Amritpal Singh: ಅಮೃತಪಾಲ್ ಸಿಂಗ್ ಜೊತೆಗಿದ್ದ ಆಪ್ತನ ಬಂಧನ- ಪೊಲೀಸ್ ಚೇಸ್‌ನಲ್ಲಿ ಆಗಿದ್ದೇನು?

ಪಂಜಾಬ್‌ನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕಿ ಪರಾರಿಯಾಗಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ. ಆರೋಪಿ ಪಾಪಲ್‌ಪ್ರೀತ್ ಅವರನ್ನು ಹೋಶಿಯಾರ್‌ಪುರದಿಂದ ಬಂಧಿಸಲಾಗಿದೆ.

ಪೊಲೀಸ್ ಸಿಬ್ಬಂದಿ ಪಾಪಲ್‌ಪ್ರೀತ್ ಸಿಂಗ್ ಅವರನ್ನು ಮಂಗಳವಾರ ಮುಂಜಾನೆ ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ನಿನ್ನೆ ಅಮೃತಸರದ ಕತು ನಂಗಲ್ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿತ್ತು. ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದ್ದು, ಅಸ್ಸಾಂನ ದಿಲ್‌ಬುರ್ಗ ಜೈಲಿನಲ್ಲಿ ಇರಿಸಲಾಗಿದೆ.

Amritpal Singh: Arrest of close friend of Amritpal Singh - What happened in the police chase?

ಪರಾರಿಯಾಗುವ ವೇಳೆ ಅಮೃತಪಾಲ್ ಸಿಂಗ್ ಹಾಗೂ ಪಾಪಲ್‌ಪ್ರೀತ್ ಇಬ್ಬರು ಒಟ್ಟಿಗೆ ಇದ್ದರು. ಆದರೆ ಮಾರ್ಚ್ 28 ರಂದು ಪೊಲೀಸ್ ಚೇಸ್‌ನಲ್ಲಿ ಇಬ್ಬರೂ ಬೇರ್ಪಟ್ಟರು ಎಂದು ಪಂಜಾಬ್ ಪೊಲೀಸ್‌ನ ಗುಪ್ತಚರ ಘಟಕದ ಮೂಲಗಳು ತಿಳಿಸಿವೆ. ಅಂದಿನಿಂದ, ಇಬ್ಬರ ನಡುವೆ ಯಾವುದೇ ಸಂಪರ್ಕವಿರಲಿಲ್ಲ.

ಮತ್ತೆ ತಪ್ಪಿಸಿಕೊಂಡ ಅಮೃತಪಾಲ್ ಸಿಂಗ್

ಇಬ್ಬರು ಮಾರ್ಚ್ 27ರಂದು ಹೋಶಿಯಾರ್‌ಪುರದ ನಡಾಲೋನ್ ಗ್ರಾಮದ ಗುರುದ್ವಾರ ಜನಮ್ ಆಸ್ಥಾನ ತಲುಪಿದ್ದಾರೆ ಎಂದು ಪಂಜಾಬ್ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಮಾರ್ಚ್ 28 ರ ಸಂಜೆ ಇಬ್ಬರೂ ಹೊಸ ಸ್ಥಳಕ್ಕೆ ಹೋಗುತ್ತಾರೆ ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿತು. ಇಬ್ಬರೂ ಮತ್ತೊಮ್ಮೆ ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಇಬ್ಬರು ಬೇರೆಯಾಗಿದ್ದರು.

ಮಾರ್ಚ್ 18 ರಂದು ಅಮೃತಪಾಲ್ ಸಿಂಗ್ ಪರಾರಿಯಾದ ನಂತರ, ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗಾಗಿ ಇಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಎರಡು ವಿಭಿನ್ನ ಪೊಲೀಸ್ ತಂಡಗಳು ಕಳೆದ ವಾರ ಹೋಶಿಯಾರ್‌ಪುರದಲ್ಲಿ ಕಾರ್ಯಾಚರಣೆ ನಡೆಸಿದಾಗ ಇಬ್ಬರನ್ನು ಪತ್ತೆ ಮಾಡಿದ್ದರು, ಆದರೆ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಸದ್ಯ ಅಮೃತಪಾಲ್ ಸಿಂಗ್ ಆಪ್ತ ಪಾಪಲ್‌ಪ್ರೀತ್ ನ್ನು ಮಾತ್ರ ಬಂಧಿಸಲಾಗಿದೆ.

