Waqf Board: ವಕ್ಫ್ ಮಸೂದೆ ಕದನ, ಸಂಸತ್‌ನಲ್ಲಿ ಅಮಿತ್ ಶಾ ಉತ್ತರ!
'ವಕ್ಫ್ ಮಸೂದೆ' ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ & ವಿರೋಧ ಪಕ್ಷಗಳ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಸಂಸತ್‌ನಲ್ಲಿ ಇಂದು ಬಿಲ್ ಮಂಡನೆಯಾದ ನಂತರ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗಿತ್ತು. ಈ ಸಮಯದಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ವಕ್ಫ್ ಮಸೂದೆ ಕುರಿತು ಉತ್ತರ ನೀಡುತ್ತಾ ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದರು.
ವಕ್ಫ್ ಮಸೂದೆ ಮೂಲಕ ಮುಸ್ಲಿಮೇತರ ಸದಸ್ಯರು ಕೂಡ ಹಸ್ತಕ್ಷೇಪ ಮಾಡಬಹುದು ಎಂಬ ಆರೋಪಕ್ಕೆ ಉತ್ತರ ನೀಡಿದ ಗೃಹ ಸಚಿವ ಅಮಿತ್ ಶಾ ಅವರು, ವಕ್ಫ್ ಆಸ್ತಿಯನ್ನ ತಪ್ಪಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮವನ್ನ ಕೈಗೊಳ್ಳುವುದು ವಕ್ಫ್ ಬೋರ್ಡ್ ಹಾಗೂ ವಕ್ಫ್ ಕೌನ್ಸಿಲ್ ಕೆಲಸವಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ವಕ್ಫ್ ಕಾನೂನಿನ ಅಡಿ ಯಾರಾದರೂ ದಾನ ಮಾಡಿದ ಆಸ್ತಿಯ ಆಡಳಿತ ಮಾತ್ರ ಮುಸ್ಲಿಮೇತರ ಸದಸ್ಯರು ನೋಡಿಕೊಳ್ತಾರೆ. ಆದರೆ ಧಾರ್ಮಿಕ ವ್ಯವಹಾರಗಳ ನಿರ್ವಹಣೆಯನ್ನ ಮಾಡುವಲ್ಲಿ ಮುಸ್ಲಿಮೇತರ ಸದಸ್ಯರ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿರೋಧ ಪಕ್ಷಗಳಿಂದ ಭರ್ಜರಿ ವಾರ್!
'ವಕ್ಫ್ ಮಸೂದೆ' ವಿಚಾರ ಪ್ರಸ್ತಾಪ ಆದ ನಂತರ ದೇಶದಲ್ಲಿ ದೊಡ್ಡ ಕೋಲಾಹಲ ಎದ್ದಿತ್ತು, ಅಲ್ಲದೆ ಎನ್‌ಡಿಎ & ವಿರೋಧ ಪಕ್ಷಗಳ ನಡುವೆ ಈ ವಿಚಾರವಾಗಿ ಯುದ್ಧ ಶುರುವಾಗಿತ್ತು. ಇಂದು ಲೋಕಸಭೆಯಲ್ಲಿ ವಕ್ಫ್ ಬಿಲ್ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವರು, ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದರು. ಅಲ್ಲದೆ ಬಿಲ್ ಬಗ್ಗೆ ಸವಿವರ ಮಾಹಿತಿ ನೀಡುತ್ತಾ, ಇದೇ ವೇಳೆ ವಿರೋಧ ಪಕ್ಷಗಳ ಆರೋಪವನ್ನು ಪಸ್ತಾಪಿಸಿದರು.












Click it and Unblock the Notifications