ರೈತ ನೀತಿಯಲ್ಲಿ ಹಿನ್ನಡೆಯಾದರೂ ರೈತರ ಕಲ್ಯಾಣ ವಿಚಾರದಲ್ಲಿ ಕೇಂದ್ರದ ಬದ್ಧತೆ ಅಚಲ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಗಾಗ ಕೃಷಿ ನೀತಿ ವಿಚಾರದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿರುವುದನ್ನು ಕಾಣಬಹುದು. ಇದರಲ್ಲಿ ಗಮನಾರ್ಹನಾದ ವಿವಾದ ಎಂದರೆ 2020ರಲ್ಲಿ ಜಾರಿಗೆ ತಂದ ಮೂರು ರೈತ ನೀತಿಗಳು. ಇವುಗಳು ಹರ್ಯಾಣ ಮತ್ತು ಪಂಜಾಬ್‌ನಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾದವು.
ವಿಮರ್ಶಕರು ಸರ್ಕಾರ ರೈತ ವಿರೋಧಿ ಎಂಬ ಪಟ್ಟ ಕಟ್ಟಿದರು. ಇದು ಕಾರ್ಪೊರೇಟ್ ಹಿತಾಸಕ್ತಿ ಕಾಪಾಡುವ ಮತ್ತು ಕೃಷಿ ವರ್ಗದ ಖರ್ಚನ್ನು ಹೆಚ್ಚಿಸಲಿದೆ ಎಂದು ಆರೋಪಿಸಲಾಯಿತು. ಆದಾಗ್ಯೂ ಕೆಲವು ದಿನಗಳ ಹಿಂದೆ ರೈತರ ಜೀವನಮಟ್ಟವನ್ನು ಸುಧಾರಿಸುವ ಏಳು ಪ್ರಮುಖ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ, ಇದು ರೈತ ವಿರೋಧಿ ಎಂಬ ನಿರೂಪಣೆಯನ್ನು ಕಡಿಮೆಯಾಗುವಂತೆ ಮಾಡುತ್ತಿದೆ. ಹಲವರು ಕೇಂದ್ರ ರೈತರ ವಿಚಾರದಲ್ಲಿ ಹೊಂದಿರುವ ಬದ್ಧತೆ ತೋರಿಸುತ್ತಿದೆ ಎಂದು ಹೇಳುತ್ತಿದ್ದಾರೆ.

ರೈತ ನೀತಿ ವಿವಾದ: ತಪ್ಪು ಮಾಹಿತಿ ಅಥವ ತಪ್ಪು ತಿಳುವಳಿಕೆ?
ಮೂರು ರೈತ ನೀತಿಗಳನ್ನು ಮೊದಲು ಸರ್ಕಾರ ರೈತರನ್ನು ಸಬಲೀಕರಣಗೊಳಿಸಲು ಇಟ್ಟ ಕ್ರಾಂತಿಕಾರಿ ಹೆಜ್ಜೆ ಎಂದು ಚಿತ್ರಿಸಲಾಯಿತು. ಈ ನೀತಿ ರೈತರು ಗುತ್ತಿಗೆ ಆಧಾರದಲ್ಲಿ ವ್ಯವಸಾಯ ಮಾಡುತ್ತಾ ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೆ ಸಹ ಮಾರಾಟ ಮಾಡಲು ಅನುಮತಿ ನೀಡಿತ್ತು. ಅಗತ್ಯ ಸರಕುಗಳ ದಾಸ್ತಾನಿನ ಮಿತಿಯನ್ನು ತೆಗೆದು ಹಾಕಿತ್ತು. ಈ ಬದಲಾವಣೆ ರೈತರಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿತು. ಆದಾಗ್ಯು ಇದು ರೈತರು ಆಕ್ರೋಶಗೊಳ್ಳುವಂತೆ ಮಾಡಿತು ಪ್ರಾಥಮಿಕವಾಗಿ ಇದು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ರದ್ದುಗೊಳಿಸುವ, ದೊಡ್ಡ ಕಂಪನಿಗಳಿಂದ ರೈತರನ್ನು ಶೋಷಿಸುವ ವ್ಯವಸ್ಥೆ ಎಂದು ಗ್ರಹಿಸಲಾಯಿತು.