Amritpal Singh: Arrest of close friend of Amritpal Singh - What happened in the police chase?

ಏನಿದು ಘಟನೆ?

ಪಂಜಾಬ್‌ನ ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ಖಲಿಸ್ತಾನ್ ಪರ ಸಂಘಟನೆಯೊಂದು ಮುತ್ತಿಗೆ ಹಾಕಿದ ಹಿನ್ನೆಲೆ ವಾರಿಸ್ ಪಂಜಾಬ್‌ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ಸಿಂಗ್‌ನನ್ನು ಅಪಹರಣ ಆರೋಪದ ಮೇಲೆ ಬಂಧಿಸಲಾಗುತ್ತು. ಈತನ ಬಿಡುಗಡೆಗೆ ವಾರಿಸ್ ಪಂಜಾಬ್‌ ದೇ ಸಮುದಾಯದವರು ಪೊಲೀಸ್ ಠಾಣೆ ಮೇಲೆ ಮುತ್ತಿಗೆ ಹಾಕಿದ್ದರು. ಜೊತೆಗೆ ಕತ್ತಿ, ಪಿಸ್ತೂಲ್ ಹಿಡಿದ ಗುಂಪು ಠಾಣೆಯಲ್ಲಿ ಪೊಲೀಸರಿಗೆ ಎಚ್ಚರಿಕೆ ಕೂಡ ಕೊಟ್ಟಿತ್ತು. ಹಾನಿಯಲ್ಲಿ ಅಪಾಯ ಹಾನಿ ಕೂಡ ಸಂಭವಿಸಿದೆ.

ಪಂಜಾಬ್‌ನ ಅಜ್ನಾಲಾ ನ್ಯಾಯಾಲಯವು ಬಂಧಿತ ಲವ್‌ಪ್ರೀತ್ ಸಿಂಗ್‌ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದಂತೆ ಲವ್‌ಪ್ರೀತ್ ಸಿಂಗ್ ಅಲಿಯಾಸ್ ತೂಫಾನ್‌ನನ್ನು ಬಿಡುಗಡೆ ಮಾಡಲಾಗಿದೆ.

ಅಮೃತಪಾಲ್ ಸಿಂಗ್ ಬೆಂಬಲಿಗರು ಕತ್ತಿ ಮತ್ತು ಬಂದೂಕು ಹಿಡಿದು ಬ್ಯಾರಿಕೇಡ್‌ಗಳನ್ನು ಎಳೆದಾಡಿ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್ ಸಿಂಗ್‌ನನ್ನು ಬಿಡುಗಡೆ ಮಾಡಬೇಕೆಂದು ಬೆದರಿಸಿದ್ದಾರೆ. ಈ ಘಟನೆ ವೇಳೆ ಹಲವಾರು ಪ್ರಕರಣಗಳು ಅಮೃತಪಾಲ್ ಸಿಂಗ್ ಮೇಲೆ ಪೊಲೀಸರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಅಮೃತಪಾಲ್ ಸಿಂಗ್ ಪತ್ತೆಗೆ ಪಂಜಾಬ್ ಪೊಲೀಸರು ಬಲೆ ಬೀಸಿದ್ದಾರೆ. ಅಮೃತಪಾಲ್ ಸಿಂಗ್ ವೇಷ ಬದಲಿಸಿಕೊಂಡು ಓಡಾಡುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಇದರ ಆಧಾರದಲ್ಲಿ ಪೊಲೀಸರು ಅಮೃತಪಾಲ್ ಸಿಂಗ್ ಪತ್ತೆಕಾರ್ಯದಲ್ಲಿ ತೊಡಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+