ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯೂಕರ್ ಮೈಕೊಸಿಸ್ ವಿರುದ್ಧ ಹೋರಾಡಲು ಆಂಫೋಟೆರಿಸಿನ್- ಬಿ ಉತ್ಪಾದನೆ ಹೆಚ್ಚಳ

|
Google Oneindia Kannada News

ನವದೆಹಲಿ, ಮೇ 12: ಕೋವಿಡ್ ಸೋಂಕಿನ ನಂತರ ಎದುರಾಗುವ ಮ್ಯೂಕರ್ ಮೈಕೋಸಿಸ್‌ನಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು ಸಕ್ರಿಯವಾಗಿ ಆಂಫೋಟೆರಿಸಿನ್- ಬಿ ನೀಡಲು ಸೂಚಿಸುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಧಿಡೀರ್ ಆ ಔಷಧಕ್ಕೆ ಬೇಡಿಕೆ ಎದುರಾಗಿದೆ. ಇದನ್ನು ಗಮನಿಸಿರುವ ಭಾರತ ಸರ್ಕಾರ, ಆಂಫೋಟೆರಿಸಿನ್- ಬಿ ಔಷಧ ಉತ್ಪಾದನೆ ಹೆಚ್ಚಳಕ್ಕೆ ಉತ್ಪಾದಕರ ಜೊತೆ ಸಮಾಲೋಚನೆಯಲ್ಲಿ ತೊಡಗಿದೆ. ಸ್ಥಳೀಯವಾಗಿ ಉತ್ಪಾದನೆ ಹೆಚ್ಚಳವಾಗುವುದಲ್ಲದೆ, ಆ ಔಷಧವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುವುದರಿಂದ ಪೂರೈಕೆ ಸ್ಥಿತಿ ಸುಧಾರಿಸುವುದೆಂದು ನಿರೀಕ್ಷಿಸಲಾಗಿದೆ.

ಉತ್ಪಾದಕರು/ ಆಮದುದಾರರೊಂದಿಗೆ ದಾಸ್ತಾನು ಸ್ಥಿತಿಗತಿ ಪರಿಶೀಲನೆ ನಡೆಸಿದ ಬಳಿಕ ಮತ್ತು 2021ರ ಮೇ.11ರವರೆಗಿನ ಆಂಫೋಟೆರಿಸಿನ್- ಬಿ ಬೇಡಿಕೆ ಪ್ರವೃತ್ತಿಯನ್ನು ಗಮನಿಸಿದ ಬಳಿಕ ಫಾರ್ಮಾ ಇಲಾಖೆ ಔಷಧ ಲಭ್ಯತೆ ಪೂರೈಕೆ ಅಂದಾಜು ಆಧರಿಸಿ 2021ರ ಮೇ 10ರಿಂದ ಮೇ 31ರವರೆಗೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಔಷಧವನ್ನು ಹಂಚಿಕೆ ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ರಕ್ಷಣಾ ಸಂಸ್ಥೆಗಳ ನಡುವೆ ನ್ಯಾಯಯುತವಾಗಿ ವಿತರಣೆ ಮಾಡಲು ಕಾರ್ಯತಂತ್ರವನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ.

ಕೊರೊನಾ 2ನೇ ಅಲೆ ಜೊತೆಗೆ ಡೆಡ್ಲಿ ಬ್ಲಾಕ್‌ ಫಂಗಸ್‌ ಅಟ್ಯಾಕ್‌ಕೊರೊನಾ 2ನೇ ಅಲೆ ಜೊತೆಗೆ ಡೆಡ್ಲಿ ಬ್ಲಾಕ್‌ ಫಂಗಸ್‌ ಅಟ್ಯಾಕ್‌

ಈ ಔಷಧ ಹಂಚಿಕೆಯಿಂದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಔಷಧವನ್ನು ಪಡೆಯಲು 'ಪಾಯಿಂಟ್ ಆಫ್ ಕಾಂಟ್ಯಾಕ್ಟ್' ಅನ್ನು ಸ್ಥಾಪಿಸಿ ಆ ಬಗ್ಗೆ ಪ್ರಚಾರ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಈಗಾಗಲೇ ಸರಬರಾಜು ಮಾಡಲಾದ ದಾಸ್ತಾನು ಮತ್ತು ಹಂಚಿಕೆಯಾದ ದಾಸ್ತಾನನ್ನು ನ್ಯಾಯಯುತವಾಗಿ ಬಳಸಬೇಕೆಂದು ರಾಜ್ಯಗಳಿಗೆ ವಿನಂತಿಸಲಾಗಿದೆ. ಪೂರೈಕೆಯ ವ್ಯವಸ್ಥೆಗಳ ಬಗ್ಗೆ ರಾಷ್ಟ್ರೀಯ ಫಾರ್ಮಸುಟಿಕಲ್ಸ್ ಬೆಲೆ ನಿಗದಿ ಪ್ರಾಧಿಕಾರ (ಎನ್ ಪಿಪಿಎ) ನಿಗಾ ವಹಿಸಲಿದೆ.

Amphotericin B in demand to fight Mucormycosis

ದೇಶ ಸದ್ಯ ಸಾಂಕ್ರಾಮಿಕದ ಗಂಭೀರ ಅಲೆಯನ್ನು ಎದುರಿಸುತ್ತಿದೆ ಮತ್ತು ಅದರಿಂದ ದೇಶದ ಹಲವು ಭಾಗಗಳು ಬಾಧಿತವಾಗಿವೆ. ಅಗತ್ಯ ಕೋವಿಡ್ ಔಷಧಿಗಳ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಅವುಗಳನ್ನು ಪಾರದರ್ಶಕ ಮತ್ತು ನ್ಯಾಯಯುತ ರೀತಿಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ನಿರಂತರವಾಗಿ ಕಾರ್ಯೋನ್ಮುಖವಾಗಿದೆ.(ಆರೋಗ್ಯ ಸಚಿವಾಲಯ ಪ್ರಕಟಣೆ)

English summary
A sudden increase in demand has been observed in some states for Amphotericin B which is being actively prescribed by the physicians to patients suffering from Mucormycosis, a post COVID complication.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X