ಪ್ರತಿಭಟನೆ ತೀವ್ರಗೊಂಡಿತು ಮತ್ತು ಸುಧೀರ್ಘ ಅವಧಿ ತನಕ ಸಾಗಿತು. ಮಾಧ್ಯಮಗಳಲ್ಲಿ ಸರ್ಕಾರ ಕೃಷಿ ಸಮುದಾಯದ ಕಾಳಜಿಯಿಂದ ದೂರವಿದೆ ಎಂದು ಬಿಂಬಿಸುವಂತೆ ಮಾಡಿತು. ವಿರೋಧ ಪಕ್ಷಗಳು ಬಿಜೆಪಿಯನ್ನು ಕಾರ್ಪೊರೇಟ್ ಕಂಪನಿಗಳ ರಕ್ಷಕ ಎಂದು ಹಣೆಪಟ್ಟಿ ಕಟ್ಟುವಂತೆ ಮಾಡಿತು. ಇದಕ್ಕೆ ಪ್ರತಿಯಾಗಿ ಒತ್ತಡ ಹೆಚ್ಚಾಯಿತು. ಪ್ರಧಾನಿ ನರೇಂದ್ರ ಮೋದಿ 2021ರ ನವೆಂಬರ್‌ನಲ್ಲಿ ಅಭೂತಪೂರ್ವವಾದ ಹೆಜ್ಜೆ ಇಟ್ಟರು, ನೀತಿಗಳನ್ನು ವಾಪಸ್ ಪಡೆದರು. ಈ ನಡೆಯನ್ನು ಹಲವರು ರಾಜಕೀಯವಾಗಿ ಅಗತ್ಯವಾಗಿದ್ದು ಎಂದು ನೋಡಿದರು, ಆದರೆ ಸಾರ್ವಜನಿಕ ಗ್ರಹಿಕೆ ವಿಚಾರದಲ್ಲಿ ವಿರೋಧ ಪಕ್ಷಗಳ ನಿರೂಪಣೆಯ ಕುರಿತು ಪ್ರಶ್ನೆಗಳನ್ನು ಎತ್ತಿತು.
ಹೊಸ ಕ್ರಮಗಳು: ಸ್ಪಷ್ಟವಾಗಿ ರೈತಪರ ಕಾರ್ಯಸೂಚಿ
ರೈತ ನೀತಿಗಳ ವಿಚಾರದಲ್ಲಿ ಹಿನ್ನಡೆಯಾದರೂ ಸಹ ಮೋದಿ ಸರ್ಕಾರ ರೈತರ ಕಲ್ಯಾಣದ ವಿಚಾರಕ್ಕೆ ಆದ್ಯತೆ ನೀಡುತ್ತಲೇ ಬಂದಿತು, ಇದಕ್ಕೆ ಸಾಕ್ಷಿ ಎಂಬಂತೆ ಇರುವುದು ಸುಮಾರು 13,966 ಕೋಟಿಗಳ ಒಟ್ಟು ವೆಚ್ಚದ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಲಾದ 7 ಪ್ರಮುಖ ಯೋಜನೆಗಳು. ಈ ಕ್ರಮಗಳು ಕೃಷಿ ಕ್ಷೇತ್ರ ಎದುರಿಸುತ್ತಿರುವ ಅಸ್ಥಿರತೆ, ಆದಾಯ ವರ್ಧನೆ, ತಾಂತ್ರಿಕ ಪ್ರಗತಿ ಸೇರಿದಂತೆ ಬಹುಮುಖಿ ಸವಾಲುಗಳನ್ನು ಎದುರಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತಿವೆ.
