ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಬಚ್ಚನ್ 1,000 ಕೋಟಿ ಆಸ್ತಿವಂತೆ, ಅಮಿತಾಬ್ ಬಳಿ 9 ಲಕ್ಷದ ಪೆನ್

By ವಿಕಾಸ್ ನಂಜಪ್ಪ
|
Google Oneindia Kannada News

ಸಮಾಜವಾದಿ ಪಕ್ಷದ ರಾಜ್ಯಸಭಾ ಅಭ್ಯರ್ಥಿ ಜಯಾ ಬಚ್ಚನ್ ಅತ್ಯಂತ ಶ್ರೀಮಂತೆ ಎಂಬುದು ಆಕೆಯ ಅಫಿಡವಿಟ್ ನಿಂದ ತಿಳಿದುಬಂದಿದೆ. ಆಕೆಯ ಆಸ್ತಿ ಮೌಲ್ಯ 1,000 ಕೋಟಿ ರುಪಾಯಿ. ಆ ಮೂಲಕ ಅತ್ಯಂತ ಶ್ರೀಮಂತ ಸಂಸದ ಎಂಬ ಹೆಸರಿರುವ ಬಿಜೆಪಿಯ ರವೀಂದ್ರ ಕಿಶೋರ್ ಸಿನ್ಹಾ ಅವರನ್ನು ಜಯಾ ಬಚ್ಚನ್ ಹಿಂದೆ ಹಾಕಿದ್ದಾರೆ.

ರಾಜ್ಯ ಸಭಾ ಸದಸ್ಯರಾಗಿರುವ ಬಿಜೆಪಿಯ ಸಿನ್ಹಾ 2014ರಲ್ಲಿ 800 ಕೋಟಿ ರುಪಾಯಿಯ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. 2012ರಲ್ಲಿ ಜಯಾ ಬಚ್ಚನ್ 493 ಕೋಟಿ ರುಪಾಯಿಗಳ ಆಸ್ತಿ ಘೋಷಣೆ ಮಾಡಿದ್ದರು. ಇದೀಗ ಹೊಸ ಅಫಿಡವಿಟ್ ನ ಪ್ರಕಾರ ಪತಿ ಅಮಿತಾ ಬ್ ಬಚ್ಚನ್ ರದೂ ಸೇರಿದಂತೆ ಜಯಾ ಹೊಂದಿರುವ ಸ್ಥಿರಾಸ್ತಿ ಮೌಲ್ಯ 460 ಕೋಟಿ ರುಪಾಯಿಗೂ ಹೆಚ್ಚಿದೆ.

ತಮ್ಮ ಆಸ್ತಿ ಹಂಚಿಕೆ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿದ್ದೇನು? ತಮ್ಮ ಆಸ್ತಿ ಹಂಚಿಕೆ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿದ್ದೇನು?

ಜಯಾ ಹಾಗೂ ಅಮಿತಾಬ್ ದಂಪತಿ ಬಳಿಯಿರುವ ಆಭರಣಗಳ ಒಟ್ಟು ಮೌಲ್ಯ 62 ಕೋಟಿ ರುಪಾಯಿ. ಆ ಪೈಕಿ ಹೆಚ್ಚಿನ ಆಭರಣ ಇರುವುದು ಅಮಿತಾಬ್ ಬಳಿಯಲ್ಲೇ. ಅದು 36 ಕೋಟಿ ರುಪಾಯಿಯಷ್ಟು. ಇನ್ನ ಜಯಾ ಬಳಿಯಿರುವ ಆಭರಣದ ಮೌಲ್ಯ 26 ಕೋಟಿ ರುಪಾಯಿ.

Amitabh has a pen worth Rs 9 lakh: Find out what Jaya Bachchan’s affidavit states

ಇನ್ನು ಅಫಿಡವಿಟ್ ನಲ್ಲಿ ಬಹಿರಂಗಪಡಿಸಿರುವಂತೆ ಹದಿಮೂರು ಕೋಟಿ ರುಪಾಯಿ ಮೌಲ್ಯದ ವಾಹನಗಳಿವೆ. ಅದರಲ್ಲಿ ಒಂದು ರೋಲ್ಸ್ ರಾಯ್ಸ್, ಮೂರು ಮರ್ಸಿಡಿಸ್, ಪೋರ್ಶೆ, ರೇಂಜ್ ರೋವರ್ ಇದೆ. ಅಮಿತಾಬ್ ಹೆಸರಲ್ಲಿ ಒಂದು ಟಾಟಾ ನ್ಯಾನೋ ಕಾರು ಹಾಗೂ ಟ್ರ್ಯಾಕ್ಟರ್ ಇದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಮಿತಾಬ್ ಹಾಗೂ ಜಯಾ ಬಳಿ ಇರುವ ವಾಚ್ ಗಳ ಮೌಲ್ಯ ಕ್ರಮವಾಗಿ 3.4 ಕೋಟಿ ಹಾಗೂ 51 ಲಕ್ಷ ರುಪಾಯಿ. ಆಸಕ್ತಿಕರ ಅಂಶ ಏನೆಂದರೆ, ಅಮಿತಾಬ್ ಬಳಿ ಒಂಬತ್ತು ಲಕ್ಷ ರುಪಾಯಿ ಬೆಲೆ ಬಾಳುವ ಪೆನ್ ವೊಂದಿದೆ. 3175 ಚದರ ಮೀಟರ್ ನ ಆಸ್ತಿಯೊಂದು ಫ್ರಾನ್ಸ್ ನಲ್ಲಿದೆ. ಜತೆಗೆ ಗಾಂಧೀನಗರ, ಭೋಪಾಲ್, ನೋಯ್ಡಾ, ಪುಣೆ ಮತ್ತು ಅಹ್ಮದಾಬಾದ್ ನಲ್ಲಿ ಆಸ್ತಿಯಿದೆ.

ಅಮಿತಾಬ್ ಬಳಿ ಮೂರು ಎಕರೆ ಭೂಮಿ ಹಾಗೂ ಜಯಾ ಬಚ್ಚನ್ ಬಳಿ 1.22 ಹೆಕ್ಟೇರ್ ಕೃಷಿ ಭೂಮಿ ಲಖನೌದ ಕಕೋರಿಯಲ್ಲಿ ಇದೆ.

English summary
Jaya Bachchan the Samajwadi Party candidate for the Rajya Sabha could be the richest candidate with assets worth Rs 1,000 crore. She is set to beat Ravindra Kishore Sinha of the BJP as the richest Parliamentarian. Sinha the BJP MP in the Rajya Sabha had declared assets worth Rs 800 crore in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X