಪ್ರೀಮಿಯರ್ ಲಿಮಿಟೆಡ್ ಎಡಿಷನ್ ವಾಚ್‌ಗಳನ್ನು ತಯಾರಿಸಿದ್ದಾರೆ, ಇದರ ಬೆಲೆ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ವಾಚ್‌ನಲ್ಲಿ ಏನೆಲ್ಲಾ ವಿಶೇಷತೆ ಇದೆ
ಈ ಮದುವೆಯಲ್ಲಿ ಭಾಗವಹಿಸಿದ ಸ್ಟಾರ್‌ಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಇದರಲ್ಲಿ ಎಲ್ಲರ ಕಣ್ಣು ಕದ್ದಿದ್ದು, ಆ ವಾಚ್.. ಅನಂತ್ ಅವರ ಆಪ್ತರು ದುಬಾರಿ ಆಡೆಮಾರ್ಸ್ ಪಿಗೆಟ್ ವಾಚ್‌ಗಳನ್ನು ತೋರಿಸುವುದನ್ನು ಕಾಣಬಹುದು. ವರ ತಂಡದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ರಣವೀರ್ ಸಿಂಗ್, ವೀರ್ ಪಹಾಡಿಯಾ, ಸಲ್ಮಾನ್ ಖಾನ್, ಮೀಜಾನ್ ಜಾಫ್ರಿ, ಶಿಖರ್ ಪಹಾಡಿಯಾ ಸೇರಿದಂತೆ 25 ಆಪ್ತ ಗೆಳೆಯರಿಗೆ ಈ ಐಷಾರಾಮಿ ವಾಚ್ ಉಡುಗೊರೆ ನೀಡಿದ್ದಾರೆ. ಈ Audemars Piguet ವಾಚ್‌ಗಳ ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, ಅವುಗಳು 18K ಚಿನ್ನದ ಬ್ರೆಸ್‌ಲೈಟ್, ಚಿನ್ನದ ಡಯಲ್ ಮತ್ತು ನೀಲಮಣಿ ಸ್ಫಟಿಕ ಕ್ಯಾಲಿಬರ್ ಅನ್ನು ಹೊಂದಿವೆ.

ಅನಂತ್-ರಾಧಿಕಾ ಆರತಕ್ಷತೆ
ಜುಲೈ 12 ರಂದು ಅನಂತ್-ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ, ಜುಲೈ 13 ರಂದು ದಂಪತಿಗಳ ಮಂಗಳಕರ ಆಶೀರ್ವಾದ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಲ್ಲಿ ದೇಶಾದ್ಯಂತದ ಅನೇಕ ಸೆಲೆಬ್ರಿಟಿಗಳು ಅವರನ್ನು ಆಶೀರ್ವದಿಸಲು ಬಂದರು. ಈ ಜೋಡಿಯ ಆರತಕ್ಷತೆ ಇಂದು ಜುಲೈ 14 ರಂದು ನಡೆಯಲಿದೆ.












Click it and Unblock the Notifications