ಡಿಜಿಟಲ್ ಕೃಷಿ ಮಿಷನ್
ಈ ಉಪಕ್ರಮಗಳು 2,817 ಕೋಟಿ ಅನುದಾನ ನಿಗದಿಗೊಳಿಸಲಾದ ಡಿಜಿಟಲ್ ಕೃಷಿ ಮಿಷನ್ ಮುಂಚೂಣಿಯಲ್ಲಿ ಸಾಗುವಂತೆ ಮಾಡುತ್ತದೆ. ಕೃತಕ ಬುದ್ಧಿ ಮತ್ತೆ, ಭೋಗೋಳದ ತಂತ್ರಜ್ಞಾನ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ಕ್ರಾಂತಿಕಾರಿ ಬದಲಾವಣೆ ತರುವ ಗುರಿಯನ್ನು ಮಿಷನ್ ಹೊಂದಿದೆ. ಕೃಷಿ ಅಂಕಿಅಂಶಗಳ ಸಮಗ್ರ ಡಿಜಿಟಲ್ ಸಂಗ್ರಹಣೆ, ರೈತ ನೋಂದಣಿ ಹಾಗೂ ಗ್ರಾಮ ಭೂಮಿಯ ನಕ್ಷೆಗಳ ನೋಂದಣಿ ಸ್ಥಾಪನೆಯು ಕೃಷಿಯ ನಿರ್ವಹಣೆ ಮತ್ತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲಿದೆ. ರೈತರನ್ನು ನೇರವಾಗಿ ಖರೀದಿದಾರರೊಂದಿಗೆ ಸಂಪರ್ಕಿಸುವ ಮೂಲಕ ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡಲು, ರೈತರಿಗೆ ಅವರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರಕುವಂತೆ ಮಾಡುವುದನ್ನು ಖಚಿತಪಡಿಸುವ ಉದ್ದೇಶವನ್ನೂ ಹೊಂದಿದೆ.
ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಗೆ ಬೆಳೆ ವಿಜ್ಞಾನ
ಸುಮಾರು 3,979 ಕೋಟಿಯ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಗೆ ಬೆಳೆ ವಿಜ್ಞಾನ ಯೋಜನೆ ಸರ್ಕಾರದ ಮತ್ತೊಂದು ಮಹತ್ವದ ಸರ್ಕಾರದ ತಂತ್ರವಾಗಿದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಬಲಪಡಿಸುವ ಮೇಲೆ ಇದು ಗಮನಹರಿಸಲಿದೆ. ಅನುವಂಶಿಕ ಅಭಿವೃದ್ಧಿ ಮತ್ತು ಸಂಪನ್ಮೂಲ ನಿರ್ವಹಣೆಗೆ ಒತ್ತು ನೀಡುವ ಮೂಲಕ, ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳಿಗೆ ರೈತರನ್ನು ಸಿದ್ಧಗೊಳಿಸುತ್ತದೆ. ಈ ಯೋಜನೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರದ, ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಖಚಿತಗೊಳಿಸುತ್ತದೆ.
ಕೃಷಿ ಶಿಕ್ಷಣ ಮತ್ತು ಪಶು ಆರೋಗ್ಯ ಬಲಪಡಿಸುವುದು
ಕೃಷಿಯಲ್ಲಿ ಶಿಕ್ಷಣ ಮತ್ತು ಪಶುಗಳ ಮಹತ್ವವನ್ನು ಗುರುತಿಸಿ, ಸರ್ಕಾರವು 2,291 ಕೋಟಿ ರೂ.ಗಳನ್ನು ಕೃಷಿ ಶಿಕ್ಷಣ, ನಿರ್ವಹಣೆ ಮತ್ತು ಸಾಮಾಜಿಕ ವಿಜ್ಞಾನಗಳನ್ನು ಬಲಪಡಿಸಲು ನಿಗದಿಗೊಳಿಸಿದೆ ಮತ್ತು 1,702 ಕೋಟಿ ರೂ.ಗಳನ್ನು ಸ್ಥಿರ ಪಶು ಆರೋಗ್ಯ ಮತ್ತು ಉತ್ಪಾದನಾ ಯೋಜನೆಗೆ, ಜಾನುವಾರುಗಳ ಆರೋಗ್ಯ, ಉತ್ಪಾದನಾ ಯೋಜನೆಗಳಿಗೆ ಮೀಸಲಿಟ್ಟಿದೆ. ಈ ಕ್ರಮಗಳು ಮುಂದಿನ ತಲೆಮಾರಿನ ಕೃಷಿ ವೃತ್ತಿಪರರಿಗೆ ಉನ್ನತ ಕೌಶಲ್ಯಗಳನ್ನು ನೀಡಲು ಮತ್ತು ಪಶುಗಳ ಅನುವಂಶಿಕ ಸುಧಾರಣೆಯನ್ನು ಉತ್ತೇಜಿಸುವ ಜೊತೆಗೆ ಭಾರತದಲ್ಲಿ ಕೃಷಿ ಸ್ಪರ್ಧಾತ್ಮಕವಾಗಿ ಹಾಗೂ ಸ್ಥಿರವಾಗಿಯೂ ಉಳಿಯುವಂತೆ ಖಚಿತಪಡಿಸುತ್ತದೆ.
