ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಶಾ

ಉನಾ (ಹಿಮಾಚಲ ಪ್ರದೇಶ), ಜನವರಿ 28: ಕಾಂಗ್ರೆಸ್ ಪಕ್ಷ ಕೇವಲ ರಾಹುಲ್ ಮತ್ತು ಪ್ರಿಯಾಂಕಾ ರಾಜಕೀಯ ಉನ್ನತಿಗಾಗಿ ಮಾತ್ರವೇ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದರು.

ಹಿಮಾಚಲ ಪ್ರದೇಶದ ಉನಾನಲ್ಲಿ ಅವರು ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರವು ಓಆರ್‌ಓಪಿ (ಒನ್ ರ್ಯಾಂಕ್, ಒನ್ ರ್ಯಾಂಕ್ ಪೆನ್ಷನ್‌) ನೀಡಿತು. ಆದರೆ ಕಾಂಗ್ರೆಸ್‌ 'ಓನ್ಲಿ ರಾಹುಲ್ ಓನ್ಲಿ ಪ್ರಿಯಾಂಕ್' ಎನ್ನುತ್ತಿದೆ ಎಂದು ವ್ಯಂಗ್ಯ ಮಾಡಿದರು.

ಜೆಎನ್‌ಯು ನಲ್ಲಿ ದೇಶವಿರೋಧಿ ಘೋಷಣೆ ಕೂಗಿದವರ ಬೆನ್ನನ್ನು ರಾಹುಲ್ ಗಾಂಧಿ ತಟ್ಟುತ್ತಿದ್ದಾರೆ. ನೀವು ನನ್ನ ನಾಯಕನನ್ನು ಬೈದರೂ ಸಹಿಸಿಕೊಳ್ಳುತ್ತೇವೆ ಆದರೆ ದೇಶವನ್ನು ಒಡೆಯಲು ಪ್ರಯತ್ನಿಸಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಅಮಿತ್ ಶಾ ಅಬ್ಬರಿಸಿದರು.

Amit Shah lambasted on Rahul Gandhi and Mahagatabandhan in Una

ರಾಹುಲ್ ಗಾಂಧಿ ಅವರು ತಮ್ಮ ಭಾಷಣಗಳಲ್ಲಿ ಬಡತನದ ಬಗ್ಗೆ ಮಾತನಾಡುತ್ತಾರೆ ಆದರೆ 55 ವರ್ಷಗಳಿಂದ ಕಾಂಗ್ರೆಸ್ ಆಡಳಿತದಲ್ಲಿದೆ ಹಾಗಿದ್ದರೆ ಏಕೆ ಅವರು ಬಡತನ ನಿರ್ಮೂಲನೆ ಮಾಡಲಿಲ್ಲ ಎಂದು ಅವರು ಹೇಳಿದರು.

ಮೋದಿ ಅವರು 'ಮೇಕ್‌ ಇನ್ ಇಂಡಿಯಾ' ಬಗ್ಗೆ ಮಾತನಾಡುತ್ತಿದ್ದರೆ, ರಾಹುಲ್ ಅವರು 'ಬ್ರೇಕ್ ಇನ್ ಇಂಡಿಯಾ' ದಲ್ಲಿ ನಿರತರಾಗಿದ್ದಾರೆ. ಭಾರತದಕ್ಕೆ ಸುಭದ್ರವಾದ ಸರ್ಕಾರ ಬೇಕೇ ಹೊರತು ಅವಕಾಶವಾದಿ ಸರ್ಕಾರ ಬೆಕಿಲ್ಲ ಎಂದು ಮಹಾಘಟಬಂಧನ್ ಅನ್ನು ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+