ಉ. ಪ್ರದೇಶ ಸಿಎಂ ಯಾರೆಂಬ ಗುಟ್ಟು ಬಿಟ್ಟುಕೊಡದ ಅಮಿತ್ ಶಾ
ನವದೆಹಲಿ, ಮಾರ್ಚ್ 11: ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲಿರುವ ಬಿಜೆಪಿ ಪಕ್ಷದ ಪರವಾಗಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವವರು ಯಾರು ಎಂಬುದು ಇನ್ನೂ ಗುಟ್ಟಾಗಿಯೇ ಉಳಿದಿದೆ.
ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ ಕೂಡ, ಈ ಗುಟ್ಟನ್ನು ಬಿಟ್ಟುಕೊಡಲಿಲ್ಲ. ನಾಳೆ (ಮಾ. 12ರಂದು) ಉತ್ತರ ಪ್ರದೇಶ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಅದರಲ್ಲಿ ಮುಖ್ಯಮಂತ್ರಿಯನ್ನು ಆರಿಸುವುದಾಗಿ ಅವರು ತಿಳಿಸಿದರು.

ಅದೇ ವೇಳೆ, ಉತ್ತರ ಪ್ರದೇಶ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು, ಪ್ರಗತಿ ಪರ ಸರ್ಕಾರ ಬೇಕಿದ್ದರಿಂದಲೇ ಅಲ್ಲಿನ ಜನ ಬಿಜೆಪಿ ಮತ ಹಾಕಿದ್ದಾರೆಂದು ಹೇಳಿದರು.












Click it and Unblock the Notifications