ತೋಟಗಾರಿಕೆ ಅಭಿವೃದ್ದಿ ಮತ್ತು ನೈಸಗಿಕ ಸಂಪತ್ತು ನಿರ್ವಹಣೆ
ತೋಟಗಾರಿಕೆ ಯೋಜನೆಗಳ ಮೂಲಕ ರೈತರ ಸುಸ್ಥಿರ ಅಭಿವೃದ್ಧಿಗೆ ಸ್ಪಷ್ಟವಾದ ಒತ್ತನ್ನು ನೀಡುವ ಮೂಲಕ ರೈತರ ಆದಾಯ ವೃದ್ಧಿಗೊಳಿಸುವುದು ಸರ್ಕಾರದ ಗುರಿಯಾಗಿದೆ ಇದಕ್ಕಾಗಿ 860 ಕೋಟಿ ಹಂಚಿಕೆ ಮಾಡಲಾಗಿದೆ. ವಿವಿಧ ತೋಟಗಾರಿಕಾ ಬೆಳೆಗಳ ವ್ಯವಸಾಯಕ್ಕೆ ಉತ್ತೇಜನ ನೀಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲಾಗುತ್ತದೆ. ಜೊತೆಗೆ, 1,115 ಕೋಟಿ ಬಜೆಟ್‌ನ ನೈಸರ್ಗಿಕ ಸಂಪತ್ತು ನಿರ್ವಹಣಾ ಯೋಜನೆ ಪರಿಸರವನ್ನು ಸಂರಕ್ಷಿಸುವ ಜೊತೆಗೆ ದೀರ್ಘಕಾಲದ ಸ್ಥಿರತೆ ಖಚಿತಪಡಿಸುವ ಸರ್ಕಾರದ ಬದ್ಧತೆಯನ್ನು ತಿಳಿಸುತ್ತದೆ.
ಬಿಜೆಪಿ ರೈತ ವಿರೋಧಿ ಎಂಬ ನಿರೂಪಣೆ ಅಂತ್ಯ
ಮೋದಿ ಸರ್ಕಾರ ರೈತ ವಿರೋಧಿಯಾಗಿದೆ ಎಂಬ ವಿರೋಧ ಪಕ್ಷಗಳ ಹಲವು ವರ್ಷಗಳ ಆರೋಪವನ್ನು ಈ ಹೊಸ ನೀತಿಗಳ ಅನುಮೋದನೆ ಅಂತ್ಯಗೊಳಿಸುವಂತೆ ಮಾಡುತ್ತಿದೆ. ಈ ಯೋಜನೆಗಳ ಮಹತ್ತರ ಹಣಕಾಸು ವೆಚ್ಚಗಳು ರೈತರ ಜೀವನ ಮತ್ತು ಜೀವನೋಪಾಯ ಸುಧಾರಿಸಲು ಸ್ಪಷ್ಟವಾದ ಬದ್ಧತೆಯನ್ನು ತೋರಿಸುತ್ತದೆ. ರೈತ ನೀತಿಗಳ ವಿಚಾರದಲ್ಲಿ ಸರ್ಕಾರದ ಚಿತ್ರಣಕ್ಕೆ ತಾತ್ಕಾಲಿಕ ಹೊಡೆತ ನೀಡಿದವು. ದೀರ್ಘಕಾಲದ ಪರಿಣಾಮ ಹೊಂದಿರುವ ಈ ಹೊಸ ಯೋಜನೆಗಳು ಬಿಜೆಪಿ ರೈತ ಪರ ಎಂಬ ನಿರೂಪಣೆಯನ್ನು ಪುನಃ ಸ್ಥಾಪಿಸುವ ಆಶಯವಿದೆ.












Click it and Unblock the Notifications